ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಗಾಳಿ: ಕಾರ್ಯಪಡೆ ರಚಿಸಿದ ಚುನಾವಣಾ ಆಯೋಗ

Published 22 ಏಪ್ರಿಲ್ 2024, 15:59 IST
Last Updated 22 ಏಪ್ರಿಲ್ 2024, 15:59 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಬಿಸಿಗಾಳಿಯ ಮತದಾನದ ಪ್ರಮಾಣದ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಇರುವ ಕಾರಣ, ಮತದಾನದ ಪ್ರತಿ ಹಂತಕ್ಕೂ ಐದು ದಿನ ಮೊದಲು ಆರೋಗ್ಯ ಹಾಗೂ ವಾತಾವರಣದಲ್ಲಿನ ಆರ್ದ್ರತೆಯ ಮೇಲೆ ಅದರ ಪರಿಣಾಮದ ಬಗ್ಗೆ ಪರಿಶೀಲಿಸಲು ಕೇಂದ್ರ ಚುನಾವಣಾ ಆಯೋಗವು ಕಾರ್ಯಪಡೆಯೊಂದನ್ನು ರಚಿಸಿದೆ.

ಅಲ್ಲದೆ, ಬಿಸಿಗಾಳಿಯನ್ನು ಎದುರಿಸಲು ಮತಗಟ್ಟೆಗಳಲ್ಲಿ ಅಗತ್ಯ ಸೌಲಭ್ಯಗಳು ಇರುವಂತೆ ನೋಡಿಕೊಳ್ಳುವ ಉದ್ದೇಶದಿಂದ ರಾಜ್ಯಗಳ ಚುನಾವಣಾ ಅಧಿಕಾರಿಗಳ ಜೊತೆ ಸಭೆ ನಡೆಸಲು ಕೂಡ ಆಯೋಗ ತೀರ್ಮಾನಿಸಿದೆ.

ಏಪ್ರಿಲ್‌ 26ರಂದು ನಡೆಯಲಿರುವ ಎರಡನೆಯ ಹಂತದ ಮತದಾನದ ವೇಳೆ ಬಿಸಿಗಾಳಿಯ ಪ್ರಭಾವವು ತೀರಾ ಕಳವಳಪಡಬೇಕಾದ ಮಟ್ಟದಲ್ಲಿ ಇರುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT