ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುನುಗು’ ಯಾವ ಮೂಲದ ಸುಗಂಧ ದ್ರವ್ಯ?

Last Updated 10 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

1. ‘ಪುನುಗು’ ಯಾವ ಮೂಲದ ಸುಗಂಧ ದ್ರವ್ಯ?

ಅ) ಸಸ್ಯ ಆ) ಪ್ರಾಣಿ ಇ) ಖನಿಜ ಈ) ಶಿಲೆ

2. ಸಂಚಿ ಹೊನ್ನಮ್ಮ ಯಾವ ರಾಜರ ಆಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಳು?

ಅ) ರಾಜ ಒಡೆಯರ್ ಆ) ಜಯಚಾಮರಾಜ ಒಡೆಯರ್
ಇ) ಚಿಕ್ಕದೇವರಾಜ ಒಡೆಯರ್ ಈ) ಕೃಷ್ಣರಾಜ ಒಡೆಯರ್

3. ಮೂತ್ರಪಿಂಡಗಳು ನಮ್ಮ ದೇಹದ ಯಾವ ವ್ಯವಸ್ಥೆಯ ಭಾಗವಾಗಿವೆ?

ಅ) ಪೋಷಣೆ ಆ) ವಿಸರ್ಜನೆ

ಇ) ಉಸಿರಾಟ ಈ) ಸಾಗಾಣಿಕೆ

4. ಅರಿಯಾಕ್ಕುಡಿ ರಾಮಾನುಜ ಅಯ್ಯಂಗಾರ್ ಯಾವ ಕ್ಷೇತ್ರದ ಪ್ರಸಿದ್ಧ ವ್ಯಕ್ತಿ?

ಅ) ಸುಗಮ ಸಂಗೀತ ಆ) ಜಾನಪದ ಸಂಗೀತ

ಇ) ಹಿಂದೂಸ್ತಾನಿ ಸಂಗೀತ ಈ) ಕರ್ನಾಟಕ ಸಂಗೀತ

5. ಕಿಟ್ಟೆಲ್ ಕೋಶವನ್ನು ಪರಿಷ್ಕರಿಸಿ ಪ್ರಕಟಿಸಿದ ವಿದ್ವಾಂಸರು ಯಾರು?

ಅ) ಗೋವಿಂದ ಪೈ ಆ) ಯು. ಪಿ. ಉಪಾಧ್ಯಾಯ

ಇ) ಎಂ. ಮರಿಯಪ್ಪ ಭಟ್ಟಈ) ಕುಶಾಲಪ್ಪ ಗೌಡ

6. ‘ಬುಲ್ಸ್ ಐ’ ಎಂಬ ಶಬ್ದ ಯಾವ ಕ್ರೀಡೆಗೆ ಸಂಬಂಧಿಸಿದೆ?

ಅ) ಈಜು ಆ) ಶೂಟಿಂಗ್

ಇ) ಕುಸ್ತಿ ಈ) ಹಾಕಿ

7. ಸಂಸ್ಕೃತ ಯಾವ ಮಹಾಕಾವ್ಯದ ಪ್ರಭಾವವನ್ನು ರನ್ನನ ಗದಾಯುದ್ಧದ ಮೇಲೆ ಕಾಣಬಹುದು?

ಅ) ಕಿರಾತಾರ್ಜುನೀಯ ಆ) ರಘುವಂಶ

ಇ) ವೇಣೀಸಂಹಾರ ಈ) ಶಿಶುಪಾಲ ವಧ

8. ‘ಟೇಕ್ ವಿತ್ ಎ ಪಿಂಚ್ ಆಫ್ ಸಾಲ್ಟ್’ ಎಂಬ ಆಂಗ್ಲ ನುಡಿಕಟ್ಟಿನ ಅರ್ಥವೇನು?

ಅ) ಅಲಕ್ಷಿಸು ಆ) ಯಥಾವತ್ತಾಗಿ ಗ್ರಹಿಸು

ಇ) ಗೌರವಿಸು ಈ) ಪರೀಕ್ಷಿಸಿ ಸ್ವೀಕರಿಸು

9. ಪರಿಸರ ವ್ಯವಸ್ಥೆಯಲ್ಲಿರುವ ಉತ್ಪಾದಕ ಜೀವಿಗಳು ತಮಗೆ ಅಗತ್ಯವಾದ ಶಕ್ತಿಯನ್ನು ಎಲ್ಲಿಂದ ಪಡೆಯುತ್ತವೆ?

ಅ) ನೀರು ಆ) ಗಾಳಿ

ಇ) ಸೂರ್ಯ ಈ) ಬೆಂಕಿ

10. ಪ್ರಸ್ತುತ ಎಷ್ಟು ಕ್ಷೇತ್ರಗಳಿಗೆ ಮಾತ್ರ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ?

ಅ) ಆರು ಆ) ಐದು

ಇ) ಎಂಟು ಈ) ಏಳು

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಸಾಮವೇದ

2. ಎಮಿಲಿ ಬ್ರಾಂಟ್

3. ನೀರು

4. ವೆಲ್ಲಿಂಗ್ಟನ್‌ನ ಡ್ಯೂಕ್

5. ಈಜಿಪ್ಟ್- ಸಿರಿಯಾ

6. ವಿಘಟಕ

7. ನಾರಾಯಣ ಮೂರ್ತಿ

8. ರಷ್ಯಾ

9. ಏಷ್ಯನ್ ಬ್ಯಾಡ್ಮಿಂಟನ್

10. ಚಿತ್ರಕಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT