ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls: ಕೆ.ಎಸ್.ಈಶ್ವರಪ್ಪ ಆಸ್ತಿ ಮೂರು ಪಟ್ಟು ಹೆಚ್ಚಳ

Published 12 ಏಪ್ರಿಲ್ 2024, 22:30 IST
Last Updated 12 ಏಪ್ರಿಲ್ 2024, 22:30 IST
ಅಕ್ಷರ ಗಾತ್ರ

ಶಿವಮೊಗ್ಗ: 2018ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಎಸ್.ಈಶ್ವರಪ್ಪ ಅವರ ಹೆಸರಲ್ಲಿ ₹10.31 ಕೋಟಿ ಮೌಲ್ಯದ ಆಸ್ತಿ ಘೋಷಣೆಯಾಗಿತ್ತು. ಈ ಬಾರಿ ಕೆ.ಎಸ್.ಈಶ್ವರಪ್ಪ ಹಾಗೂ ಅವರ ಪತ್ನಿ ಜಯಲಕ್ಷ್ಮಿ ಹೆಸರಲ್ಲಿ ಒಟ್ಟು ₹33.50 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಕಳೆದ 6 ವರ್ಷಗಳಲ್ಲಿ ಕೆ.ಎಸ್.ಈಶ್ವರಪ್ಪ ದಂಪತಿಯ ಆಸ್ತಿ ಮೂರು ಪಟ್ಟು ಹೆಚ್ಚಳಗೊಂಡಿದೆ.

**

ವಿನಯ್‌ ಕುಮಾರ್‌ ಆಸ್ತಿ ₹56.21 ಕೋಟಿ

ದಾವಣಗೆರೆ: ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಇನ್‌ಸೈಟ್ಸ್‌ ಐಎಎಸ್‌ ಅಕಾಡೆಮಿ ಸಂಸ್ಥಾಪಕ ಜಿ.ಬಿ. ವಿನಯ್‌ಕುಮಾರ್‌ ₹56.21 ಕೋಟಿ ಆಸ್ತಿ ಹೊಂದಿದ್ದರೂ ಅವರ ಬಳಿ ಚಿನ್ನ, ವಾಹನ ಇಲ್ಲ. ₹9.07 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದು, ₹9.58 ಕೋಟಿ ಸಾಲ ಇದೆ. ₹47.14 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

**

ಪ್ರಭಾ ಆಸ್ತಿ ₹44.53 ಕೋಟಿ

ದಾವಣಗೆರೆ: ಮೊದಲ ಬಾರಿಗೆ ಸ್ಪರ್ಧಿಸಿರುವ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ₹44.53 ಕೋಟಿ ಆಸ್ತಿಯ ಒಡತಿಯಾಗಿದ್ದರೂ ಅವರ ಬಳಿ ಒಂದೂ ವಾಹನ ಇಲ್ಲ. ನಾಮಪತ್ರದೊಂದಿಗೆ ನೀಡಿದ ಪ್ರಮಾಣಪತ್ರದಲ್ಲಿ ಅವರು ಈ ವಿವರ ಘೋಷಿಸಿಕೊಂಡಿದ್ದಾರೆ. 

**

ಖರ್ಗೆ ಅಳಿಯ ₹29 ಕೋಟಿ ಆಸ್ತಿಯ ಒಡೆಯ

ಕಲಬುರಗಿ: ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರ ಆಸ್ತಿ ₹29.48 ಕೋಟಿ ಇದೆ. ಅವರ ಬಳಿ ಎರಡು ವಾಹನಗಳಿವೆ. ₹4.18 ಕೋಟಿ ಸಾಲವೂ ಇದೆ. ಪತ್ನಿ ಡಾ. ಜಯಶ್ರೀ ಅವರ ಬಳಿ ₹13.03 ಕೋಟಿ ಮೌಲ್ಯದ ಆಸ್ತಿ ಇದೆ. ₹2.53 ಕೋಟಿ ಸಾಲವಿದೆ.

**

ಜಾಧವಗಿಂತ ಪತ್ನಿ ಶ್ರೀಮಂತೆ

ಕಲಬುರಗಿ: ಮರು ಆಯ್ಕೆ ಬಯಸಿರುವ ಬಿಜೆಪಿ ಅಭ್ಯರ್ಥಿ, ಸಂಸದ ಡಾ. ಉಮೇಶ ಜಾಧವ ಅವರಿಗಿಂತ ಪತ್ನಿ ಗಾಯತ್ರಿ ಜಾಧವ ಅವರ ಆಸ್ತಿ ಹೆಚ್ಚಿದೆ. ಉಮೇಶ ಜಾಧವ ಬಳಿ ₹1.92 ಕೋಟಿಯ ಆಸ್ತಿ ಇದ್ದರೆ, ಪತ್ನಿಯ ಬಳಿ ₹4.18 ಕೋಟಿ ಮೌಲ್ಯದ ಆಸ್ತಿ ಇದೆ.

**

ವಿಶ್ವೇಶ್ವರ ಹೆಗಡೆ ಕಾಗೇರಿ ಆಸ್ತಿ ವರ್ಷಕ್ಕೆ ₹46 ಲಕ್ಷ ಏರಿಕೆ

ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಹಿಂದೆ ಏಳು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಆರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಕಳೆದ ವರ್ಷ ಮೊದಲ ಬಾರಿ ಸೋಲು ಅನುಭವಿಸಿದ್ದರು. ಆ ವೇಳೆ ಅವರ ಆಸ್ತಿ ಮೌಲ್ಯ ₹9.82 ಕೋಟಿ ಇತ್ತು‌. ವರ್ಷದೊಳಗೆ ₹46 ಲಕ್ಷ ಏರಿಕೆಯಾಗಿದೆ.

**

ಬಿ.ಶ್ರೀರಾಮುಲು: ಆದಾಯ ಖೋತಾ, ಸಾಲ ಹೆಚ್ಚಳ

ಬಳ್ಳಾರಿ: ಬಿ.ಶ್ರೀರಾಮುಲು ಅವರು ಕಳೆದ ವರ್ಷ ವಿಧಾನಸಭಾ ಚುನಾವಣೆ ವೇಳೆ ಘೋಷಿಸಿಕೊಂಡಿದ್ದ ಆಸ್ತಿ ವಿವರವನ್ನು ಗಮನಿಸಿದರೆ ಒಂದು ವರ್ಷದಲ್ಲಿ ಅವರ ಒಟ್ಟು ವರಮಾನದಲ್ಲಿ ₹69 ಲಕ್ಷ ನಷ್ಟವಾಗಿದೆ ಮತ್ತು ಸಾಲ ₹1.27 ಕೋಟಿ ಹೆಚ್ಚಾಗಿದೆ. ಬಿಎಂಡಬ್ಲ್ಯು ಕಾರಿನ ಒಡೆಯರಾದ ಅವರ ಬಳಿ ಕಳೆದ ಬಾರಿ ಬೆಂಜ್‌ ಕಾರು ಸಹ ಇತ್ತು. ಈ ಬಾರಿ ಇನ್ನೋವಾ ಕಾರು ಇದೆ. 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದಾಗ ಅವರು ಘೋಷಿಸಿಕೊಂಡಿದ್ದ ಆಸ್ತಿಯ ಮೌಲ್ಯ ₹15.13 ಕೋಟಿ.

**

ರಾಜಶೇಖರ ಹಿಟ್ನಾಳ 22 ವಾಹನಗಳ ಮಾಲೀಕ

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಅವರ ಆಸ್ತಿ ಐದು ವರ್ಷಗಳಲ್ಲಿ ₹10.59 ಕೋಟಿ ಹೆಚ್ಚಾಗಿದೆ. 2019ರ ಚುನಾವಣೆಗೆ ಸ್ಪರ್ಧಿಸಿದ್ದಾಗ ಸಲ್ಲಿಸಿದ ಅಫಿಡವಿಟ್‌ನಲ್ಲಿ ₹8.47 ಕೋಟಿ ಆಸ್ತಿ ಘೋಷಣೆ ಮಾಡಿದ್ದರು. ಈಗ ಘೋಷಣೆ ಮಾಡಿದ ಪ್ರಕಾರ ಅವರ ಆಸ್ತಿಯ ಮೌಲ್ಯ ₹19.06 ಕೋಟಿ. ಅವರ ಬಳಿ 22 ವಾಹನಗಳಿವೆ. ಸತತ ಎರಡನೇ ಬಾರಿಗೆ ಸ್ಪರ್ಧೆ ಮಾಡಿರುವ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಅವರು ಸೋಲು ಕಂಡಿದ್ದರು.

**

ಕ್ಯಾವಟರ್ ಬಳಿ ₹65 ಲಕ್ಷದ ಕಾರಿದೆ, ಸ್ವಂತ ಮನೆಯಿಲ್ಲ

ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಆಯ್ಕೆ ಬಯಸಿರುವ ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್‌ ಬಳಿ ಮನೆಯಿಲ್ಲ. ಆದರೆ ಅವರಲ್ಲಿ ₹65 ಲಕ್ಷ ಮೌಲ್ಯದ ಲೆಕ್ಸಸ್‌ ಕಾರಿದೆ. ಮೊದಲ ಬಾರಿಗೆ ಅವರು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT