ನವದೆಹಲಿ: ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ‘ಸಂಪೂರ್ಣ ವಿಫಲರಾಗಿರುವ’ ಪ್ರಧಾನಿ ಮೋದಿ ಹತಾಶರಾಗಿದ್ದು, ಭಯ ಹರಡುವುದರಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದೆ.

ಪ್ರಧಾನಿ ಮೋದಿ ಅವರ ಕರ್ನಾಟಕ ಪ್ರವಾಸದ ಹಿನ್ನೆಲೆಯಲ್ಲಿ ಅವರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್’ ವೇದಿಕೆಯಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

‘ಜನರ ಪ್ರತಿನಿಧಿಗಳಾಗಿ ಬಿಜೆಪಿ ಸಂಸದರು ಕಳಪೆ ಸಾಧನೆ ಮಾಡಿದ್ದು ಏಕೆ, ಏಳು ತಿಂಗಳ ವಿಳಂಬದ ನಂತರ, ಕೇಂದ್ರ ಸರ್ಕಾರವು ಕೇವಲ ಶೇ 20ಕ್ಕಿಂತ ಕಡಿಮೆ ಬರ ಪರಿಹಾರ ಬಿಡುಗಡೆ ಮಾಡಿದ್ದು ಏಕೆ, ಭದ್ರಾ ಮೇಲ್ದಂಡೆ ಯೋಜನೆಯನ್ನು ತಡೆಹಿಡಿದಿರುವುದು ಏಕೆ’ ಎಂದು ಪ್ರಶ್ನಿಸಿದ್ದಾರೆ.

‘ಸಂಸತ್ನಲ್ಲಿ ಸಂಸದರ ಸರಾಸರಿ ಹಾಜರಾತಿ ಶೇ 79 ಆಗಿದ್ದರೆ, ಕರ್ನಾಟಕದ 28 ಸಂಸದರ ಹಾಜರಾತಿ ಶೇ 71 ಆಗಿದೆ. ಜತೆಗೆ ಕರ್ನಾಟಕದ 26 ಸಂಸದರು ರಾಜ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಎಂದೂ ಧ್ವನಿ ಎತ್ತಿಲ್ಲ. ಕರ್ನಾಟಕದ ಜನರ ವಿಚಾರದಲ್ಲಿ ಪ್ರಧಾನಿ ಮೋದಿ ಅವರಿಗೆ ಅಸಡ್ಡೆ ಏಕೆ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.