ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಅರ್ನಾ ರೆಸಿಡೆನ್ಸಿಯಲ್ಲಿ ಪತ್ತೆಯಾದ ಹಣ ಎಸ್‌ಬಿಐ ಮುಖ್ಯ ಶಾಖೆಗೆ ರವಾನೆ

Published 17 ಏಪ್ರಿಲ್ 2024, 10:40 IST
Last Updated 17 ಏಪ್ರಿಲ್ 2024, 10:40 IST
ಅಕ್ಷರ ಗಾತ್ರ

ಧಾರವಾಡ: ನಗರದ ನಾರಾಯಣಪುರದ ಆರ್ನಾ ರೆಸಿಡೆನ್ಸಿಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಹಣದ ಕಂತೆಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಹುಬ್ಬಳ್ಳಿಯ ಕೇಶ್ವಾಪುರದ ಎಸ್‌ಬಿಐ ಮುಖ್ಯ ಶಾಖೆಗೆ ಒಯ್ದರು.

ಮನೆಯಲ್ಲಿ ಪರಿಶೀಲನೆ ಪ್ರಕ್ರಿಯೆ ಮುಂದುವರಿದಿದೆ. ಹಣದ ಕಂತೆಗಳಿದ್ದ ಬ್ಯಾಗುಗಳನ್ನು ವಾಹನದಲ್ಲಿ ಸಾಗಿಸಿದರು. ಪೊಲೀಸ್ ಭದ್ರತೆ ಇತ್ತು.

ಆರ್ನಾ ರೆಸಿಡೆನ್ಸಿ ಸಮೀಪದಲ್ಲಿ ಇರುವ ಯು.ಬಿ.ಶೆಟ್ಟಿ ಗ್ರೂಪ್ ಆಫ್ ಕಂಪನೀಸ್ ಕಟ್ಟಡದಲ್ಲೂ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಎಷ್ಟು ಹಣ ಪತ್ತೆಯಾಗಿದೆ ಎಂದು ಈವರೆಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT