ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಜರಾತ್‌: ಬಿಜೆಪಿ ಮತಪ್ರಮಾಣ ಶೇ 1.25 ಕುಸಿತ

Published 5 ಜೂನ್ 2024, 16:25 IST
Last Updated 5 ಜೂನ್ 2024, 16:25 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ನ 26 ಲೋಕಸಭೆ ಸ್ಥಾನಗಳಲ್ಲಿ 25 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಇದರ ಹೊರತಾಗಿಯೂ ಪಕ್ಷದ ಪತ ಪ್ರಮಾಣದಲ್ಲಿ ಶೇ 1.25ರಷ್ಟು ಕಡಿಮೆಯಾಗಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಶೇ 63.11 ಮತಗಳಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಅದರ ಮತಪ್ರಮಾಣ ಶೇ 61.86ಕ್ಕೆ ಕುಸಿದಿದೆ. 

25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ‘ಇಂಡಿಯಾ’ ಒಕ್ಕೂಟ (ಕಾಂಗ್ರೆಸ್‌ ಮತ್ತು ಎಎಪಿ) ಗಳಿಸಿದ ಮತಪ್ರಮಾಣ ಶೇ 33.93. ಇದರಲ್ಲಿ ಕಾಂಗ್ರೆಸ್‌ನ ಮತಪ್ರಮಾಣ ಶೇ 31.24 ಮತ್ತು ಎಎಪಿ ಮತಪ್ರಮಾಣ ಶೇ 2.69.

2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಮತಪ್ರಮಾಣ ಶೇ 32.55.

ರಾಜ್ಯದ ಬನಸ್ಕಾಂತ ಒಂದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ ಈ ಬಾರಿ ಜಯಗಳಿಸಿದೆ.

ಬಹುಜನ ಸಮಾಜ ಪಕ್ಷ ಕೂಡಾ ಗುಜರಾತ್‌ನ ಎಲ್ಲಾ 26 ಕ್ಷೇತ್ರಗಳಲ್ಲೂ ಸ್ಪರ್ಧಿಸಿ ಶೇ 0.76 ಮತ ಗಳಿಸಿದೆ. ನೋಟಾಕ್ಕೆ ಶೇ 1.56 ಮತ ಸಂದಾಯವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT