ಶನಿವಾರ, ಜನವರಿ 18, 2020
27 °C

ಭಾರತ ಸರ್ಕಾರ| ITI, B.E, B.Tech ಆದವರಿಗೆ ಕರ್ನಾಟಕದ ಕೈಗಾದಲ್ಲಿ ಉದ್ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೈಗಾದಲ್ಲಿರುವ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐಎಲ್)ದಲ್ಲಿ ಸುಮಾರು 137 ಹುದ್ದೆಗಳನ್ನು ಭರ್ತಿ ಮಾಡಲು ಆರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಟೆಕ್ನಿಷಿಯನ್‌, ಟ್ರೈನಿ ಟೆಕ್ನಿಷಿಯನ್‌, ಸೈಂಟಿಪಿಕ್‌ ಅಸಿಸ್ಟೆಂಟ್‌, ಟ್ರೈನಿ ಸೈಂಟಿಪಿಕ್‌ ಅಸಿಸ್ಟೆಂಟ್‌ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. 

ಹುದ್ದೆಗಳ ಸಂಖ್ಯೆ: 137

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಐಟಿಐ ಹಾಗು ಎಂಜಿನಿಯರಿಂಗ್‌ ಪದವಿ ಪಡೆದಿರಬೇಕು. ವಿದ್ಯಾರ್ಹತೆಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯ ಲಿಂಕ್‌ ಕ್ಲಿಕ್ಕಿಸಿ ಮಾಹಿತಿ ಪಡೆಯಬಹುದು.

ವೇತನ ಶ್ರೇಣಿ ಮತ್ತು ವಯಸ್ಸು

1) ಟೆಕ್ನಿಷಿಯನ್‌: ₹ 21,700/-

ವಯಸ್ಸು: ಕನಿಷ್ಠ18, ಗರಿಷ್ಠ 25

2) ಟ್ರೈನಿ ಟೆಕ್ನಿಷಿಯನ್‌: ₹ 10,500/-

ವಯಸ್ಸು: ಕನಿಷ್ಠ18, ಗರಿಷ್ಠ 24

3) ಸೈಂಟಿಪಿಕ್‌ ಅಸಿಸ್ಟೆಂಟ್‌: ₹ 35,400/-

ವಯಸ್ಸು: ಕನಿಷ್ಠ18, ಗರಿಷ್ಠ 30

4) ಟ್ರೈನಿ ಸೈಂಟಿಪಿಕ್‌ ಅಸಿಸ್ಟೆಂಟ್‌: ₹ 16000/-

ವಯಸ್ಸು: ಕನಿಷ್ಠ18, ಗರಿಷ್ಠ 25

ವಯೋಮಿತಿ ಸಡಿಲಿಕೆ: ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ. ಅಂಗವಿಕಲರಿಗೆ 10 ವರ್ಷಗಳ ಸಡಿಲಿಕೆ ಇದೆ. 

ನೇಮಕಾತಿ: ನೇಮಕಾತಿಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಯಲಿದೆ.

ಅರ್ಜಿ ಸಲ್ಲಿಸುವ ಕೊನೆ ದಿನ: 06–01–2020

ಅಧಿಸೂಚನೆ ಲಿಂಕ್‌: https://bit.ly/34GBEAQ

ವೆಬ್‌ಸೈಟ್‌: www.npcilcareers.co.in.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು