ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾಪಡೆಯಲ್ಲಿ ಚೆಫ್‌, ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ: 28 ಕೊನೆ ದಿನ

Last Updated 27 ನವೆಂಬರ್ 2019, 6:07 IST
ಅಕ್ಷರ ಗಾತ್ರ

ಭಾರತೀಯ ನೌಕಾಪಡೆಯಲ್ಲಿ ಮೆಟ್ರಿಕ್ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.ಒಟ್ಟು 400 ಹುದ್ದೆಗಳಿದ್ದು, ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇದು 2020ರ ಅಕ್ಟೋಬರ್‌ ಬ್ಯಾಚ್‌ ನೇಮಕಾತಿಯಾಗಿದೆ. ಅವಿವಾಹಿತ ಪುರುಷರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಯೋಮಿತಿ:ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಗಸ್ಟ್‌ 1, 2000ನೇ ವರ್ಷ ಹಾಗೂ ಜುಲೈ 31, 2003ರ ನಡುವೆ ಜನಿಸಿರಬೇಕು.

ವಿದ್ಯಾರ್ಹತೆ:ಹತ್ತನೆ ತರಗತಿ ಉತ್ತೀರ್ಣರಾಗಿರಬೇಕು.

ಹುದ್ದೆಗಳು:ಚೆಫ್‌, ವ್ಯವಸ್ಥಾಪಕ,ನೈರ್ಮಲ್ಯ ತಜ್ಞ

ವೇತನ ಶ್ರೇಣಿ:ತರಬೇತಿ ಸಮಯದಲ್ಲಿ ₹14,600 ನೀಡಲಾಗುವುದು. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಬಳಿಕ ₹21,700- ₹69,100 ವೇತನ ನಿಡಲಾಗುವುದು. ಇದರ ಜೊತೆಗೆ ₹5,200 ಭತ್ಯೆ ಹಾಗೂ ಡಿಎ ನೀಡಲಾಗುತ್ತದೆ.

ನೇಮಕಾತಿ ವಿಧಾನ:ಅಭ್ಯರ್ಥಿಗಳ ಆಯ್ಕೆಯು 2 ಹಂತಗಳಲ್ಲಿ ನಡೆಯಲಿದೆ. ಕಂಪ್ಯೂಟರ್‌ ಆಧಾರಿತ ಪರೀಕ್ಷೆ ಹಾಗೂ ದೈಹಿಕ ಕ್ಷಮತೆ ಪರೀಕ್ಷೆಯ ಮೂಲಕಆಯ್ಕೆ ನಡೆಯಲಿದೆ.ಕಂಪ್ಯೂಟರ್‌ ಆಧಾರಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಗೆ ಕರೆಯಲಾಗುವುದು.

ಪರೀಕ್ಷೆ ಶುಲ್ಕ: ₹ 250 ಮಾತ್ರ

ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 28 –11–2019

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT