ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಾಮುಖಿ: ಚಂಡೀಗಢ

Published 18 ಏಪ್ರಿಲ್ 2024, 20:32 IST
Last Updated 18 ಏಪ್ರಿಲ್ 2024, 20:32 IST
ಅಕ್ಷರ ಗಾತ್ರ

ಮನೀಷ್‌ ತಿವಾರಿ (ಕಾಂಗ್ರೆಸ್‌)

ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದ ಲೋಕಸಭಾ ಕ್ಷೇತ್ರವು ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ ನಡುವಿನ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ. ಕಾಂಗ್ರೆಸ್‌ ಪಕ್ಷವು ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಮನೀಷ್‌ ತಿವಾರಿ ಅವರನ್ನು ಇಲ್ಲಿಂದ ಕಣಕ್ಕಿಳಿಸಿದೆ. ಎಎಪಿಯು ಈ ಬಾರಿ ‘ಇಂಡಿಯಾ‘ ಮೈತ್ರಿಕೂಟದ ಜೊತೆಗಿರುವುದರಿಂದ ಮನೀಷ್‌ ಅವರು ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸ ಕಾಂಗ್ರೆಸ್‌ ವರಿಷ್ಠರದ್ದು. ಕಳೆದ ಚುನಾವಣೆಯಲ್ಲಿ ಮನೀಷ್‌ ಅವರು ಆನಂದಪುರ ಸಾಹಿಬ್‌ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಎನ್‌ಎಸ್‌ಯುಐನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿರುವ ಇವರು ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡವರು. ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂಬ ವಿಚಾರವನ್ನು ಪ್ರಮುಖ ಪ್ರಚಾರ ವಿಷಯವನ್ನಾಗಿಸಿ ಮನೀಷ್‌ ಅವರು ಮತಯಾಚಿಸುತ್ತಿದ್ದಾರೆ.

.............

ಸಂಜಯ್‌ ಟಂಡನ್‌ (ಬಿಜೆಪಿ)

ಚಂಡೀಗಢದಲ್ಲಿ ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿ ಮನೀಷ್‌ ತಿವಾರಿ ಅವರನ್ನು ಮಣಿಸಲು ಬಿಜೆಪಿಯು ಸಂಜಯ್‌ ಟಂಡನ್‌ ಅವರನ್ನು ಅಖಾಡಕ್ಕಿಳಿಸಿದೆ. ಬಿಜೆಪಿಯ ಚಂಡೀಗಢ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಸಂಜಯ್‌ ಅವರು ಪಕ್ಷ ಸಂಘಟನೆಗಾಗಿ ದುಡಿದವರು. ಇವರು ಇದೇ ಮೊದಲ ಬಾರಿ ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್‌ ಖೇರ್‌ ಅವರು ಇಲ್ಲಿಂದ ಸ್ಪರ್ಧಿಸಿ, 46,970 ಮತಗಳ ಅಂತರದಿಂದ ಕಾಂಗ್ರೆಸ್‌ನ ಪವನ್‌ ಕುಮಾರ್‌ ಬನ್ಸಲ್‌ ಅವರನ್ನು ಪರಾಭವಗೊಳಿಸಿದ್ದರು. ಕಿರಣ್ ಖೇರ್‌ ಅವರು ಇಲ್ಲಿಂದ ಎರಡು ಬಾರಿ ಗೆದ್ದಿದ್ದರು. ಕ್ಷೇತ್ರದಲ್ಲಿ ಈ ಬಾರಿಯೂ ಪಕ್ಷಕ್ಕೆ ಅನುಕೂಲಕರ ವಾತಾರಣವಿದ್ದು, ಸಂಜಯ್‌ ಅವರು ಜಯ ಗಳಿಸುತ್ತಾರೆಂಬುದು ಬಿಜೆಪಿ ನಾಯಕರ ವಿಶ್ವಾಸ. ಲೇಖಕರೂ ಆಗಿರುವ ಸಂಜಯ್‌ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. 

ಸಂಜಯ್‌ ಟಂಡನ್
ಸಂಜಯ್‌ ಟಂಡನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT