ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆಯ ಮತದಾನ ಪ್ರಮಾಣ ವ್ಯತ್ಯಾಸ: ಕಾಂಗ್ರೆಸ್ ಕಳವಳ

ಕಾಂಗ್ರೆಸ್ ಮುಖಂಡ ಹಾಗೂ ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅಭಿಪ್ರಾಯಪಟ್ಟಿದ್ದಾರೆ.
Published 22 ಮೇ 2024, 14:31 IST
Last Updated 22 ಮೇ 2024, 14:31 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ ಮತದಾನ ಪ್ರಮಾಣದ ಬಗ್ಗೆ ಚುನಾವಣಾ ಆಯೋಗವು ಮೊದಲು ಬಿಡುಗಡೆ ಮಾಡಿದ ಅಂಕಿಅಂಶಗಳಿಗೂ ಅಂತಿಮವಾಗಿ ಬಿಡುಗಡೆ ಮಾಡಿದ ಅಂಕಿಅಂಶಗಳಿಗೂ ದೊಡ್ಡ ಮಟ್ಟದ ವ್ಯತ್ಯಾಸಗಳಿವೆ. ನಾಲ್ಕು ಹಂತದ ಮತದಾನದ ಸುತ್ತಲಿನ ‘ವಿಚಿತ್ರ ಬೆಳವಣಿಗೆಗಳ’ ಬಗ್ಗೆ ಮತದಾರರು ಕಳವಳಗೊಂಡಿದ್ದಾರೆ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.‌

‘ಎರಡೂ ಅಂಕಿಅಂಶಗಳ ನಡುವಿನ ಮತ ವ್ಯತ್ಯಾಸವು 1.7 ಕೋಟಿ ಆಗಿದ್ದು, ಹಿಂದೆಂದೂ ಈ ರೀತಿ ಆಗಿರಲಿಲ್ಲ’ ಎಂದು ಕಾಂಗ್ರೆಸ್ ಮುಖಂಡ ಹಾಗೂ ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅಭಿಪ್ರಾಯಪಟ್ಟಿದ್ದಾರೆ.

‘ಮತದಾನ ಪ್ರಮಾಣದ ಅಂತಿಮ ವಿವರ ಪ್ರಕಟಿಸಲು ಚುನಾವಣಾ ಆಯೋಗವು 10–11 ದಿನ ತೆಗೆದುಕೊಂಡಿತು’ ಎಂದಿರುವ ಅವರು, ‘ಇವಿಎಂಗಳು ಕಣ್ಮರೆಯಾಗಿರುವುದರ ಬಗೆಗಿನ ಉತ್ತರವಿಲ್ಲದ ಪ್ರಶ್ನೆಗಳು ಕೂಡ ಕಳವಳ ಉಂಟುಮಾಡಿವೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಮತದಾನ ಪ್ರಮಾಣದ ಒಟ್ಟಾರೆ ವ್ಯತ್ಯಾಸವಾದ 1.7 ಕೋಟಿಯನ್ನು ಲೋಕಸಭಾ ಕ್ಷೇತ್ರವಾರು ತೆಗೆದುಕೊಂಡರೆ, 28 ಸಾವಿರ ಹೆಚ್ಚಳ ಎಂದಾಗುತ್ತದೆ. ಇದು ಬೃಹತ್ ವ್ಯತ್ಯಾಸ’ ಎಂದಿದ್ದಾರೆ.

‘ಬಿಜೆಪಿಯು ಹೆಚ್ಚು ಸ್ಥಾನಗಳನ್ನು ಸೋಲುವ ಸಂಭವ ಇರುವ ರಾಜ್ಯಗಳಲ್ಲಿ ಅಂಕಿಅಂಶದ ವ್ಯತ್ಯಾಸ ಹೆಚ್ಚಾಗಿದೆ. ಏನು ನಡೆಯುತ್ತಿದೆ’ ಎಂದು ಪ್ರಶ್ನಿಸಿದ್ದಾರೆ.

ಮತದಾನದ ಅಂತಿಮ ವಿವರ ಬಿಡುಗಡೆಯಲ್ಲಿನ ವಿಳಂಬದ ಬಗ್ಗೆ ಇತರೆ ವಿರೋಧ ಪಕ್ಷಗಳೂ ಪ್ರಶ್ನೆಗಳನ್ನು ಎತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT