ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರಪ್ರದೇಶ: ಇದೇ ಮೊದಲ ಬಾರಿಗೆ ಶೇ 81.86ರಷ್ಟು ದಾಖಲೆಯ ಮತದಾನ

Published 15 ಮೇ 2024, 13:35 IST
Last Updated 15 ಮೇ 2024, 13:35 IST
ಅಕ್ಷರ ಗಾತ್ರ

ಅಮರಾವತಿ (ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ಸೋಮವಾರ ನಡೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಶೇ 81.86 ಮತದಾನ ಆಗಿದೆ. 

ಇವಿಎಂ ಮೂಲಕ ಶೇ 80.66 ಹಾಗೂ ಅಂಚೆ ಮೂಲಕ ಶೇ 1.2 ಮತದಾನ ನಡೆದಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಬುಧವಾರ ಮಾಹಿತಿ ನೀಡಿದ್ದಾರೆ. 

ಆಂಧ್ರಪ್ರದೇಶದಲ್ಲಿ ಲೋಕಸಭೆಯ 25 ಮತ್ತು ವಿಧಾನಸಭೆಯ 175 ಸ್ಥಾನಗಳಿಗೆ ಮತದಾನ ನಡೆದಿತ್ತು. ಒಟ್ಟು 4.13 ಕೋಟಿ ಮತದಾರರಲ್ಲಿ 3.33 ಕೋಟಿ ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ಮತದಾನ ಪ್ರಮಾಣ ಶೇ 80 ದಾಟಿದ್ದು ಇದೇ ಮೊದಲು. 2014 ರಲ್ಲಿ ಶೇ 78.41 ಹಾಗೂ 2019 ರಲ್ಲಿ ಶೇ 79.77 ಮತದಾನ ನಡೆದಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT