ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆಟಗಳು ಏಕೆ ಮುಖ್ಯ?

ಡಾ. ಸತ್ಯಮೂರ್ತಿ
Published 30 ಆಗಸ್ಟ್ 2024, 22:36 IST
Last Updated 30 ಆಗಸ್ಟ್ 2024, 22:36 IST
ಅಕ್ಷರ ಗಾತ್ರ

ಕ್ರೀಡಾ ಚಟುವಟಿಕೆಗಳಿಲ್ಲದ ಶಿಕ್ಷಣ ಪರಿಪೂರ್ಣ ಶಿಕ್ಷಣವಾಗಲಾರದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ದೈಹಿಕ ಚಟುವಟಿಕೆಗಳು ಅನಿವಾರ್ಯ ಹಾಗೂ ಕಡ್ಡಾಯ.

‘ದೈಹಿಕ ಚಟುವಟಿಕೆಗಳು ದೇಹಕ್ಕೆ ನೀಡುವ ಶಿಕ್ಷಣ ವಾಗಿದ್ದು ಇದರಿಂದ ವಿದ್ಯಾರ್ಥಿಗಳಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಬದಲಾವಣೆಗೆ ಒತ್ತು ನೀಡುತ್ತದೆ . ವಿದ್ಯಾರ್ಥಿಗಳು ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ಪಠ್ಯ ಚಟುವಟಿಕೆಗಳಲ್ಲಿ ನಿರತರಾಗಿರುವುದರಿಂದ ಅವರ ಮನಸ್ಸಿಗೆ ಮುದ ಅಥವಾ ಆರಾಮ ಅನಿವಾರ್ಯವಾಗಿರುತ್ತದೆ.

ಈ ನಿಟ್ಟಿನಲ್ಲಿ ಮನಸ್ಸನ್ನು ಮುದ ಗೊಳಿಸಲು ಸಮಯವನ್ನು ಮೀಸಲಿರಿಸಿರಬೇಕಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಆಟೋಟಗಳಲ್ಲಿ ಭಾಗವಹಿಸುವುದು ಗುಂಪುಗಳೊಂದಿಗೆ ಬೆರೆತು ನಲಿಯುವುದನ್ನು ರೂಢಿಸಿಕೊಂಡಾಗ ಮಾನಸಿಕ ಹಾಗೂ ದೈಹಿಕ ನೋವು, ದುಗುಡ, ದುಮಾನಗಳು ಎಲ್ಲವೂ ಮಂಜಿನಂತೆ ಕರಗಿ ಮಕ್ಕಳ ಮನಸ್ಸಲ್ಲಿ ನವೊಲ್ಲಾಸ ಮೂಡುತ್ತದೆ. ಎಂದು ಜೀವನ ಶೈಲಿಯ ವರದಿ ಇದಕ್ಕೆ ಪುಷ್ಠಿ ನೀಡುತ್ತದೆ.

ದೈಹಿಕ ಚಟುವಟಿಕೆ ಹಾಗೂ ಆಟಗಳು ಮಕ್ಕಳ ಆರೋಗ್ಯವನ್ನು ವೃದ್ಧಿಸಿ ಕಾಯಿಲೆಗಳಿಂದ ದೂರವಿರಿಸಿ ಸುಂದರ ಜೀವನ ನಡೆಸಲು ಸಹಕರಿಸುತ್ತವೆ.
ದೈಹಿಕ ಚಟುವಟಿಕೆಗಳಲ್ಲಿ ಒಂದಾದ ಸ್ಕ್ವಾಟ್ ಇದರ ಅಭ್ಯಾಸದಿಂದ ಆಗುವ ಪ್ರಯೋಜನಗಳನ್ನು ಕೆಳಕಂಡಂತೆ ನೋಡೋಣ.
  ಸ್ಕ್ವಾಟ್ ಇದರ ಅಭ್ಯಾಸವು ದೇಹದಲ್ಲಿ ಅನವಶ್ಯಕ ಪೋಷಕಾಂಶಗಳನ್ನು ಹೊರದೂಡುತ್ತದೆ.

ಇದರ ಅಭ್ಯಾಸದಿಂದ ದೇಹದ ಬಾಗುವಿಕೆಗೆ ಸಹಕಾರಿಯಾಗಿರುವುದರ ಜೊತೆಗೆ ದೇಹದ ಕೆಳಭಾಗವು ಗಟ್ಟಿಯಾಗುತ್ತದೆ. 

 ಜೀರ್ಣಕ್ರಿಯೆಗೆ ಅತ್ಯುತ್ತಮ ವ್ಯಾಯಾಮ ಇದಾಗಿದ್ದು ಹೊಟ್ಟೆಯ ಒಳಭಾಗದ ಅಂಗಾಂಗಗಳು ಹಾಗೂ ಕರುಳಿನ ಕಾರ್ಯಕ್ಷಮತೆಗೆ ಸಹಕರಿಸುತ್ತದೆ. 

ದೇಹದ ಒಳ ಮಾಂಸ ಖಂಡಗಳು ಬಲಿಷ್ಠಗೊಂಡು ಹೊಟ್ಟೆಯ ಮಾಂಸ ಖಂಡ ಅಥವಾ ಸ್ನಾಯುಗಳು ಶಕ್ತಿಯುತಗೊಂಡು ಕಾರ್ಯನಿರ್ವಹಿಸುತ್ತದೆ. ಈ ನಿಟ್ಟಿನಲ್ಲಿ ದೈಹಿಕ ಚಟುವಟಿಕೆ ಹಾಗೂ ಆಟಗಳ ಹಿನ್ನೆಲೆಯನ್ನು ತಿಳಿಯೋಣ.

ಮನೋಲಾಸ ಕ್ರೀಡೆ ಹಾಗೂ ಆಟಗಳು ಮನುಷ್ಯನಿಗೆ ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳಿಗೂ ಸಹಜವಾಗಿದ್ದು, ಪ್ರಕೃತಿಯು ಕರುಣಿಸಿರುವ ಒಂದು ವರದಾನವಾಗಿದೆ.

ಉದಾಹರಣೆಗೆ ಬೆಕ್ಕು ತನ್ನ ಮರಿಗಳೊಂದಿಗೆ ಆಟ ಆಡುವುದು,ನಾಯಿ ತನ್ನ ಮರಿಗಳೊಂದಿಗೆ ಆಟ ಆಡುವುದು ಹಾಗೂ ಪಕ್ಷಿಗಳೂ ಸಹ ತಮ್ಮ ಮರಿಗಳೊಂದಿಗೆ ರೆಕ್ಕೆ ಬಡಿಯಲು ಹಾರಲು ಕಲಿಸುವ ರೂಪದಲ್ಲಿ ಅತ್ಯಂತ ಮೇಲಕ್ಕೆ ಹೊಯ್ದು ನಂತರ ಬಿಡುತ್ತವೆ ತದನಂತರ ಹಿಡಿದುಕೊಳ್ಳುತ್ತವೆ ಈ ರೀತಿಯಾಗಿ ಅವೂ ಸಹ ಪ್ರಕೃತಿಗೆ ಸಹಜವಾಗಿ ಆಟ ಆಡುತ್ತವೆ. ಹೀಗೆ ಹುಲಿ ಸಿಂಹ ಎಲ್ಲಾ ಪ್ರಾಣಿಗಳು ಕೂಡ ಬೇಟೆ ಕಲಿಸುವ ರೂಪದಲ್ಲಿ ತಮ್ಮ ಮರಿಗಳೊಂದಿಗೆ ಆಟ ಆಡುವುದು ಮಾತ್ರವಲ್ಲದೆ ವಿವಿಧ ಪ್ರಾಣಿ ಪಕ್ಷಿಗಳಿಗೆ ಆಟಗಳು ಪ್ರಕೃತಿ ನೀಡಿದ ವರದಾನವಾಗಿದೆ.

ಸದೃಢತೆ ಬಗ್ಗೆ ತಜ್ಞರ ಅಭಿಪ್ರಾಯಗಳು


 ದೈಹಿಕ ಚಟುವಟಿಕೆಗಳನ್ನು ಮುಂದುವರೆಸಿದಾಗ ಫಿಟ್ನೆಸ್ ಅಥವಾ ಸದೃಢತೆ ಎನ್ನುವುದು ಕೇವಲ ಆಟಗಾರರಿಗೆ ಮಾತ್ರವಲ್ಲ ಗಾಯಕರಿಂದ ಹಿಡಿದು ಬಿಸಿಲಿನಲ್ಲಿ ವಾಹನ ಸಂಚಾರ ನಿಯಂತ್ರಿಸುವ ಸಂಚಾರ ಪೊಲೀಸರಿಂದ ಹಿಡಿದು ಹೊಲದಲ್ಲಿ ಕಷ್ಟಪಟ್ಟು ದುಡಿಯುವ ರೈತ ರವರೆಗೂ ಸದೃಢತೆ ಮುಖ್ಯ.

ಸದೃಢತೆ ಇದು ಕೇವಲ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಮಾತ್ರವೇ ಸೀಮಿತವಲ್ಲ ದಾಗಿದ್ದು ಸಮಗ್ರ ಮನೋ ದೈಹಿಕ ವ್ಯವಸ್ಥೆಗೆ ಸಂಬಂಧಿಸಿದಾಗಿದೆ.

ಯಾವ ವಿದ್ಯಾರ್ಥಿಗಳು ತಮ್ಮನ್ನು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲವೋ, ಅಂತಹವರಲ್ಲಿ ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆ ಏರು ಗತಿಯಲ್ಲಿ ಸಾಗುತ್ತಿದ್ದು , ಪ್ರತಿ ಶಾಲೆಯಲ್ಲಿ ಶೇಕಡ 30ರಷ್ಟು ಮಕ್ಕಳು ಸ್ಥೂಲಕಾಯ ಸಮಸ್ಯೆಯನ್ನು ಎದುರಿಸುತ್ತಿದ್ದು ಅಂತವರಲ್ಲಿ ಮಧುಮೇಹ,ಅಧಿಕ ರಕ್ತದೊತ್ತಡ, ಹೃದಯಘಾತ ಅತಿ ಹೆಚ್ಚು ಜಿಡ್ಡು ಉಂಟಾಗಿ ಅತೀ ಬೇಗನೆ ಅಂತಹವರು ಸಾವಿಗೆ ಶರಣಾಗುತ್ತಾರೆ.

ಮಿದುಳಿನಲ್ಲಿ ರಕ್ತಸ್ರಾವ, ಪಾರ್ಶ್ವವಾಯು, ಉಸಿರಾಟದ ಸಮಸ್ಯೆ ಹಾಗೂ ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಕಳವಳ ವ್ಯಕ್ತಪಡಿಸುತ್ತಾರೆ.

ದೇಹ ಹಾಗೂ ಮನಸ್ಸು ಸದಾ ಉಲ್ಲಸಿತ ವಾಗಿರಬೇಕಾದರೆ ಅದಕ್ಕೆ ಪೂರಕವಾದ ವ್ಯಾಯಾಮಗಳನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು.

ಒಟ್ಟಾರೆ ಹೇಳುವುದಾದರೆ ದೈಹಿಕ ಚಟುವಟಿಕೆ ಅಥವಾ ಆಟಗಳಿರುವುದು ಮನುಷ್ಯನ ಏಳಿಗೆಗೆ, ಜೀವನವನ್ನು ಉಪಯುಕ್ತಗೊಳಿಸಿಕೊಂಡು ಬದುಕು ಸಾಧಿಸಲಿಕ್ಕಾಗಿ ಎನ್ನುವ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯವನ್ನು ಕಟ್ಟಿಕೊಡಲು ಆಟಗಳು ಪ್ರೇರಣಾತ್ಮಕ ಸಾಧನಗಳಾಗಿದ್ದು ಸರಿಯಾದ ರೀತಿಯಲ್ಲಿ ಸದ್ವಿನಿಯೋಗ ಮಾಡಿಕೊಂಡಾಗ ವಿದ್ಯಾರ್ಥಿಗಳು ಜೀವನದಲ್ಲಿ ಸಾರ್ಥಕ್ಯವನ್ನು ಹೊಂದಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT