ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ರಾಜ್ಯಗಳ ಪ್ರತಿನಿಧಿ ಆಯ್ಕೆ ಮಾಡುವ ‘ಕೋಟಿಯಾ’ ಜನ!

Last Updated 7 ಮೇ 2014, 19:30 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾ ಹಾಗೂ ಸೀಮಾಂಧ್ರ ರಾಜ್ಯಗಳ ಗಡಿಯಲ್ಲಿರುವ 21 ಗ್ರಾಮಗಳ ಸಮೂಹವಾದ ‘ಕೋಟಿಯಾ’ ಪ್ರದೇಶದ ಜನತೆ ಚುನಾ­ವಣೆ ವೇಳೆ ಎರಡೆರೆಡು ಬಾರಿ ಮತ ಚಲಾ­ಯಿಸುವ ವಿಶೇಷ ಅವಕಾಶ ಪಡೆದುಕೊಂಡಿದೆ!

ಗಡಿಯಲ್ಲಿರುವ ಕಾರಣ ಎರಡೂ ರಾಜ್ಯ­ಗಳ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅವಕಾಶ ಇವರಿಗೆ ಒದಗಿ ಬಂದಿದೆ. ಏಪ್ರಿಲ್‌ 10ರಂದು ನಡೆದ ಚುನಾ­ವಣೆ­ಯಲ್ಲಿ ಈ ಗ್ರಾಮ­ಗಳಲ್ಲಿ ಕೋರಾ­ಪುಟ್‌ ಜಿಲ್ಲಾಡಳಿ­ತ­ದಿಂದ ಮತ­ದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆಗ ಶೇ 60­ರಷ್ಟು ಮತ­ದಾನವೂ ಆಗಿತ್ತು. ಕೋರಾ­ಪುಟ್‌ ಹಾಗೂ ಪೊಟಾಂಗಿ ವಿಧಾನಸಭೆ ಕ್ಷೇತ್ರಗಳಿಗೆ ಆಗ ಮತದಾನ ನಡೆದಿತ್ತು.

ಈಗ ಬುಧವಾರ ನಡೆದ ಚುನಾವಣೆ ಸಂದರ್ಭದಲ್ಲಿ ಮತ್ತೆ ಸೀಮಾಂಧ್ರದ ವಿಜಯನಗರಂ ಲೋಕಸಭೆ ಹಾಗೂ ಪಾಲೂರ್‌ ವಿಧಾನಸಭೆ ಕ್ಷೇತ್ರಕ್ಕೆ ಪ್ರತಿನಿಧಿ­ಗ­ಳನ್ನು ಆಯ್ಕೆ ಮಾಡುವ ಭಾಗ್ಯ ಈ ಗ್ರಾಮದ­ವರ­ದಾಗಿತ್ತು. ಈ ವಿವಾದಿತ ಗ್ರಾಮಗಳಲ್ಲಿ ಈ ರೀತಿ ಎರ­ಡೆರಡು ಬಾರಿ ಮತದಾನ ವ್ಯವಸ್ಥೆ ನಡೆ­ದಿ­ರುವುದು ಇದೇ ಮೊದಲೇನಲ್ಲ. 2009ರ ಲೋಕಸಭೆ ಚುನಾ­ವಣೆ, ಎರಡೂ ರಾಜ್ಯಗಳ ವಿಧಾನಸಭೆ  ಹಾಗೂ ಪಂಚಾ­ಯಿತಿ ಚುನಾವಣೆ­ಗಳ­ಲ್ಲಿಯೂ ಈ ರಾಜ್ಯಗಳಿಂದ ಮತದಾನ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿಶೇಷವೆಂದರೆ ಪ್ರತಿಬಾರಿಯೂ ಈ ಗ್ರಾಮ­ಗಳ ಮತದಾರರ ಹೆಸರು ಮತ­ದಾ­ರರ ಪಟ್ಟಿಯಲ್ಲಿ ಸೇರಿ­ಕೊಳ್ಳು­­ತ್ತಿದೆ. ಕೆಲವರು ಎರಡೆ­ರಡು ಗುರುತಿನ ಚೀಟಿ­ಗಳನ್ನೂ ಹೊಂದಿದ್ದಾರೆ.

ಈ ಕುರಿತು ರಾಜ್ಯ ಮುಖ್ಯ ಚುನಾ­­ವಣಾ ಆಯು­ಕ್ತ­ರನ್ನು ಪ್ರಶ್ನಿಸಿದರೆ, ‘ಎರ­ಡೆ­ರಡು ಗುರು­ತಿನ ಚೀಟಿ ಹೊಂದುವುದು ಕಾನೂನು ಬಾಹಿರ. ಆದರೆ ಇದೇನು ವಿಶೇಷ­ವಲ್ಲ. ಎಲ್ಲ ಕಡೆ ಗಡಿ ಪ್ರದೇಶಗ­ಳ­ಲ್ಲಿನ ಗ್ರಾಮದ ಹಲ­ವರು ಇದೇ ರೀತಿ ಎರಡು ಗುರುತಿನ ಚೀಟಿ ಹೊಂದಿದ್ದಾರೆ’ ಎಂದು ಉತ್ತರಿಸುತ್ತಾರೆ.

‘ಚುನಾವಣೆ ಸಂದರ್ಭದಲ್ಲಿ ಈ ಗ್ರಾಮಗಳಲ್ಲಿನ ಚಟುವಟಿಕೆ­ಗಳನ್ನು ಸೂಕ್ಷ್ಮವಾಗಿ ಅವಲೋಕಿಸಲು ವಿಭಾ­ಗೀಯ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ತಂಡ­ವೊಂ­ದನ್ನು ನೇಮಿಸಲಾಗಿದೆ’ ಎಂದು ಕೋರಾಪುಟ್‌ ಜಿಲ್ಲಾಡಳಿತ ತಿಳಿಸಿದೆ. ಈ ಗ್ರಾಮಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಎರಡೂ ರಾಜ್ಯಗಳು ದಶಕಗಳಿಂದ ಗುದ್ದಾಡುತ್ತಿವೆ. ಈ ಕುರಿತು 1966­ರಿಂದಲೂ ಸುಪ್ರೀಂ ಕೋರ್ಟ್‌­­ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT