ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

556 ಪಿಎಸ್‌ಐ ನೇಮಕಕ್ಕೆ ಅರ್ಜಿ: ಈ ಬಾರಿ ಸಂದರ್ಶನ ಇಲ್ಲ

Last Updated 16 ಮೇ 2020, 11:11 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 556 ‍ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಸಿವಿಲ್ ಪಿಎಸ್‌ಐ) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೊಸ ಅಭ್ಯರ್ಥಿಗಳು ಹಾಗೂ ಸೇವಾನಿರತ ಪೊಲೀಸರು ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕದ 431 ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿಯಲ್ಲಿ 125 ಹುದ್ದೆಗಳ ನೇಮಕಾತಿ ಆಗಲಿದೆ. ಜೂನ್ 1ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಜೂನ್ 31 ಅರ್ಜಿ ಸಲ್ಲಿಸಲು ಕೊನೆ ದಿನ.

ಪದವಿ ಹಾಗೂ ತತ್ಸಮಾನ ವಿದ್ಯಾರ್ಹತೆಯುಳ್ಳ ಕನಿಷ್ಠ 21 ವರ್ಷ ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗಳಿಗೆ 28 ವರ್ಷ ಹಾಗೂ ‍ಎಸ್‌.ಸಿ., ಎಸ್‌.ಟಿ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 30 ವರ್ಷ ಗರಿಷ್ಠ ವಯೋಮಿತಿ ಇದೆ.

ಸೇವಾ ನಿರತ ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ ಹಾಗೂ ಎಸ್‌.ಸಿ., ಎಸ್‌.ಟಿ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಈ ಬಾರಿಯ ನೇಮಕಾತಿ ಪ್ರಕ್ರಿಯೆಯಲ್ಲಿ ದೈಹಿಕ, ಲಿಖಿತ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ಮಾತ್ರ ಇರಲಿದೆ. ಈ ಹಿಂದೆ 10 ಅಂಕಕ್ಕೆ ನಡೆಸಲಾಗುತ್ತಿದ್ದ ಸಂದರ್ಶನವನ್ನು ಈ ಬಾರಿ ರದ್ದುಪಡಿಸಲಾಗಿದೆ.

ನೇಮಕಾತಿ ಮಾಹಿತಿಗೆ; 080-22943346 ಅಥವಾ www.ksp.gov.in

ಹುದ್ದೆಗಳ ವರ್ಗೀಕರಣ

ಕರ್ನಾಟಕ – 431 ಹುದ್ದೆಗಳು

ಪಿಎಸ್‌ಐ (ಪುರುಷ) – 278

ಪಿಎಸ್‌ಐ (ಮಹಿಳಾ) – 91

ಸೇವಾನಿರತರಿಗೆ ಪಿಎಸ್‌ಐ (ಪುರುಷ) – 46

ಸೇವಾನಿರತರಿಗೆ ಪಿಎಸ್‌ಐ (ಮಹಿಳೆ) – 16

ಕಲ್ಯಾಣ ಕರ್ನಾಟಕ ಮೀಸಲಾತಿ –125 ಹುದ್ದಗಳು

ಪಿಎಸ್‌ಐ (ಪುರುಷ) (ಸ್ಥಳೀಯ) – 68

ಪಿಎಸ್‌ಐ (ಮಹಿಳೆ) (ಸ್ಥಳೀಯ) – 26

ಸೇವಾನಿರತರಿಗೆ ಪಿಎಸ್‌ಐ (ಪುರುಷ) (ಸ್ಥಳೀಯ) – 12

ಸೇವಾನಿರತರಿಗೆ ಪಿಎಸ್‌ಐ (ಮಹಿಳೆ) (ಸ್ಥಳೀಯ) – 3

ಪಿಎಸ್‌ಐ (ಪುರುಷ) (ಪರಸ್ಥಳೀಯ) – 10

ಪಿಎಸ್‌ಐ (ಮಹಿಳೆ) (ಪರಸ್ಥಳೀಯ) – 4

ಸೇವಾನಿರತರಿಗೆ ಪಿಎಸ್‌ಐ (ಪುರುಷ) (ಪರಸ್ಥಳೀಯ) – 2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT