ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ವಡಗೇರಾ: ಚುರುಕು ಪಡೆಯದ ಪ್ರಚಾರ

ವಾಟ್ಕರ್ ನಾಮದೇವ
Published 14 ಏಪ್ರಿಲ್ 2024, 6:22 IST
Last Updated 14 ಏಪ್ರಿಲ್ 2024, 6:22 IST
ಅಕ್ಷರ ಗಾತ್ರ

ವಡಗೇರಾ: ಸೂರ್ಯನ ಪ್ರಖರತೆ ಹೆಚ್ಚಾಗಿರುವ ದಿನಗಳಲ್ಲೇ ಲೋಕಸಭಾ ಚುನಾವಣೆಯ ಪ್ರಚಾರ ಮೋಡ ಕವಿದ ವಾತಾವಣರವಿದ್ದಂತೆ ಇದೆ.

ವಡಗೇರಾ ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿ 2ನೇ ಹಂತದಲ್ಲಿ (ಮೇ 2) ಮತದಾನ ನಡೆಯಲಿದ್ದು ನಾಮಪತ್ರ ಸಲ್ಲಿಕೆ ಆರಂಭವಾದರೂ ಪ್ರಚಾರ ಮಾತ್ರ ಚುರುಕು ಪಡೆದಿಲ್ಲ.

ಬಿಜೆಪಿಯಿಂದ ರಾಜಾ ಅಮರೇಶ್ವರ ನಾಯಕ, ಕಾಂಸ್‌ನಿಂದ ಮಾಜಿ ಐಎಎಸ್ ಅಧಿಕಾರಿ ಕುಮಾರ ನಾಯಕ ಕಣದಲ್ಲಿದ್ದಾರೆ.

ಮತಕ್ಷೇತ್ರದ ವ್ಯಾಪ್ತಿಯ ಗೂಗಲ್, ಗಬ್ಬೂರ ಹಾಗೂ ಇನ್ನೂ ಕೆಲವು ಗ್ರಾಮಗಳಲ್ಲಿ ಎರಡು ಪಕ್ಷದ ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರ ಜೊತೆ ಗುಪ್ತ ಸಭೆಗಳನ್ನು ನಡೆಸಿ ಚುನಾವಣಾ ಪ್ರಚಾರವನ್ನು ಆಂತರಿಕವಾಗಿ ನಡೆಸಿದ್ದಾರೆ. ಯಾದಗಿರಿಯಲ್ಲಿಯೂ ಎರಡೂ ಪಕ್ಷದ ಅಭ್ಯರ್ಥಿಗಳು ಬೆಂಬಲಿಗರ, ಮುಖಂಡರ ಹಾಗೂ ಕಾರ್ಯಕರ್ತರ ಸಭೆ  ನಡೆಸಿ ಸಲಹೆ ಸೂಚನೆಗಳನ್ನು ಪಡೆದಿದ್ದಾರೆ

ಆದರೆ ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಈವರೆಗೂ ಕಾರ್ಯಕರ್ತರ ಸಭೆಯನ್ನು ನಡೆಸಿಲ್ಲ, ಗ್ರಾಮಗಳಿಗೆ ಬೇಟಿ ಕೊಟ್ಟಿಲ್ಲ. ಇದರಿಂದ ಪಕ್ಷದ ಕಾರ್ಯಕರ್ತರು ರಾಜಕೀಯ ಚಟುವಟಿಕೆಗಳಿಂದ ಬಹಳ ದೂರ ಇದ್ದಾರೆ.

ಎರಡೂ ಪಕ್ಷದ ಕಾರ್ಯಕರ್ತರಿಗೆ ಇದರ ಬಗ್ಗೆ ಕೇಳಿದರೆ ‘ನಮ್ಮ ಪಕ್ಷದ ಮುಖಂಡರು, ನಾಯಕರು ನಮಗೆ ಯಾವುದೇ ಆದೇಶ, ಮಾಹಿತಿ ನೀಡಿಲ್ಲ. ನಾವು ತಟಸ್ಥರಾಗಿದ್ದೇವೆ. ಅವರು ಇಲ್ಲಿಗೆ ಬಂದು ಸಭೆ ನಡೆಸಿದಾಗ ಮಾತ್ರ ನಾವು ಪ್ರರಚಾರದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತೇವೆ’ ಎಂದು ಎರಡೂ ಪಕ್ಷಗಳು ಮುಖಂಡರು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT