ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಕ.‌ ಕ್ಷೇತ್ರದಲ್ಲಿ ಮತದಾನ ಆರಂಭ

Published 26 ಏಪ್ರಿಲ್ 2024, 2:14 IST
Last Updated 26 ಏಪ್ರಿಲ್ 2024, 2:14 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನ‌ ಆರಂಭವಾಗಿದೆ.

ಜಿಲ್ಲೆಯಲ್ಲಿ ಒಟ್ಟು 1,876 ಮತಗಟ್ಟೆಗಳು ಇವೆ. ಅವುಗಳಲ್ಲಿ 163 ವಲ್ನರೆಬಲ್ ಮತಗಟ್ಟೆಗಳು, 8 ಕ್ರಿಟಿಕಲ್ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.

ಕ್ಷೇತ್ರದಲ್ಲಿ ಒಟ್ಟು 18.18 ಲಕ್ಷ ಮತದಾರರು ಇದ್ದಾರೆ. ಅವರಲ್ಲಿ 9.30 ಲಕ್ಷ‌ ಮಹಿಳೆಯರು, 8.87 ಲಕ್ಷ ಪುರುಷರು ಇದ್ದಾರೆ. ಮಹಿಳಾ‌ ಮತದಾರರು ಅಧಿಕ ಸಂಖ್ಯೆಯಲ್ಲಿ ದ್ದಾರೆ.

ಕ್ಷೇತ್ರದಲ್ಲಿ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪದ್ಮರಾಜ್ ಆರ್ (ಕಾಂಗ್ರೆಸ್), ಕ್ಯಾ. ಬ್ರಿಜೇಶ್ ಚೌಟ (ಬಿಜೆಪಿ), ಕಾಂತಪ್ಪ ಅಲಂಗಾರ (ಬಿಎಸ್ ಪಿ), ರಂಜನಿ ಎಂ (ಕರ್ನಾಟಕ ರಾಷ್ಟ್ರ ಸಮಿತಿ), ಕೆ.ಇ. ಮನೋಹರ (ಉತ್ತಮ ಪ್ರಜಾಕೀಯ ಪಕ್ಷ), ದುರ್ಗಾಪ್ರಸಾದ್ (ಕರುನಾಡ ಸೇವಕ ಪಕ್ಷ), ದೀಪಕ್ ರಾಜೇಶ್ ಕುವೆಲ್ಲೊ, ಮೆಕ್ಸಿಂ ಪಿಂಟೊ, ಸುಪ್ರೀತ್ ಕುಮಾರ್ (ಪಕ್ಷೇತರ).

ಜಿಲ್ಲೆಯಲ್ಲಿ ಸೆಕೆಯ ಧಗೆ ಹೆಚ್ಚಿದ್ದು, ಮತದಾರರು, ವಿಶೇಷವಾಗಿ ಹಿರಿಯ ನಾಗರಿಕರು ಬಿಸಿಲು ಏರುವ ಮುನ್ನ, ಬೆಳಿಗ್ಗೆ 7 ಗಂಟೆಯ ವೇಳೆಗೇ ಮತಗಟ್ಟೆಯಲ್ಲಿ ಸರದಿಯಲ್ಲಿ ನಿಂತಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT