ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ: ದಿಂಗಾಲೇಶ್ವರ ಸಾಮೀಜಿ ವಿರುದ್ಧ 3 ಅಪರಾಧ ಪ್ರಕರಣ

Published 18 ಏಪ್ರಿಲ್ 2024, 12:57 IST
Last Updated 18 ಏಪ್ರಿಲ್ 2024, 12:57 IST
ಅಕ್ಷರ ಗಾತ್ರ

ಧಾರವಾಡ: ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಗದಗ ಜಿಲ್ಲೆಯ ಬಾಳೆಹೊಸೂರ–ಶಿರಹಟ್ಟಿಯ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸಾಮೀಜಿ ವಿರುದ್ಧ ಮೂರು ಅಪರಾಧ ಪ್ರಕರಣಗಳು ಇವೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಠಾಣೆಯಲ್ಲಿ 2014 ಹಾಗೂ 2015ನೇ ಇಸವಿಯಲ್ಲಿ ಪ್ರಕರಣಗಳು ದಾಖಲಾಗಿವೆ.

ಇವುಗಳಲ್ಲಿ ಕೊಲೆ ಯತ್ನ, ಜೀವ ಬೆದರಿಕೆ, ಜಾತಿನಿಂದನೆ, ಹಲ್ಲೆ, ಹೆಣ್ಣುಮಕ್ಕಳಿಗೆ ಕೈಯಿಂದ ಹೊಡೆದು, ದೂಡಿದ ಆರೋಪಗಳ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಸ್ವಾಮೀಜಿ ಒಟ್ಟು ₹ 9.75 ಕೋಟಿ ಆಸ್ತಿ ಹೊಂದಿದ್ದಾರೆ. ಈ ಪೈಕಿ ಚರಾಸ್ತಿ ಮೌಲ್ಯ ₹1.22 ಕೋಟಿ ಹಾಗೂ ಸ್ಥಿರಾಸ್ತಿ ಮೌಲ್ಯ ₹ 8.52 ಕೋಟಿ. ಒಂದು ಕಾರು, ಒಂದು ಶಾಲಾ ವಾಹನ ಹಾಗೂ ಒಂದು ಟ್ರಾಕ್ಟರ್‌ ಹೊಂದಿದ್ಧಾರೆ. 7.8 ಕೆ.ಜಿ ಬೆಳ್ಳಿ, 19 ಗ್ರಾಂ ಚಿನ್ನ ಇದೆ. ₹ 39.68 ಲಕ್ಷ ಸಾಲ ಇದೆ ಎಂದು ನಾಮಪತ್ರದ ಜೊತೆಗೆ ನೀಡಿದ ಪ್ರಮಾಣಪತ್ರದಲ್ಲಿ ವಿವರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT