ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls | ಜನರಿಂದ ಸುಳ್ಳು, ದ್ವೇಷ ಮತ್ತು ಅಪಪ್ರಚಾರದ ತಿರಸ್ಕಾರ: ರಾಹುಲ್ ಗಾಂಧಿ

Published 25 ಮೇ 2024, 6:04 IST
Last Updated 25 ಮೇ 2024, 6:04 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಗೆ ನಡೆಯುತ್ತಿರುವ ಆರನೇ ಹಂತದ ಮತದಾನದ ವೇಳೆ ನವದೆಹಲಿಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ರಾಹುಲ್ ಗಾಂಧಿ ಮತ ಚಲಾಯಿಸಿದ್ದಾರೆ.

ಈ ವೇಳೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಅರ್ಹ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.

ಮತದಾನದ ಬಳಿಕ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ರಾಹುಲ್ ಗಾಂಧಿ ಸೆಲ್ಫಿ ಕ್ಲಿಕ್ಕಿಸಿದ್ದಾರೆ.

'ಮೊದಲ ಐದು ಹಂತದ ಮತದಾನದಲ್ಲಿ ದೇಶದ ಜನರು ಸುಳ್ಳು, ದ್ವೇಷ ಮತ್ತು ಅಪಪ್ರಚಾರವನ್ನು ತಿರಸ್ಕರಿಸಿದ್ದಾರೆ. ಬದುಕಿಗೆ ಸಂಬಂಧಿಸಿದ ತಳಮಟ್ಟದ ನೈಜ ಸಮಸ್ಯೆಗಳಿಗೆ ಆದತ್ಯೆ ನೀಡಿದ್ದಾರೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

'ನಿಮ್ಮ ಮತವು ಬದುಕನ್ನು ಸುಧಾರಿಸುವುದಲ್ಲದೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಣೆ ಮಾಡುತ್ತದೆ' ಎಂದು ಅವರು ಉಲ್ಲೇಖ ಮಾಡಿದ್ದಾರೆ.

'ಇಂದು ಆರನೇ ಹಂತದ ಮತದಾನ ನಡೆಯುತ್ತಿದೆ. ನಿಮ್ಮ ಮತದಾನದ ಮೂಲಕ, ಖಾಲಿ ಇರುವ 30 ಲಕ್ಷ ಸರ್ಕಾರಿ ಉದ್ಯೋಗದ ಭರ್ತಿ, ಯುಜನತೆಗೆ ವರ್ಷಕ್ಕೆ ₹1 ಲಕ್ಷ ಉದ್ಯೋಗ ಖಾತರಿ ಯೋಜನೆ, ಬಡ ಕುಟುಂಬದ ಮಹಿಳೆಯರ ಖಾತೆಗೆ ತಿಂಗಳಿಗೆ ₹8,500, ರೈತರು ಸಾಲಮುಕ್ತರಾಗಲಿದ್ದು, ತಮ್ಮ ಬೆಳೆಗಳಿಗೆ ಸರಿಯಾದ ಎಂಎಸ್‌ಪಿ ಪಡೆಯಲಿದ್ದಾರೆ. ಕಾರ್ಮಿಕರಿಗೆ ₹400 ದಿನಗೂಲಿ ಲಭಿಸಲಿದೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT