ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನನ್ನು ರಾಯ್‌ಬರೇಲಿಯ ಜನರಿಗೆ ನೀಡುತ್ತೇನೆ, ತಮ್ಮವನೆಂದು ಸ್ವೀಕರಿಸಿ: ಸೋನಿಯಾ

Published 17 ಮೇ 2024, 12:39 IST
Last Updated 17 ಮೇ 2024, 12:39 IST
ಅಕ್ಷರ ಗಾತ್ರ

ರಾಯ್‌ಬರೇಲಿ: 'ರಾಯ್‌ಬರೇಲಿಯ ಜನರಿಗೆ ನನ್ನ ಮಗನನ್ನು ನೀಡುತ್ತಿದ್ದೇನೆ. ರಾಹುಲ್ ಗಾಂಧಿ ನಿಮಗೆ ನಿರಾಸೆಯನ್ನುಂಟು ಮಾಡುವುದಿಲ್ಲ' ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಶುಕ್ರವಾರ ಹೇಳಿದ್ದಾರೆ.

ರಾಯ್‌ಬರೇಲಿಯಲ್ಲಿ ರಾಹುಲ್ ಪರ ಪ್ರಚಾರ ನಡೆಸಿದ ಸೋನಿಯಾ, 20 ವರ್ಷಗಳ ಕಾಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಜನರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಅಲ್ಲದೆ ರಾಯ್‌ಬರೇಲಿ ನನ್ನ ಜೀವನದ ಅತಿ ದೊಡ್ಡ ಅಸ್ತಿ ಎಂದು ಹೇಳಿದ್ದಾರೆ.

'ನನ್ನ ಸರ್ವಸ್ವವನ್ನು ನಿಮಗಾಗಿ ನೀಡಿದ್ದೇನೆ. ಆದ್ದರಿಂದ ಸಹೋದರ, ಸಹೋದರಿಯರೇ, ನಿಮಗೀಗ ನನ್ನ ಮಗನನ್ನು ನೀಡುತ್ತಿದ್ದೇನೆ. ನನ್ನ ಮಗನನ್ನು ತಮ್ಮವನೆಂದು ಸ್ವೀಕರಿಸಿ' ಎಂದು ಜನರಲ್ಲಿ ವಿನಂತಿ ಮಾಡಿದ್ದಾರೆ.

ಸೋನಿಯಾ ಗಾಂಧಿ ಭಾವನಾತ್ಮಕ ಭಾಷಣದ ವೇಳೆ ವೇದಿಕೆಯಲ್ಲಿ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಗಿದ್ದರು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸಹ ಉಪಸ್ಥಿತರಿದ್ದರು.

'ಇಂದಿರಾ ಗಾಂಧಿ ಹಾಗೂ ರಾಯ್‌ಬರೇಲಿಯ ಜನತೆಯು ನನಗೆ ನೀಡಿದ ಮಾರ್ಗದರ್ಶನಗಳನ್ನೇ ನಾನು ರಾಹುಲ್ ಹಾಗೂ ಪ್ರಿಯಾಂಕಾಳಿಗೆ ಹೇಳಿ ಕೊಟ್ಟಿದ್ದೇನೆ. ಎಲ್ಲರನ್ನೂ ಗೌರವಿಸಲು, ದುರ್ಬಲರನ್ನು ರಕ್ಷಿಸಲು, ಜನರ ಹಕ್ಕುಗಳಿಗಾಗಿ ಅನ್ಯಾಯದ ವಿರುದ್ಧ ಹೋರಾಡಲು ಹೇಳಿದ್ದೇನೆ. ಭಯಪಡಬೇಡಿ, ಏಕೆಂದರೆ ಹೋರಾಟದ ನಿಮ್ಮ ಬೇರುಗಳು ಹಾಗೂ ಸಂಪ್ರದಾಯಗಳು ಬಹಳ ಆಳವಾಗಿವೆ' ಎಂದು ಅವರು ಹೇಳಿದ್ದಾರೆ.

2004ರಿಂದ ರಾಯ್‌ಬರೇಲಿ ಕ್ಷೇತ್ರವನ್ನು ಸೋನಿಯಾ ಗಾಂಧಿ ಪ್ರತಿನಿಧಿಸಿದ್ದಾರೆ. ಇತ್ತೀಚೆಗಷ್ಟೇ ರಾಜ್ಯಸಭೆ ಸಂಸದೆಯಾಗಿ ಆಯ್ಕೆಯಾದ ಬಳಿಕ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಈ ಬಾರಿ ಈ ಕ್ಷೇತ್ರದಿಂದ ರಾಹುಲ್ ಗಾಂಧಿ ಕಣಕ್ಕಿಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT