ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಯಾದಗಿರಿ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಳ

ಸುರಪುರ ಉಪಚುನಾವಣೆ ಜತೆಗೆ ಲೋಕಸಭೆಗೆ ಚುನಾವಣೆ
Published 29 ಮಾರ್ಚ್ 2024, 6:14 IST
Last Updated 29 ಮಾರ್ಚ್ 2024, 6:14 IST
ಅಕ್ಷರ ಗಾತ್ರ

ಯಾದಗಿರಿ: 2023ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದಿದ್ದು, 2024ರಲ್ಲಿ ಲೋಕಸಭೆ ಚುನಾವಣೆ ನಿಗದಿಯಾಗಿದೆ. ಕಳೆದ ಬಾರಿಯಿಂದ ಮತದಾರರ ಸಂಖ್ಯೆ ಹೆಚ್ಚಳ ಕಂಡಿದೆ.

ಜಿಲ್ಲೆಯಲ್ಲಿ ನಾಲ್ಕು ಮತಕ್ಷೇತ್ರಗಳಿದ್ದು, ಎರಡು ಲೋಕಸಭೆ ಕ್ಷೇತ್ರಗಳಿಗೆ ಹಂಚಿಕೆಹಯಾಗಿದೆ.

ಯಾದಗಿರಿ, ಶಹಾಪುರ, ಸುರಪುರ ಮತಕ್ಷೇತ್ರವೂ ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಒಳಪಟ್ಟರೆ, ಗುರುಮಠಕಲ್‌ ಮತಕ್ಷೇತ್ರ ಕಲಬುರಗಿ ಲೋಕಸಭೆಗೆ ಸೇರ್ಪಡೆಯಾಗಿದೆ. ಹೀಗಾಗಿ ಜಿಲ್ಲೆಯ ಮತದಾರರು ಇಬ್ಬರು ಸಂಸದರನ್ನು ಆಯ್ಕೆ ಮಾಡಬೇಕಾಗಿದೆ.

ರಾಜ್ಯದಲ್ಲಿ ನಡೆಯುವ ಎರಡನೇ ಹಂತದ ಚುನಾವಣೆ ಮೇ 7ರಂದು ಮತದಾನ ನಡೆಯಲಿದೆ. ಇದರ ಜೊತೆಗೆ ಶಾಸಕರಾಗಿದ್ದ ರಾಜಾ ವೆಂಟಕಪ್ಪ ನಾಯಕ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.

2023ರ ವಿಧಾನಸಭೆ ಚುನಾವಣೆ ವೇಳೆ ಸುರಪುರ ಮತಕ್ಷೇತ್ರದಲ್ಲಿ ಪುರುಷ 1,39,039, ಮಹಿಳೆ 1,36,359, ಶಹಾಪುರ ಮತಕ್ಷೇತ್ರದಲ್ಲಿ ಪುರುಷ 1,19,897, ಮಹಿಳೆ 1,19,037,ಯಾದಗಿರಿ ಮತಕ್ಷೇತ್ರದಲ್ಲಿ ಪುರುಷ 1,18,471, ಮಹಿಳೆ 1,18,935, ಗುರುಮಠಕಲ್‌ ಮತಕ್ಷೇತ್ರದಲ್ಲಿ ಪುರುಷ 1,23,847, ಮಹಿಳೆ 1,24,317 ಮತದಾರರು ಇದ್ದರು.

ಆದರೆ, 2024ರಲ್ಲಿ ಮತದಾರರಲ್ಲಿ ಹೆಚ್ಚಳವಾಗಿದೆ.

ಸುರಪುರ ಮತಕ್ಷೇತ್ರದಲ್ಲಿ ಪುರುಷ 1,41,099, ಮಹಿಳೆ 1,39,136, ಶಹಾಪುರ ಮತಕ್ಷೇತ್ರದಲ್ಲಿ ಪುರುಷ 1,21,968, ಮಹಿಳೆ 1,22,309, ಯಾದಗಿರಿ ಮತಕ್ಷೇತ್ರದಲ್ಲಿ ಪುರುಷ 1,21,729, ಮಹಿಳೆ 1,23,155, ಗುರುಮಠಕಲ್‌ ಮತಕ್ಷೇತ್ರದಲ್ಲಿ ಪುರುಷ 1,25,618, ಮಹಿಳೆ 1,27,078 ಮತದಾರರು ಇದ್ದಾರೆ.

ಅತಿಸೂಕ್ಷ್ಮ ಮತಗಟ್ಟೆಗಳ ಸಂಖ್ಯೆ ಇಳಿಕೆ

ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಅತಿಸೂಕ್ಷ್ಮ ಸೂಕ್ಷ್ಮ ಮತಗಟ್ಟೆಗಳ ಸಂಖ್ಯೆ ಇಳಿಕೆಯಾಗಿದೆ. 2023ರಲ್ಲಿ 227 ಅತಿಸೂಕ್ಷ್ಮ ಸೂಕ್ಷ್ಮ 908 ಮತಗಟ್ಟೆಗಳಿದ್ದವು. 2024ರಲ್ಲಿ ಅತಿಸೂಕ್ಷ್ಮ 201 ಸೂಕ್ಷ್ಮ 933 ಮತಗಟ್ಟೆಗಳಿದ್ದು ಒಟ್ಟಾರೆ 1134 ಮತಗಟ್ಟೆಗಳಿವೆ. ಸುರಪುರ ಮತಕ್ಷೇತ್ರಕ್ಕೆ ಉಪಚುನಾವಣೆ ನಡೆಯುವುದರಿಂದ 78 ಅತಿಸೂಕ್ಷ್ಮ ಮತಗಟ್ಟೆಗಳಿವೆ. 239 ಸೂಕ್ಷ್ಮ ಮತಗಟ್ಟೆಗಳಿವೆ.

ಲಿಂಗತ್ವ ಅಲ್ಪ ಸಂಖ್ಯಾತರು ನೋಂದಣಿ

ಜಿಲ್ಲೆಯಲ್ಲಿ ಕಳೆದ ವಿಧಾನಸಭೆ ಚುನಾವಣೆಗಿಂತ ಈ ಬಾರಿಯ ಲೋಕಸಭೆ ಚುನಾವಣೆಗೆ ಲಿಂಗತ್ವ ಅಲ್ಪ ಸಂಖ್ಯಾತರು ಹೆಚ್ಚು ನೋಂದಣಿ ಮಾಡಿಕೊಂಡಿದ್ದಾರೆ. 2023ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 57 ಜನ ಇದ್ದರು. ಈಗ 68 ಜನ ಆಗಿದ್ದಾರೆ. ಕಳೆದ ಚುನಾವಣೆಯಲ್ಲಿ ಸುರಪುರ ಮತಕ್ಷೇತ್ರದಿಂದ 21 ಶಹಾಪುರ ಮತಕ್ಷೇತ್ರದಿಂದ 16 ಯಾದಗಿರಿ ಮತಕ್ಷೇತ್ರದಿಂದ 17 ಗುರುಮಠಕಲ್‌ ಮತಕ್ಷೇತ್ರದಿಂದ 3 ಜನ ಮಾತ್ರ ನೋಂದಣಿ ಮಾಡಿಕೊಂಡಿದ್ದರು. 2024ರಲ್ಲಿ ಸುರಪುರ ಮತಕ್ಷೇತ್ರದಿಂದ 28 ಶಹಾಪುರ ಮತಕ್ಷೇತ್ರದಿಂದ 15 ಯಾದಗಿರಿ ಮತಕ್ಷೇತ್ರದಿಂದ 20 ಗುರುಮಠಕಲ್‌ ಮತಕ್ಷೇತ್ರದಿಂದ 5 ಜನ ನೋಂದಾಯಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT