ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯಲ್ಲಿ 3 ವರ್ಷದ ಇಂಟರ್ನ್‌ಷಿಪ್‌ಗೆ ಅವಕಾಶ

Last Updated 14 ಮೇ 2020, 10:05 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಯುವಜನರಲ್ಲಿರುವ ದೇಶಭಕ್ತಿಯ ಭಾವನೆಗಳನ್ನು ಗಮನದಲ್ಲಿರಿಸಿಕೊಂಡು ಸೇನೆಯು 3 ವರ್ಷಗಳ ಅವಧಿಗೆ ಸೇನಾಪಡೆಗಳ ಜೊತೆಗೆ ಪ್ರಾಯೋಗಿಕ ಅನುಭವ ಪಡೆಯಲು ಇಂಟರ್ನ್‌ಷಿಪ್‌ ಮೂಲಕ ಅವಕಾಶ ನೀಡಲು ನಿರ್ಧರಿಸಿದೆ.

ಯೋಧರು ಮತ್ತು ಅಧಿಕಾರಿಗಳಾಗಿಯೂ ಇಂಟರ್ನ್‌ಷಿಪ್ ಅನುಭವ ಪಡೆದುಕೊಳ್ಳಲು ಅವಕಾಶವಿದೆ. ಇಂಟರ್ನ್‌ಷಿಪ್‌ಗಾಗಿ ಬರುವವರಿಗೆ ನೀಡುವ ಸ್ಟೇಫಂಡ್‌ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸೇನೆಯ ಎಲ್ಲ ಕಾರ್ಯಾಚರಣೆ ಮತ್ತು ಸಂಘರ್ಷದ ತುಕಡಿಗಳಲ್ಲಿ ಇಂಟರ್ನ್‌ಷಿಪ್‌ಗೆ ಅವಕಾಶ ಸಿಗಲಿದೆ.

ಕಠಿಣ ತರಬೇತಿಯ ನಂತರ 3 ವರ್ಷಗಳ ಅವಧಿಗೆ ಸೇನೆಯಲ್ಲಿ ಇಂಟರ್ನ್‌ಷಿಪ್ ಮಾಡುವವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಉದ್ಯೋಗದಲ್ಲಿ ಆದ್ಯತೆ ಸಿಗಬೇಕು. ಸ್ನಾತಕೋತ್ತರ ಪದವಿ ಅಭ್ಯಾಸ ಮಾಡಲು ಇಚ್ಛಿಸುವವರಿಗೆ ವಿಶ್ವವಿದ್ಯಾಲಯಗಳಲ್ಲಿ ಮೀಸಲಾತಿ ಸಿಗಬೇಕು ಎಂದು ಸೇನೆಯು ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆಯಿದೆ.

‘ಇಂಥದ್ದೊಂದು ಪ್ರಸ್ತಾವವನ್ನು ಸೇನೆಯ ಉನ್ನತ ಅಧಿಕಾರಿಗಳು ಸಿದ್ಧಪಡಿಸಿರುವುದು ನಿಜ. ಶೀಘ್ರದಲ್ಲಿಯೇ ನಡೆಯಲಿರುವ ಕಮಾಂಡರ್‌ಗಳ ಸಭೆಯಲ್ಲಿ ಈ ವಿಚಾರ ವಿವರವಾಗಿ ಚರ್ಚೆಯಾಗಲಿದೆ. ಆರಂಭದಲ್ಲಿ 100 ಅಧಿಕಾರಿಗಳು ಮತ್ತು 1000 ಯೋಧರಿಗೆ ಇಂಟರ್ನ್‌ಷಿಪ್‌ ಅವಕಾಶ ನೀಡಬೇಕೆಂಬ ಚಿಂತನೆಯಿದೆ’ ಎಂದು ಸೇನಾ ವಕ್ತಾರ ಕರ್ನಲ್ ಅಮನ್ ಆನಂದ್ ತಿಳಿಸಿದ್ದಾರೆ.

ಇದೇ ಮಾದರಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಮತ್ತು ಪ್ಯಾರಾ ಮಿಲಿಟರಿ ತುಕಡಿಗಳಿಂದಲೂ ಸಿಬ್ಬಂದಿಯನ್ನು 7 ವರ್ಷದ ಅವಧಿಗೆ ಮೀಸಲು ನಿಯೋಜನೆ ಮೇರೆಗೆ ಪಡೆದುಕೊಳ್ಳಲು ಸೇನೆ ಚಿಂತನೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT