ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾರಾಣಸಿಯಲ್ಲಿ ನಾಳೆ ಮಾತೃ ಶಕ್ತಿ ಸಮ್ಮೇಳನ: 25ಸಾವಿರ ಮಹಿಳೆಯರೊಂದಿಗೆ ಮೋದಿ ಸಂವಾದ

Published 20 ಮೇ 2024, 11:22 IST
Last Updated 20 ಮೇ 2024, 11:22 IST
ಅಕ್ಷರ ಗಾತ್ರ

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿಯವರು ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ನಾಳೆ (ಮೇ.21) ಆಯೋಜನೆಗೊಂಡಿರುವ ಮಾತೃ ಶಕ್ತಿ ಸಮ್ಮೇಳನದಲ್ಲಿ ‌25 ಸಾವಿರಕ್ಕೂ ಅಧಿಕ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ.

ಇಲ್ಲಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾನಿಲಯದಲ್ಲಿ ಆಯೋಜನೆಗೊಂಡಿರುವ ‘ಮಾತೃ ಶಕ್ತಿ ಸಮ್ಮೇಳನ’ದಲ್ಲಿ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಬಿಜೆಪಿ ಮಾಧ್ಯಮ ಉಸ್ತುವಾರಿ ವಹಿಸಿಕೊಂಡಿರುವ ಅರವಿಂದ ಮಿಶ್ರಾ ತಿಳಿಸಿದ್ದಾರೆ

ಪ್ರತಿ ಬೂತ್‌ನಿಂದ 10 ಮಹಿಳೆಯರನ್ನು ಕರೆತರುವಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಜತೆಗೆ ಮಹಿಳಾ ಮೋರ್ಚಾದಿಂದ ವಿವಿಧ ಮಹಿಳಾ ಸಂಘಟನೆಗಳು, ವಿದ್ಯಾರ್ಥಿನಿಯರು, ಶಿಕ್ಷಕಿಯರು ಸೇರಿ ಇತರರನ್ನು ಆಹ್ವಾನಿಸಲಾಗಿದೆ ಎಂದು ಮಿಶ್ರಾ ಮಾಹಿತಿ ನೀಡಿದ್ದಾರೆ. 

ವಾರಾಣಸಿಯಲ್ಲಿ ಮೋದಿ ಹ್ಯಾಟ್ರಿಕ್‌ ಗೆಲವು ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಮೋದಿಯ ಎದುರು ಕಾಂಗ್ರೆಸ್‌ನಿಂದ ಅಜಯ್‌ ರಾಯ್‌ ಕಣಕ್ಕಿಳಿದಿದ್ದಾರೆ.

ವಾರಾಣಸಿಯಲ್ಲಿ ಜೂನ್‌ 1 ರಂದು ಮತದಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT