ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥಾ ಮಾತು: ಅಲ್ಕಾ ಲಾಂಬಾ ಮತ್ತು ಅನುರಾಗ್ ಠಾಕೂರ್ ಹೇಳಿಕೆ

Published 28 ಮೇ 2024, 1:06 IST
Last Updated 28 ಮೇ 2024, 1:06 IST
ಅಕ್ಷರ ಗಾತ್ರ

ಜಾರಿ ನಿರ್ದೇಶನಾಲಯ, ಸಿಬಿಐ ಸಂಸ್ಥೆಗಳ ದುರುಪಯೋಗ ಮತ್ತು ಚುನಾವಣಾ ಬಾಂಡ್‌ಗಳು ಬಿಜೆಪಿಗೆ ಅಧಿಕಾರ ಉಳಿಸಿಕೊಳ್ಳಲು ಸಹಾಯ ಮಾಡುವುದಿಲ್ಲ. ನಾನು 27 ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದೇನೆ. ಬಿಜೆಪಿ ಪ್ರತಿಪಾದಿಸುತ್ತಿರುವ ಮೋದಿ ಅಲೆ ಎಲ್ಲೂ ಕಾಣಲಿಲ್ಲ. ಸದ್ಯ ಎಲ್ಲ ಕಡೆ ಇರುವುದು ಎರಡೇ ವಿಚಾರಗಳು: ನಿರುದ್ಯೋಗ ಮತ್ತು ಹಣದುಬ್ಬರ. ಮೋದಿ ಸರ್ಕಾರವು ವ್ಯಾಪಾರಿ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದೆ. 21 ಉದ್ಯಮಿಗಳ ₹16 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಲಾಗಿದೆ.

– ಅಲ್ಕಾ ಲಾಂಬಾ, ಕಾಂಗ್ರೆಸ್ ನಾಯಕಿ 

ಭಾರತದಲ್ಲಿ ಬದುಕುತ್ತಿರುವ ಕಾಂಗ್ರೆಸ್‌ನವರು ಪಾಕಿಸ್ತಾನವನ್ನು ಹೊಗಳುವುದು ಏಕೆ? ಭಾರತದ ಚುನಾವಣೆಯ ಸಂದರ್ಭದಲ್ಲಿ, ನಿರ್ದಿಷ್ಟ ಸಮುದಾಯವನ್ನು ಓಲೈಸಲು ಪಾಕಿಸ್ತಾನವನ್ನು ಶ್ಲಾಘಿಸುವುದು ಎಂಥ ಅಸಹ್ಯಕರ ರಾಜಕಾರಣ. ದೇಶ ವಿಭಜನೆಯಾದ 75 ವರ್ಷಗಳ ನಂತರವೂ ಪಾಕಿಸ್ತಾನದೊಂದಿಗೆ ಕಾಂಗ್ರೆಸ್ ಸಂಬಂಧ ಬೆಸೆದುಕೊಂಡೇ ಇದೆ. ಕಾಂಗ್ರೆಸ್ ನಾಯಕರು ದೇಶದ ಸೈನ್ಯದ ಬಲವರ್ಧನೆಗೆ ಮೀಸಲಿದ್ದ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡರು. ಸೂಕ್ತ ವ್ಯವಸ್ಥೆಯಿಲ್ಲದೆ ನಮ್ಮ ಸೈನಿಕರು ಗಡಿಗಳಲ್ಲಿ ಸಾವಿಗೆ ಶರಣಾದರು.

– ಅನುರಾಗ್ ಠಾಕೂರ್, ಕೇಂದ್ರ ಸಚಿವ

ಅನುರಾಗ್ ಠಾಕೂರ್
ಅನುರಾಗ್ ಠಾಕೂರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT