ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಮಹಾತ್ಮೆ: ಕನ್ಯಾಕುಮಾರಿ (ತಮಿಳುನಾಡು)

Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಕಾಂಗ್ರೆಸ್‌, ಬಿಜೆಪಿ ಮತ್ತು ಡಿಎಂಕೆ ಅಭ್ಯರ್ಥಿಗಳಿಗೆ ಈ ಹಿಂದೆ ಗೆಲುವು ತಂದುಕೊಟ್ಟಿದ್ದ ತಮಿಳುನಾಡಿನ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರವು ಈ ಬಾರಿಯೂ ಘಟಾನುಘಟಿ ನಾಯಕರ ಹಣಾಹಣಿಗೆ ಸಾಕ್ಷಿಯಾಗಲಿದೆ. ಕಾಂಗ್ರೆಸ್‌ ಪಕ್ಷವು ವಿಜಯ್‌ ವಸಂತ್‌ ಅವರನ್ನು ಕಣಕ್ಕಿಳಿಸಿದರೆ, ಬಿಜೆಪಿಯು ಪಕ್ಷದ ಹಿರಿಯ ಮುಖಂಡ ಪೊನ್‌ ರಾಧಾಕೃಷ್ಣನ್‌ ಅವರನ್ನು ಪ್ರತಿಸ್ಪರ್ಧಿಯಾಗಿಸಿದೆ. ಎಐಎಡಿಎಂಕೆ ಬೆಸಿಲಿಯನ್ ನಜರೆತ್ ಅವರನ್ನು ಅಖಾಡಕ್ಕಿಳಿಸಿದರೆ, ‘ನಾಮ್ ತಮಿಳರ್ ಕಚ್ಚಿ’ (ಎನ್‌ಟಿಕೆ) ಮರಿಯಾ ಜೆನ್ನಿಫರ್‌ ಅವರನ್ನು ಅಭ್ಯರ್ಥಿಯನ್ನಾಗಿಸಿದೆ.

2019ರಲ್ಲಿ ಉದ್ಯಮಿ ಹಾಗೂ ರಾಜಕಾರಣಿ ಎಚ್. ವಸಂತ ಕುಮಾರ್‌ ಅವರು ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. 2020ರಲ್ಲಿ ಇವರು ನಿಧನರಾದರು. 2021ರಲ್ಲಿ ನಡೆದ ಉಪ ಚುನಾವಣೆಯಲ್ಲಿ ವಸಂತ ಕುಮಾರ್‌ ಅವರ ಪುತ್ರ ವಿಜಯ್‌ ವಸಂತ್‌ ಸ್ಪರ್ಧಿಸಿ ಗೆದ್ದರು. ವಿಜಯ್‌ ವಸಂತ್‌ ಅವರು 1,37,950 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಪೊನ್‌ ರಾಧಾಕೃಷ್ಣನ್‌ ಅವರನ್ನು ಪರಾಭವಗೊಳಿಸಿದ್ದರು.

2014ರಲ್ಲಿ ರಾಧಾಕೃಷ್ಣನ್‌ ಅವರು ಇಲ್ಲಿಂದ ಗೆದ್ದು ಸಂಸತ್‌ ಪ್ರವೇಶಿಸಿದ್ದರು. ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಎನ್‌ಟಿಕೆ ಮತ್ತು ಎಐಎಡಿಎಂಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ ಕಾಂಗ್ರೆಸ್‌ನ ಮತಗಳು ಹಂಚಿ ಹೋಗಲಿವೆ ಮತ್ತು ಇದರಿಂದ ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆಡಳಿತಾರೂಢ ಡಿಎಂಕೆಯು ‘ಇಂಡಿಯಾ’  ಮೈತ್ರಿಕೂಟದಲ್ಲಿರುವುದರಿಂದ ಈ ಪಕ್ಷದ ಮತಗಳು ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಸಹಾಯಕವಾಗಲಿವೆ ಎಂಬುದು ಆ ಪಕ್ಷದ ನಾಯಕರ ವಿಶ್ವಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT