ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಎಂಥಾ ಮಾತು | ಅನುರಾಗ್‌ ಠಾಕೂರ್‌ ಹಾಗೂ ಮಮತಾ ಬ್ಯಾನರ್ಜಿ ಹೇಳಿಕೆ

Published : 7 ಮೇ 2024, 0:18 IST
Last Updated : 7 ಮೇ 2024, 0:18 IST
ಫಾಲೋ ಮಾಡಿ
Comments
ಸುಳ್ಳು ಭರವಸೆಗಳನ್ನು ನೀಡಿ ಚುನಾವಣೆಯನ್ನು ಗೆಲ್ಲಬಹುದು ಎಂಬ ಕಾಂಗ್ರೆಸ್‌ನ ಕನಸು ನುಚ್ಚುನೂರಾಗಲಿದೆ. ಕಾಂಗ್ರೆಸ್‌ನ ಪ್ರಣಾಳಿಕೆಯ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆ. ಮೊದಲು ಅಮೇಠಿಯಿಂದ ವಯನಾಡಿಗೆ ಓಡಿಹೋದ ರಾಹುಲ್‌ ಗಾಂಧಿ ಅವರು ಇದೀಗ ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ರಾಯ್‌ಬರೇಲಿಯಲ್ಲೂ ಸೋಲು ಎದುರಾಗಲಿದೆ
-ಅನುರಾಗ್‌ ಠಾಕೂರ್‌, ಕೇಂದ್ರ ಸಚಿವ
ADVERTISEMENT
ಬಿಜೆಪಿಯು ಲೋಕಸಭಾ ಚುನಾವಣೆಯನ್ನು ಗೆಲ್ಲಲು ಸುಳ್ಳುಗಳ ನೀಲನಕ್ಷೆಯನ್ನು ರೂಪಿಸುತ್ತಿದೆ. ಬಂಗಾಳದಲ್ಲಿ ಗಲಭೆಗೆ ಸಂಚು ರೂಪಿಸಿರುವ ಪ್ರಧಾನಿಗೆ ನೀವು ಮತ ಹಾಕುವಿರಾ? ನೀವು (ಬಿಜೆಪಿ) ಹಣದ ಆಮಿಷವೊಡ್ಡಿ ನಮ್ಮ ನಾಯಕರ ವಿರುದ್ಧ ಆರೋಪ ಮಾಡುವಂತೆ (ಸಂದೇಶ್‌ಖಾಲಿ ಪ್ರಕರಣ) ಪಿತೂರಿ ಮಾಡಿದ್ದೀರಿ. ಆ ಮೂಲಕ ಬಂಗಾಳದ ಕೋಟ್ಯಂತರ ತಾಯಂದಿರು ಮತ್ತು ಸಹೋದರಿಯರಿಗೆ ಅಗೌರವ, ಅವಮಾನ ಉಂಟುಮಾಡಿದ್ದೀರಿ. ಇಂತಹ ಕೃತ್ಯಕ್ಕೆ ನಾಚಿಕೆಯಾಗಬೇಕು
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT