ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BJP ಈಗ ‘ಬಾಂಬ್ ಜನತಾ ಪಾರ್ಟಿ’ ಎಂಬ ಹೆಸರು ಪಡೆಯುತ್ತಿದೆಯೇ: ಕಾಂಗ್ರೆಸ್ ಪ್ರಶ್ನೆ

Published 5 ಏಪ್ರಿಲ್ 2024, 13:04 IST
Last Updated 5 ಏಪ್ರಿಲ್ 2024, 13:04 IST
ಅಕ್ಷರ ಗಾತ್ರ

ಬೆಂಗಳೂರು: ‘ಭ್ರಷ್ಟ ಜನತಾ ಪಾರ್ಟಿ’ ಎಂದು ಹೆಸರಾಗಿದ್ದ ಬಿಜೆಪಿ ಈಗ ‘ಬಾಂಬ್ ಜನತಾ ಪಾರ್ಟಿ’ ಎಂಬ ಹೆಸರು ಪಡೆಯಲು ಮುಂದಾಗಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

‘ದಿ ರಾಮೇಶ್ವರಂ ಕೆಫೆ’ ಬಾಂಬ್‌ ಸ್ಪೋಟ ಪ್ರಕರಣ ಸಂಬಂಧ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ‘ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿದ್ದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈಗ ಆರೋಪಿಗಳನ್ನು ಹುಡುಕುತ್ತಾ ಬಿಜೆಪಿ ಬಾಗಿಲಲ್ಲಿ ಬಂದು ನಿಂತಿದೆ’ ಎಂದು ಟೀಕಿಸಿದೆ.

ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ, ತೀರ್ಥಹಳ್ಳಿ ತಾಲ್ಲೂಕಿನ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ನಾವು ಬ್ರಾಂಡ್ ಬೆಂಗಳೂರು ಮಾಡಲು ಹೊರಟಿದ್ದರೆ ಬಿಜೆಪಿ ‘ಬಾಂಬ್ ಬೆಂಗಳೂರು’ ಮಾಡಲು ಹೊರಟಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ತಮ್ಮ ಕಾರ್ಯಕರ್ತರ ಮೂಲಕ ಷಡ್ಯಂತ್ರ ರೂಪಿಸಿದೆಯೇ?, ಬಿಜೆಪಿಗರೇ, ಎನ್‌ಐಎ ಅಧಿಕಾರಿಗಳು ಜಗನ್ನಾಥ ಭವನವನ್ನೂ ಒಮ್ಮೆ ಶೋಧಿಸಿದರೆ ಸೂಕ್ತವಲ್ಲವೇ’ ಎಂದು ಕಾಂಗ್ರೆಸ್ ಕುಟುಕಿದೆ.

ಮಾರ್ಚ್‌ 1ರಂದು ನಡೆದಿದ್ದ ಸ್ಫೋಟ ಪ್ರಕರಣ ಸಂಬಂಧ ಪ್ರಮುಖ ಶಂಕಿತ ಎನ್ನಲಾದ ಮುಸಾವೀರ್ ಹುಸೇನ್ ಶಾಜೀಬ್‌ನನ್ನು ಬಂಧಿಸಿರುವ ಎನ್‌ಐಎ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮುಸಾವೀರ್, ಐಎಸ್ (ಇಸ್ಲಾಮಿಕ್ ಸ್ಟೇಟ್) ಹಾಗೂ ಸಿಮಿ (ಸ್ಟೂಟೆಂಡ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ) ಸೇರಿದಂತೆ ಹಲವು ನಿಷೇಧಿತ ಭಯೋತ್ಪಾದನಾ ಸಂಘಟನೆಗಳ ಸದಸ್ಯರ ಜೊತೆ ಒಡನಾಟ ಹೊಂದಿದ್ದ. ಸಂಘಟನೆ ಮುಖಂಡರ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಗಳಲ್ಲಿ ಪಾಲ್ಗೊಂಡು, ಭಯೋತ್ಪಾದನಾ ಕೃತ್ಯದ ಸಂಚಿನ ಬಗ್ಗೆ ಚರ್ಚಿಸುತ್ತಿದ್ದನೆಂಬ ಮಾಹಿತಿ ತನಿಖಾ ತಂಡಗಳಿಗೆ ಲಭ್ಯವಾಗಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT