ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳಸೂತ್ರ ಧರಿಸದ ಪ್ರಿಯಾಂಕಾ: ಮಧ್ಯಪ್ರದೇಶದ ಸಿಎಂ ಆರೋಪ

Published 28 ಏಪ್ರಿಲ್ 2024, 16:04 IST
Last Updated 28 ಏಪ್ರಿಲ್ 2024, 16:04 IST
ಅಕ್ಷರ ಗಾತ್ರ

ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ತಮ್ಮ ಕುಟುಂಬದಲ್ಲಿ ಹುಟ್ಟಿದ ಮೊಮ್ಮಗಳು ‘ಮಂಗಳಸೂತ್ರ’ವನ್ನೂ ಧರಿಸದಿರುವುದಕ್ಕೆ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರೂ ಅವರ ಆತ್ಮ ಕಣ್ಣೀರು ಹಾಕುತ್ತಿರಬಹುದು’ ಎಂದರು.

ಗುನಾ ಲೋಕಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಕಲಿ ಗಾಂಧಿಗಳು ಮತಕ್ಕಾಗಿ ತಮ್ಮ ಉಪನಾಮ ಬಳಸುತ್ತಿದ್ದಾರೆ ಎಂದು ಟೀಕಿಸಿದರು. ‘ನಮ್ಮಲ್ಲಿ ಮಗಳು ಮದುವೆಯಾದ ನಂತರ ಆಕೆಯ ಹೆಸರಿನೊಂದಿಗೆ ಮಾವನ ಮನೆಯ ಉಪನಾಮ ಸೇರಿಕೊಳ್ಳುತ್ತದೆ. ಆದರೆ, ಈ ‘ಮತ ಹಸಿವಿನ ಜನ’ ಮತಗಳಿಗಾಗಿ ತಮ್ಮ ಉಪನಾಮವನ್ನೇ ಮರೆತಿದ್ದು, ಗಾಂಧಿ ಉಪನಾಮ ಬಳಸುತ್ತಿದ್ದಾರೆ’ ಎಂದರು.

ಪ್ರಧಾನಿ ಮೋದಿ ಅವರ ‘ಮಂಗಳಸೂತ್ರ’ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಪ್ರಿಯಾಂಕಾ ಅವರು, ‘ನನ್ನ ತಾಯಿ ದೇಶಕ್ಕಾಗಿ ಮಂಗಳಸೂತ್ರ ತ್ಯಾಗ ಮಾಡಿದ್ದರು’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT