ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ: ದಾಖಲಾತಿಗೆ ನೂಕುನುಗ್ಗಲು

ಶಿಥಿಲಗೊಂಡಿದ್ದ ಸರ್ಕಾರಿ ಶಾಲೆಗೆ ಹೈಟೆಕ್‌ ಸ್ಪರ್ಶ * ಅಂತರರಾಷ್ಟ್ರೀಯ ವಿನ್ಯಾಸ
Last Updated 21 ನವೆಂಬರ್ 2019, 19:46 IST
ಅಕ್ಷರ ಗಾತ್ರ

ದೇವನಹಳ್ಳಿ: ಇಲ್ಲಿನ ಕೊರಚರಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಕಂಡಿದೆ. ಅಧುನಿಕ ಸೌಲಭ್ಯಗಳಿರುವ ಈ ಸರ್ಕಾರಿ ಶಾಲೆಯ 2020–21ನೇ ಶೈಕ್ಷಣಿಕ ಸಾಲಿನ ದಾಖಲಾತಿಗೆ ಪೋಷಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ.

ನಗರದಲ್ಲಿನ ಕೋಟೆ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಮತ್ತು ಬಾಲಕಿಯರ ಸರ್ಕಾರಿ ಉನ್ನತ್ತೀಕರಿಸಿದ ಶಾಲೆಗಳು ಸಾಮಾಜಿಕ ಹೊಣೆಗಾರಿಕೆ ಅನುದಾನದಲ್ಲಿ ಹೈಟೆಕ್ ಸ್ವರ್ಶ ಪಡೆದ ಬೆನ್ನಲ್ಲೇ ಈ ಶಾಲೆಯೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿನ್ಯಾಸಗೊಂಡಿದೆ. ಕಾರ್ಯಾರಂಭಗೊಳ್ಳಲು ಕನಿಷ್ಠ ಒಂದೆರಡು ತಿಂಗಳ ಕಾಲಾವಕಾಶ ಬೇಕಾಗಿದೆ. ಕಟ್ಟಡಕ್ಕೆ ಅಂತಿಮ ಸ್ವರ್ಶ ನೀಡುವ ಕಾಮಗಾರಿ ಬಾಕಿ ಇದೆ ಎನ್ನುತ್ತಾರೆ ಶಾಲಾ ಕಟ್ಟಡ ಕಾಮಗಾರಿ ನಿರ್ವಹಣೆ ಹೊತ್ತಿರುವ ಎಂಜಿನಿಯರ್‌ಗಳು.

ಈ ಬಗ್ಗೆ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಕಮಲಮ್ಮ,‘ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ, ಸಿ.ಆರ್.ಪಿ ಶಿವಕುಮಾರ್ ಕಾಳಜಿ ವಹಿಸಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆ ಆಡಳಿತ ಕಂ‍ಪನಿಗೆ ಮನವಿ ಮಾಡಿದ ಪರಿಣಾಮ ಆರೇಳು ತಿಂಗಳ ಹಿಂದೆ ವಿದ್ಯಾರ್ಥಿಗಳನ್ನು ಹಳೆ ಜಿ.ಕೆ.ಬಿ.ಎಂ.ಎಸ್ ಶಾಲೆಗೆ ಸ್ಥಳಾಂತರಿಸಿ ಶಾಲಾ ಕಟ್ಟಡ ನೆಲಸಮಗೊಳಿಸಿ ಕಟ್ಟಡ ನಿರ್ಮಿಸಲಾಗುತ್ತಿದೆ’ ಎಂದು ಮಾಹಿತಿ ಹಂಚಿಕೊಂಡರು.

ಪ್ರಸ್ತುತ ಶಾಲೆಯಲ್ಲಿ ಒಟ್ಟು 201 ವಿದ್ಯಾರ್ಥಿಗಳು ಇದ್ದಾರೆ. ಸರ್ಕಾರದ ಆದೇಶದಂತೆ ಈಗಾಗಲೇ 38 ವಿದ್ಯಾರ್ಥಿಗಳನ್ನು ಎಲ್‌ಕೆಜಿ ಮತ್ತು ಯುಕೆಜಿಗೆ ದಾಖಲು ಮಾಡಲಾಗಿದೆ. 1ರಿಂದ 7ನೇ ತರಗತಿಗೆ ಮುಂದಿನ ಶೈಕ್ಷಣಿಕ ಸಾಲಿಗೆ ದಾಖಲಿಸಲು ಪೋಷಕರು ದುಂಬಾಲು ಬಿದ್ದಿದ್ದಾರೆ. ಮುಂದಿನ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ಒಟ್ಟಾರೆ ಸಂಖ್ಯೆ 300ರ ಗಡಿದಾಟುವ ನಿರೀಕ್ಷೆ ಇದೆ, ಎಂದು ಹೇಳಿದರು.

ಖಾಸಗಿ ಶಾಲೆಗಳಲ್ಲಿ ಎಲ್‌.ಕೆ.ಜಿಗೆ ₹25ರಿಂದ ₹30ಸಾವಿರ ಡೊನೇಷನ್ ನೀಡಬೇಕು. ಇಂತಹ ಸರ್ಕಾರಿ ಹೈಟೆಕ್ ಶಾಲೆಗಳಿಗೆ ಪೋಷಕರು ದುಂಬಾಲು ಬೀಳುವುದು ಸಹಜ. ಆರ್ಜಿ ಸಲ್ಲಿಸುವ ಪ್ರತಿ ಮಗುವಿಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳುತ್ತಾರೆ ಪೋಷಕ ವೆಂಕಟೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT