ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಕಾಂಗ್ರೆಸ್ ಮತ ಪ್ರಮಾಣ ಇಳಿಕೆ, ನೋಟಾ ಏರಿಕೆ

Published 5 ಜೂನ್ 2024, 14:33 IST
Last Updated 5 ಜೂನ್ 2024, 14:33 IST
ಅಕ್ಷರ ಗಾತ್ರ

ಭೋಪಾಲ್: ಮಧ್ಯಪ್ರದೇಶ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದರೆ, ಕಾಂಗ್ರೆಸ್‌ನ ಮತ ಪ್ರಮಾಣ ಶೇ 2ರಷ್ಟು ಕುಸಿದಿದ್ದು, ಬಿಜೆಪಿ ಮತ ಪ್ರಮಾಣ ಶೇ 1ರಷ್ಟು ಏರಿಕೆ ಆಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅನುಪಮ್ ರಾಜನ್ ಬುಧವಾರ ತಿಳಿಸಿದ್ದಾರೆ.

ಕಾಂಗ್ರೆಸ್ ಈ ಬಾರಿ ಶೇ 32.44ರಷ್ಟು ಮತ ಗಳಿಸಿದ್ದರೆ, ಬಿಜೆಪಿ ಶೇ 59.28ರಷ್ಟು ಮತ ಗಳಿಸಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಬಿಎಸ್‌ಪಿ ಮತ ಪ್ರಮಾಣ ಕಳೆದ ಬಾರಿಗಿಂತ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಶೇ 3.28ರಷ್ಟು ಮತಗಳನ್ನು ಗಳಿಸಿದೆ.

ಕಾಂಗ್ರೆಸ್ ಪ್ರಾಬಲ್ಯವಿದ್ದ ಛಿಂದ್ವಾಡ ಸೇರಿದಂತೆ ರಾಜ್ಯದ ಎಲ್ಲ 29 ಕ್ಷೇತ್ರಗಳನ್ನೂ ಬಿಜೆಪಿ ಗೆದ್ದುಕೊಂಡಿದೆ. ರಾಜ್ಯದಲ್ಲಿ ಒಟ್ಟು 5,33,705 ನೋಟಾ (ಮತ ಯಾರಿಗೂ ಇಲ್ಲ) ಚಲಾವಣೆಯಾಗಿದ್ದು, ಇವುಗಳ ಪೈಕಿ ಇಂದೋರ್ ಕ್ಷೇತ್ರವೊಂದರಲ್ಲಿಯೇ 2,18,674 ನೋಟಾ ಚಲಾವಣೆಯಾಗಿವೆ ಎಂದು ರಾಜನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT