ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರದ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ವಿರುದ್ಧ ಅಮಿತ್ ಶಾ ವಾಗ್ದಾಳಿ

Published 28 ಏಪ್ರಿಲ್ 2024, 16:11 IST
Last Updated 28 ಏಪ್ರಿಲ್ 2024, 16:11 IST
ಅಕ್ಷರ ಗಾತ್ರ

ಕಾಸ್‌ಗಂಜ್, ಉತ್ತರ ಪ್ರದೇಶ: ರಾಮ ಮಂದಿರದ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಕರಸೇವಕರತ್ತ ಗುಂಡು ಹಾರಿಸಿದವರು ಮತ್ತು ರಾಮ ಮಂದಿರ ನಿರ್ಮಿಸಿದವರ ನಡುವಿನ ಆಯ್ಕೆ ಜನರ ಮುಂದಿದೆ’ ಎಂದು ಹೇಳಿದರು.

ಅವರು ಉತ್ತರ ಪ್ರದೇಶದ ಎಟಾ–ಕಾಸ್‌ಗಂಜ್ ಬಿಜೆಪಿ ಅಭ್ಯರ್ಥಿ ರಾಜ್‌ವೀರ್ ಸಿಂಗ್ ಪರವಾಗಿ ರ್‍ಯಾಲಿ ನಡೆಸಿ ಮಾತನಾಡಿದರು.

ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಹಾಜರಾಗದ ವಿರೋಧ ಪಕ್ಷಗಳನ್ನು ಟೀಕಿಸಿದ ಅವರು, ‘ರಾಮ ಮಂದಿರದ ಉದ್ಘಾಟನೆಗೆ ಹಾಜರಾಗದವರಿಗೆ ಗೊತ್ತು, ಅವರೇ ಕರಸೇವಕರತ್ತ ಗುಂಡು ಹಾರಿಸಿದವರು ಎನ್ನುವುದು’ ಎಂದು ಹೇಳಿದರು.

‘ಕಾಂಗ್ರೆಸ್, ರಾಹುಲ್ ‘ಬಾಬಾ’ ಮತ್ತು ಅಖಿಲೇಶ್ ಯಾದವ್ ಅವರ ಪಕ್ಷ (ಎಸ್‌ಪಿ) ರಾಮ ಮಂದಿರ ವಿವಾದವನ್ನು 70 ವರ್ಷಕ್ಕೂ ಹೆಚ್ಚು ಕಾಲ ಅನಿಶ್ಚಿತವಾಗಿಟ್ಟಿದ್ದವು. ನೀವು ಮೋದಿ ಅವರನ್ನು ಎರಡನೇ ಬಾರಿ ಪ್ರಧಾನಿ ಮಂತ್ರಿ ಮಾಡಿದಿರಿ. ಅವರು ಜೈ ಶ್ರೀರಾಮ್ ಎಂದು ಹೇಳಿ, ಜನವರಿ 22ರಂದು ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು’ ಎಂದು ತಿಳಿಸಿದರು.

ವಿರೋಧ ಪಕ್ಷಗಳು ಹಿಂದುಳಿದ ಸಮುದಾಯಗಳ ಜನರನ್ನು ನಿರ್ಲಕ್ಷಿಸಿದವು. ಮೋದಿ ಅವರು ಪ್ರಧಾನಿಯಾದ ನಂತರ ಅವರಿಗೆ ಹಕ್ಕು ನೀಡಿದರು ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT