ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Exit Poll Results Highlights:ಕೇಂದ್ರದಲ್ಲಿ ಮೋದಿ; ರಾಜ್ಯದಲ್ಲೂ ಬಿಜೆಪಿ ಮುಂದೆ

Published 1 ಜೂನ್ 2024, 14:07 IST
Last Updated 1 ಜೂನ್ 2024, 14:07 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಮತದಾನ ಇಂದು ಸಂಪನ್ನಗೊಂಡಿದೆ. ಜೂನ್ 4ರಂದು ಫಲಿತಾಂಶ ಪ್ರಕಟಗೊಳ್ಳಲಿದ್ದು, ಯಾರಿಗೆ ಬಹುಮತ ಒಲಿಯಲಿದೆ ಎಂಬ ಕುತೂಹಲ ಗರಿಗೆದರಿದೆ. ಇದರ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆ ವರದಿಗಳು ಪ್ರಕಟಗೊಂಡಿದೆ. ಎಕ್ಸಿಟ್ ಪೋಲ್ ಭವಿಷ್ಯ ನಿಜವಾಗಲಿದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಮತಗಟ್ಟೆ ಸಮೀಕ್ಷೆ ಪ್ರಕಾರ ಯಾರಿಗೆ ಬಹುಮತ ಒಲಿಯಲಿದೆ? ಇಲ್ಲಿದೆ ಮಾಹಿತಿ...

ಮತಚಲಾವಣೆಯ ಅವಧಿ ಮುಗಿಯುತ್ತದ್ದಂತೆ ವಿವಿಧ ವಿದ್ಯುನ್ಮಾನ ಮಾಧ್ಯಮಗಳು ಸಂಸ್ಥೆಗಳೊಂದಿಗೆ ನಡೆಸಿದ ಮತಗಟ್ಟೆ ಸಮೀಕ್ಷೆ ಪ್ರಕಟುಗೊಂಡಿದ್ದು, ದೇಶದ ಮತದಾರರು ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷವನ್ನು ಗದ್ದುಗೆಯ ಸನಿಹಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ ಎಂದೇ ಹೇಳಿವೆ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರ ಪಡೆಯುವ ಸಾಧ್ಯತೆ ಕಂಡುಬಂದಿದೆ. ಆದರೆ ಎಕ್ಸಿಟ್ ಪೋಲ್ ಭವಿಷ್ಯ ನಿಜವಾಗಲಿದೆಯೇ ಎಂಬುದಕ್ಕೆ ಜೂನ್ 4ರವರೆಗೆ ಕಾಯಬೇಕಿದೆ.

*ಕೇಂದ್ರದಲ್ಲಿ ಎನ್‌ಡಿಎ 350ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಮ್ಯಾಜಿಕ್ ಸಂಖ್ಯೆ 272 ಆಗಿದೆ.

*ಕರ್ನಾಟಕದಲ್ಲೂ ಬಿಜೆಪಿ ಭರ್ಜರಿ ಮುನ್ನಡೆಯನ್ನು ಕಾಯ್ದುಕೊಳ್ಳಲಿವೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ.

*ಕೇರಳ ಹಾಗೂ ತಮಿಳುನಾಡಿನಲ್ಲಿ ಎನ್‌ಡಿಎ ಖಾತೆ ತೆರೆಯಲಿದೆ ಎಂದು ಕೆಲವು ಸಮೀಕ್ಷೆಗಳು ಅಂದಾಜು ಮಾಡಿವೆ.

*ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಪ್ರಾಬಲ್ಯ ಮೆರೆಯಲಿದೆ. ಹಾಗಿದ್ದರೂ ಬಿಹಾರ, ರಾಜಸ್ಥಾನ, ಹರಿಯಾಣದಲ್ಲಿ ಅಲ್ಪ ಹಿನ್ನಡೆ ಅನುಭವಿಸಲಿದೆ ಎಂದಿದೆ.

*ಗುಜರಾತ್, ಛತ್ತೀಸ್‌ಗಢ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯ ಗೆಲುವಿನ ಓಟ ಮುಂದುವರಿಯಲಿದೆ.

*ಪಿಎಂಎಆರ್‌ಕ್ಯೂ ಮತಗಟ್ಟೆ ಸಮೀಕ್ಷೆ ಪ್ರಕಾರ ಎನ್‌ಡಿಎ 359, ಇಂಡಿಯಾ ಮೈತ್ರಿಕೂಟ 154 ಹಾಗೂ ಇತರರು 30 ಸ್ಥಾನಗಳನ್ನು ಗಳಿಸಲಿವೆ.

*ಡಿ-ಡೈನಾಮಿಕ್ಸ್ ಮತಗಟ್ಟೆ ಸಮೀಕ್ಷೆ ಪ್ರಕಾರ, ಎನ್‌ಡಿಎ 371, 'ಇಂಡಿಯಾ' ಮೈತ್ರಿಕೂಟ 47 ಸ್ಥಾನಗಳನ್ನು ಗಳಿಸಲಿವೆ.

*ಮ್ಯಾಟ್ರಿಝ್ ಮತಗಟ್ಟೆ ಸಮೀಕ್ಷೆ ಪ್ರಕಾರ' ಎನ್‌ಡಿಎ 353-368, 'ಇಂಡಿಯಾ' ಮೈತ್ರಿಕೂಟ 118-133 ಹಾಗೂ ಇತರರು 43-48 ಸ್ಥಾನಗಳನ್ನು ಗಳಿಸಲಿವೆ.

*ಜನ್ ಕೀ ಬಾತ್ ಮತಗಟ್ಟೆ ಸಮೀಕ್ಷೆ ಪ್ರಕಾರ' ಎನ್‌ಡಿಎ 377, 'ಇಂಡಿಯಾ' ಮೈತ್ರಿಕೂಟ 151 ಹಾಗೂ ಇತರರು 15 ಸ್ಥಾನಗಳನ್ನು ಗಳಿಸಲಿವೆ.

*ನ್ಯೂಸ್ ನೇಷನ್ ಮತಗಟ್ಟೆ ಸಮೀಕ್ಷೆ ಪ್ರಕಾರ' ಎನ್‌ಡಿಎ 360 ಹಾಗೂ 'ಇಂಡಿಯಾ' ಮೈತ್ರಿಕೂಟ 161 ಸ್ಥಾನಗಳನ್ನು ಗಳಿಸಲಿವೆ.

ಪೋಲ್ ಆಫ್ ಪೋಲ್ಸ್

ಇಂಡಿಯಾ ನ್ಯೂಸ್ ಡಿ-ಡೈನಾಮಿಕ್ಸ್

ಎನ್‌ಡಿಎ: 371

ಇಂಡಿಯಾ: 125

ಇತರೆ: 47

ಜನ್ ಕೀ ಬಾತ್

ಎನ್‌ಡಿಎ: 362-392

ಇಂಡಿಯಾ: 141-161

ಇತರೆ: 10-20

ನ್ಯೂಸ್ ನೇಷನ್

ಎನ್‌ಡಿಎ: 342-378

ಇಂಡಿಯಾ: 153-169

ಇತರೆ: 21-23

ರಿಪಬ್ಲಿಕ್ ಭಾರತ್-ಮ್ಯಾಟ್ರಿಝ್

ಎನ್‌ಡಿಎ: 353-368

ಇಂಡಿಯಾ: 118-133

ಇತರೆ: 43-48

ಕರ್ನಾಟಕದಲ್ಲಿ ಯಾರಿಗೆ ಮುನ್ನಡೆ?

ಕರ್ನಾಟಕದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿವೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಸಿಎನ್ಎನ್

ಬಿಜೆಪಿ: 23-26

ಜೆಡಿಎಸ್: 00

ಕಾಂಗ್ರೆಸ್: 3-7

ಇಂಡಿಯಾ ಟಿವಿ

ಬಿಜೆಪಿ: 18-22

ಜೆಡಿಎಸ್: 1-3

ಕಾಂಗ್ರೆಸ್: 4-8

ಪೋಲ್ ಸ್ಟ್ರ್ಯಾಟ್

ಬಿಜೆಪಿ: 18

ಜೆಡಿಎಸ್: 2

ಕಾಂಗ್ರೆಸ್: 8

ಇಂಡಿಯಾ ಟುಡೇ

ಬಿಜೆಪಿ: 20-22

ಜೆಡಿಎಸ್: 2-3

ಕಾಂಗ್ರೆಸ್: 3-5

ಪೋಲ್ ಹಬ್

ಬಿಜೆಪಿ: 21-24

ಜೆಡಿಎಸ್: 1-2

ಕಾಂಗ್ರೆಸ್: 3-7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT