ಶುಕ್ರವಾರ, ಫೆಬ್ರವರಿ 21, 2020
30 °C

ಪ್ರಜಾವಾಣಿ ಕ್ವಿಜ್ - 107

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

1. ‘ಆಪರೇಶನ್ ಫ್ಲಡ್’ ಯೋಜನೆ ಯಾವುದಕ್ಕೆ ಸಂಬಂಧಿಸಿದ್ದು?
ಅ) ನೀರಾವರಿ
ಆ) ಹೈನುಗಾರಿಕೆ
ಇ) ಕೃಷಿ
ಈ) ಪ್ರವಾಹ ನಿರ್ವಹಣೆ

2. ನೇರ ತೆರಿಗೆಯನ್ನು ಯಾವುದರ ಮೇಲೆ ವಿಧಿಸಲಾಗುತ್ತದೆ?
ಅ) ಜನರ ಆದಾಯ, ಸಂಪತ್ತು
ಆ) ಕಂಪನಿಗಳು ಸರ್ಕಾರಕ್ಕೆ ಕೊಡುವ ದೇಣಿಗೆ
ಇ) ಸರಕು ಮತ್ತು ಸೇವೆ
ಈ) ದಂಡದ ಮೊತ್ತ

3. ‘ಟೈಲರ್ ಮೇಡ್’ ಎಂಬ ಆಂಗ್ಲ ನುಡಿಕಟ್ಟಿನ ಅರ್ಥವೇನು?
ಅ) ಹೊಲಿದ ಬಟ್ಟೆ
ಆ) ಹೊಲಿಯದ ಬಟ್ಟೆ
ಇ) ಟೈಲರ್‌ಗಳಿಗೆ ತರಬೇತಿ
ಈ) ಅಗತ್ಯಕ್ಕೆ ತಕ್ಕಂತೆ ಸಿದ್ಧವಾದ ವಸ್ತು

5. ಕಥೆಗಾರ ವಸುಧೇಂದ್ರ ಅವರ ಮಾಲೀಕತ್ವದ ಪ್ರಕಾಶನ ಸಂಸ್ಥೆಯ ಹೆಸರೇನು?
ಅ) ಅಂಕಿತ ಪುಸ್ತಕ
ಆ) ಸಾಹಿತ್ಯ ಭಂಡಾರ
ಇ) ಛಂದ ಪುಸ್ತಕ
ಈ) ನವ ಕರ್ನಾಟಕ

5. ಗೋದಾವರಿ ನದಿ ತೀರದ ಪೈಠಾಣ್ ಯಾವ ರಾಜವಂಶದ ರಾಜಧಾನಿಯಾಗಿತ್ತು?
ಅ) ವಾಕಟಕ
ಆ) ಶಾತವಾಹನ
ಇ) ಗುಪ್ತ
ಈ) ಕರಾಡ

6. ‘ದ ಫಾಲ್ ಆಫ್ ಎ ಸ್ಪ್ಯಾರೋ’ ಯಾರ ಆತ್ಮಚರಿತ್ರೆ?
ಅ) ಎಂ. ವೈ.ಘೋರ್ಪಡೆ
ಆ) ಸಲೀಂ ಆಲಿ
ಇ) ಎಲ್ಲಪ್ಪ ರೆಡ್ಡಿ
ಈ) ಕೆ. ಪುಟ್ಟಸ್ವಾಮಿ

7. ಬೇಡಿಕೆ ನಿಯಮದ ಪ್ರಕಾರ ಬೆಲೆ ಹೆಚ್ಚಾದಾಗ ಬೇಡಿಕೆ ಏನಾಗುತ್ತದೆ?
ಅ) ಕುಸಿಯುತ್ತದೆ
ಆ) ಏರುತ್ತದೆ
ಇ) ಬದಲಾಗುವುದಿಲ್ಲ
ಈ) ಎರಡಕ್ಕೂ ಸಂಬಂಧವಿಲ್ಲ

8. ‘ಮಾನವ ಕಂಪ್ಯೂಟರ್’ ಎಂದು ಪ್ರಸಿದ್ಧರಾಗಿದ್ದ ವ್ಯಕ್ತಿ ಯಾರು?
ಅ) ಪಿ.ಟಿ. ಉಷಾ
ಆ) ಎಂ. ಎಸ್. ಸುಬ್ಬಲಕ್ಷ್ಮಿ
ಇ) ಶಕುಂತಲಾ ದೇವಿ
ಈ) ಇಂದಿರಾಗಾಂಧಿ

9. ಬಾಬಾ ಅಣು ಸಂಶೋಧನ ಕೇಂದ್ರದ ಪ್ರಧಾನ ಕಚೇರಿ ಎಲ್ಲಿದೆ?
ಅ) ಬೆಂಗಳೂರು
ಆ) ದೆಹಲಿ
ಇ) ಮುಂಬೈ
ಈ) ಕೊಲ್ಕತ್ತಾ

10. ರಾಜ್ಯದ ಮಂತ್ರಿಗಳನ್ನು ಯಾರು ನೇಮಕ ಮಾಡುತ್ತಾರೆ?
ಅ) ರಾಜ್ಯಪಾಲರು
ಆ) ರಾಷ್ಟ್ರಪತಿ
ಇ) ಮುಖ್ಯ ನ್ಯಾಯಾಧೀಶರು
ಈ) ಮುಖ್ಯಮಂತ್ರಿ ಸೂಚನೆ ಮೇರೆಗೆ ರಾಜ್ಯಪಾಲರು

ಹಿಂದಿನ ಸಂಚಿಕೆಯ ಸರಿ ಉತ್ತರಗಳು
1. ಕಾರ್ಮಿಕ
2. ರಘುವಂಶ ಸುಧಾಂಬುಧಿ
3. ಸುರಿನಾಮ್
4. ಆಡಳಿತ
5. ಮಂಗಳ
6. ಚಂಬಲ್
7. ಜಲಜನಕ
8. ಎಂ. ಚಿದಾನಂದ ಮೂರ್ತಿ
9. 1975 10. ಭರತ

ಎಸ್‌. ಎಲ್‌. ಶ್ರೀನಿವಾಸ ಮೂರ್ತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು