ಮಂಗಳವಾರ, ಅಕ್ಟೋಬರ್ 27, 2020
24 °C
‘ಡಬ್ಲ್ಯುಎಮ್ ಸ್ಕಿಲ್‌ ಎಡ್ಜ್ ಆನ್‌ಲೈನ್ ತರಬೇತಿ ಕೇಂದ್ರ

ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌ ‌ಕಲಿಕೆ ಆನ್‌ಲೈನ್‌ನಲ್ಲಿ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ತಾಂತ್ರಿಕ ಶಿಕ್ಷಣ ಪಡೆಯಬಯಸುವ ವಿದ್ಯಾರ್ಥಿಗಳು ಪ್ರತಿದಿನ ತಂತ್ರಜ್ಞಾನದ ವಿಷಯದಲ್ಲಿ ಅಪ್‌ಡೇಟ್ ಆಗುತ್ತಲೇ ಇರಬೇಕು. ಕಾಲೇಜಿನಲ್ಲಿ ಸಿಗುವ ಪಾಠದ ಜೊತೆಗೆ ವಿಷಯಕ್ಕೆ ಸಂಬಂಧಿಸಿ ಇನ್ನಷ್ಟು ಜ್ಞಾನವನ್ನು ಪಡೆಯುವುದು ಅಗತ್ಯ.

ಹಾಗಾಗಿ ಜಾವಾ, ಸಿ ಲ್ಯಾಂಗ್ವೇಜ್‌, ಪೈಥಾನ್‌ನಂತಹ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌‌ಗಳು ಹಾಗೂ 4ಜಿ, 5ಜಿಯಂತಹ ಟೆಲಿಕಮ್ಯೂನಿಕೇಷನ್‌ ವಿಷಯದಲ್ಲಿ ಇನ್ನಷ್ಟು ಆಳವಾದ ಜ್ಞಾನ ಹೊಂದಿರಬೇಕು. ಆದರೆ ಈ ಕುರಿತ ಸಂಪೂರ್ಣ ಮಾಹಿತಿ ಪಠ್ಯದ ಸಿಲೆಬಸ್‌ನಲ್ಲಿ ಸಿಗುವುದಿಲ್ಲ. ಆ ಕಾರಣಕ್ಕೆ ಈ ವಿಷಯಗಳಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನೀಡಲಾಗುತ್ತದೆ. ಈ ವಿಷಯಗಳ ಮೇಲೆ ತರಬೇತಿ ನೀಡುವ ಸಂಸ್ಥೆಗಳು ಆನ್‌ಲೈನ್ ಮೂಲಕವೂ ತರಬೇತಿ ನೀಡಲು ಆರಂಭಿಸಿವೆ.

‘ಇಂಗ್ಲಿಷ್‌ನಲ್ಲಿ ಮಾತ್ರವಲ್ಲ, ಕನ್ನಡ, ತೆಲುಗಿನಲ್ಲೂ ಕೂಡ ತರಬೇತಿ ನೀಡುತ್ತಿದ್ದೇವೆ’ ಎನ್ನುತ್ತಾರೆ ಬೆಂಗಳೂರಿನ ವೈಟ್‌ ಮಿಸ್ಟ್‌ ವೆಂಚರ್ಸ್‌ ಕಂಪನಿಯ ‘ಡಬ್ಲ್ಯುಎಮ್ ಸ್ಕಿಲ್‌ ಎಡ್ಜ್’ (https://www.whitemyst.com/skills)‌ ಆನ್‌ಲೈನ್ ತರಬೇತಿ ಕಾರ್ಯಕ್ರಮದ ಆಯೋಜಕರಾದ ಪೃಥ್ವಿ ಎನ್‌.

ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್

ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌ನ ಕಲಿಕೆಯಿಂದ ಸಾಫ್ಟ್‌ವೇರ್ ಕೋಡಿಂಗ್‌, ಡೇಟಾ ವಿಶ್ಲೇಷಣೆ, ವೆಬ್‌ ವಿನ್ಯಾಸದಂತಹ ವಿಭಾಗಗಳಲ್ಲಿ ಕೆಲಸ ಮಾಡಲು ನೆರವಾಗುತ್ತದೆ. ಜಾವಾ ಹಾಗೂ ಪೈಥಾನ್ ಎರಡೂ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌ ಕಲಿಕೆಯಿಂದ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಹೆಚ್ಚು ಬೇಡಿಕೆ ಗಿಟ್ಟಿಸಿಕೊಳ್ಳಬಹುದು. 

ಅಷ್ಟೇ ಅಲ್ಲದೇ ವೆಬ್‌ ಡಿಸೈನ್, ಡೇಟಾ ಸೈಂಟಿಸ್ಟ್‌, ಡೇಟಾ ಅನಾಲಿಸ್ಟ್‌, ಗೇಮ್ ಡೆವಲಪರ್, ಮಷಿನ್ ಲರ್ನಿಂಗ್, ಆರ್ಟಿಫಿಶೀಲ್ ಇಂಟೆಲಿಜೆನ್ಸ್‌ ಕ್ಷೇತ್ರದಲ್ಲೂ ಈ ಕೋರ್ಸ್‌ಗಳಿಗೆ ಹೆಚ್ಚು ಬೇಡಿಕೆ ಇದೆ. ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌ ಕಲಿಕೆಯಿಂದ ಮನೆಯಲ್ಲಿಯೇ ಕುಳಿತು ಹೊಸ ಹೊಸ ಸಾಫ್ಟ್‌ವೇರ್ ಹಾಗೂ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯ. ಈ ವಿಷಯ‌ಗಳಲ್ಲಿ ಪರಿಣತಿ ಪಡೆದವರಿಗೆ ವಿದೇಶಗಳಲ್ಲೂ ಹೆಚ್ಚು ಬೇಡಿಕೆ ಇದೆ. 

5ಜಿ ಹಾಗೂ 4ಜಿ ತಂತ್ರಜ್ಞಾನ

ಸಾಫ್ಟ್‌ವೇರ್ ಕ್ಷೇತ್ರದಂತೆ ಇನ್ನಷ್ಟು ಬೆಳವಣಿಗೆ ಹೊಂದುತ್ತಿರುವ ಕ್ಷೇತ್ರವೆಂದರೆ ಅದು ಟೆಲಿಕಮ್ಯೂನಿಕೇಷನ್ ಕ್ಷೇತ್ರ. ಹಿಂದೆಲ್ಲಾ ನಾವು 2ಜಿ ತಂತ್ರಜ್ಞಾನವನ್ನು ಬಳಸುತ್ತಿದ್ದೆವು. ಆದರೆ ಈಗ 5ಜಿ ತಂತ್ರಜ್ಞಾನದತ್ತ ಹೆಜ್ಜೆ ಇಡುತ್ತಿದ್ದೇವೆ. ಹೈ ಸ್ಪೀಡ್‌ ಇಂಟರ್‌ನೆಟ್‌ ಬಳಕೆಯಲ್ಲಿ ನೆರವಾಗುವ 4ಜಿ ಹಾಗೂ 5ಜಿ ತಂತ್ರಜ್ಞಾನದಲ್ಲೂ ಹೊಸ ಹೊಸ ಆವಿಷ್ಕಾರಗಳಾಗುತ್ತಲೇ ಇರುತ್ತವೆ. ಆ ಕಾರಣಕ್ಕೆ ಈ ವಿಷಯಗಳಲ್ಲಿ ಅಪ್‌ಡೇಟ್ ಆಗುವುದು ಅವಶ್ಯ. ಬಿಕಾಂ, ಬಿಎಸ್‌ಸಿ, ಬಿಸಿಎ, ಎಂಜಿನಿಯರಿಂಗ್‌, ಎಂಬಿಎ, ಎಂ.ಟೆಕ್ ಪದವಿ ಪಡೆದ ವಿದ್ಯಾರ್ಥಿಗಳು ತರಬೇತಿ ಸಂಸ್ಥೆಗಳ ಮೂಲಕ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಹಾಗೂ 4ಜಿ ಹಾಗೂ 5ಜಿ ಸಂಬಂಧಿಸಿದ ತರಬೇತಿ ಪಡೆಯಬಹುದು. ‌ 

ಭಾರತದಲ್ಲಿ ಬೇಡಿಕೆ

ಭಾರತದಲ್ಲಿ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಹಾಗೂ ಟೆಲಿಕಮ್ಯೂನಿಕೇಷನ್ ವಿಭಾಗದಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡಿಕೊಂಡವರಿಗೆ ಬೇಡಿಕೆ ಹೆಚ್ಚಿದೆ. ಫ್ರೆಶರ್‌ಗಳು ಕೂಡ ವರ್ಷಕ್ಕೆ 5 ಲಕ್ಷದಷ್ಟು ಸಂಬಳ ಗಿಟ್ಟಿಸಿಕೊಳ್ಳಬಹುದು. ಇದರಲ್ಲಿ ಅನುಭವ ಪಡೆದಂತೆ ಬೇಡಿಕೆಯೂ ಹೆಚ್ಚುತ್ತದೆ, ಸಂಬಳವೂ ಹೆಚ್ಚುತ್ತದೆ.  

‘ತಂತ್ರಜ್ಞಾನ ಹಾಗೂ ಟೆಲಿಕಮ್ಯೂನಿಕೇಷನ್ ವಿಷಯ ಇನ್ನಷ್ಟು ವಿಸ್ತಾರವಾಗಿ ಬೆಳೆಯುವ ಲಕ್ಷಣಗಳಿವೆ. ಕಾಲೇಜಿನಲ್ಲಿ ಇರುವ ಸಿಲೆಬಸ್‌ ಪ್ರಸ್ತುತ ಸ್ಥಿತಿಗೆ ಸಾಲುತ್ತದೆ. ಆದರೆ ಯಾವುದೇ ಸಾಫ್ಟ್‌ವೇರ್‌ ಕಂಪ‍ನಿಗಳಲ್ಲಿ ಕೆಲಸ ಮಾಡಬೇಕು ಎಂದರೆ ಮುಂದಿನ ಐದಾರು ವರ್ಷಕ್ಕೆ ತಕ್ಕಂತೆ ಅಪ್‌ಡೇಟ್ ಆಗಿರಬೇಕು. ಕೋಡಿಂಗ್ ಹಾಗೂ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ವಿಷಯಕ್ಕೆ ಸಂಬಂಧಿಸಿ ಆನ್‌ಲೈನ್‌ನಲ್ಲಿ ನೇರ ಸಂವಹನ ಇರುವುದರಿಂದ ಕಲಿಯಲು ಇನ್ನಷ್ಟು ಅನುಕೂಲವಾಗುತ್ತದೆ’ ಎನ್ನುವುದು ಪೃಥ್ವಿ ಅಭಿಪ್ರಾಯ. 

ಎಲ್ಲೆಲ್ಲಿ ಬೇಡಿಕೆ?

* ಸಾಫ್ಟ್‌ವೇರ್ ಕ್ಷೇತ್ರ  

* ಗೇಮಿಂಗ್ ಕ್ಷೇತ್ರ  

* ಮೊಬೈಲ್ ಇಂಟರ್‌ನೆಟ್ ಅಭಿವೃದ್ಧಿ ಕ್ಷೇತ್ರ 

* ಡೇಟಾ ಸೈನ್ಸ್ ವಿಭಾಗ 

* ಪ್ರಾಡಕ್ಟ್ ಮ್ಯಾನೇಜ್‌ಮೆಂಟ್‌ ಕ್ಷೇತ್ರ 

* ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ 

* ಡೇಟಾ ಅನಾಲಿಸ್ಟ್‌ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು