ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇತ್ರ ಪರಿಚಯ: ಮುಂಬೈ ದಕ್ಷಿಣ, ಮಹಾರಾಷ್ಟ್ರ

Published 15 ಮೇ 2024, 1:28 IST
Last Updated 15 ಮೇ 2024, 1:28 IST
ಅಕ್ಷರ ಗಾತ್ರ

ಮುಂಬೈ ನಗರದ ಆರು ಲೋಕಸಭಾ ಕ್ಷೇತ್ರಗಳಲ್ಲಿ ಮುಂಬೈ ದಕ್ಷಿಣ ಕ್ಷೇತ್ರವೂ ಒಂದು. ಗೇಟ್‌ವೇ ಆಫ್‌ ಇಂಡಿಯಾ, ಬಿಎಸ್‌ಇ, ಮರೀನ್ ಡ್ರೈವ್ ಮತ್ತು ಛತ್ರಪತಿ ಶಿವಾಜಿ ರೈಲು ನಿಲ್ದಾಣ ಸೇರಿದಂತೆ ಹಲವು ಐತಿಹಾಸಿಕ ಹೆಗ್ಗುರುತುಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಮೇ 20 ರಂದು ಮತದಾನ ನಡೆಯಲಿರುವ ಇಲ್ಲಿ ಈ ಬಾರಿ ಶಿವಸೇನಾದ ಎರಡು ಬಣಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಶಿವಸೇನಾ ಉದ್ಧವ್‌ ಠಾಕ್ರೆ ಬಣದಿಂದ ಹಾಲಿ ಸಂಸದ ಅರವಿಂದ್‌ ಸಾವಂತ್‌ ಮತ್ತು ಏಕನಾಥ ಶಿಂದೆ ನೇತೃತ್ವದ ಬಣದಿಂದ ಯಾಮಿನಿ ಜಾಧವ್‌ ಅವರು ಅಖಾಡಕ್ಕಿಳಿದಿದ್ದಾರೆ. 2014 ಮತ್ತು 2019 ರಲ್ಲಿ ಇಲ್ಲಿಂದ ಗೆದ್ದಿದ್ದ ಅರವಿಂದ ಸಾವಂತ್‌, ‘ಹ್ಯಾಟ್ರಿಕ್‌’ ಜಯದ ನಿರೀಕ್ಷೆಯಲ್ಲಿದ್ದಾರೆ. ಈ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆಯ ಸಮಯದಲ್ಲಿ ಮಹಾ ವಿಕಾಸ್‌ ಆಘಾಡಿ (ಎವಿಎ)ಯಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಇದು ತನ್ನ ‘ಸಾಂಪ್ರದಾಯಿಕ ಭದ್ರಕೋಟೆ’ ಎಂದು ಹೇಳಿದ್ದ ಕಾಂಗ್ರೆಸ್, ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂದು ಪಟ್ಟುಹಿಡಿದಿತ್ತು. ಆದರೆ ಕಳೆದ ಎರಡು ಚುನಾವಣೆಗಳಲ್ಲಿ ಇಲ್ಲಿ ತಮ್ಮ ಅಭ್ಯರ್ಥಿ ಗೆದ್ದುದ್ದು, ಅವರಿಗೇ ಟಿಕೆಟ್‌ ನೀಡಬೇಕು ಎಂದು ಶಿವಸೇನಾ (ಯುಬಿಟಿ) ವಾದಿಸಿತ್ತು. ಕೊನೆಗೂ ಸಾವಂತ್‌ ಅವರಿಗೆ ಟಿಕೆಟ್‌ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿತ್ತು. ಇಲ್ಲಿನ ಮತದಾರರಲ್ಲಿ ಶೇ 25 ರಷ್ಟು ಮುಸ್ಲಿಮರು ಇದ್ದು, ಫಲಿತಾಂಶವನ್ನು ನಿರ್ಧರಿಸುವಲ್ಲಿ ಅವರ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ವಿಶ್ಲೇಷಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT