ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಸಿಎಂ ಎದುರಲ್ಲೇ ಗಂಗಾವತಿ ಕಾಂಗ್ರೆಸ್ ಬಣ ರಾಜಕಾರಣ ಮತ್ತೆ ಸ್ಫೋಟ

Published 30 ಏಪ್ರಿಲ್ 2024, 14:11 IST
Last Updated 30 ಏಪ್ರಿಲ್ 2024, 14:11 IST
ಅಕ್ಷರ ಗಾತ್ರ

ಗಂಗಾವತಿ (ಕೊಪ್ಪಳ ಜಿಲ್ಲೆ): ಹಿಂದಿನ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಬಹಿರಂಗಗೊಂಡಿದ್ದ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಬಣ ರಾಜಕಾರಣ ಮಂಗಳವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಮತ್ತೆ ಸ್ಫೋಟಗೊಂಡಿತು.

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋಲಲು ಪಕ್ಷದಲ್ಲಿರುವ ಡೀಲರ್‌ಗಳು ಕಾರಣ ಎಂದು ಅನ್ಸಾರಿ ಆರೋಪಿಸಿದ್ದರು‌. ತಮ್ಮದೇ ಪಕ್ಷದಲ್ಲಿರುವ ಮಾಜಿ ಸಚಿವ ಮಲ್ಲಿಕಾರ್ಜುನ ‌ನಾಗಪ್ಪ, ವಿಧಾನ ಪರಿಷತ್ ಸದಸ್ಯ ಎಚ್.ಆರ್. ಶ್ರೀನಾಥ್ ಮತ್ತು ಗಂಗಾವತಿ ‌ಬ್ಲ್ಯಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಾಮೀದ್ ಮನಿಯಾರ್ ಅವರು ಜನಾರ್ದನ ರೆಡ್ಡಿ ಜೊತೆ ಕೈ ಜೋಡಿಸಿ‌‌ ನನ್ನನ್ನು ಸೋಲಿಸಿದ್ದಾರೆ ಎಂದು ದೂರಿದ್ದರು. ಲೋಕಸಭಾ ಚುನಾವಣೆ ಪ್ರಚಾರ ಆರಂಭವಾದ ದಿನದಿಂದಲೂ ಹಿಂದಿನ ಮುನಿಸು ಮುಂದುವರೆದಿದೆ.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಅನ್ಸಾರಿ ಅವರಿಗೆ ವೇದಿಕೆ ಮೇಲಿದ್ದ ಅತಿಥಿಗಳನ್ನು ಸ್ವಾಗತಿಸುವಂತೆ ತಿಳಿಸಲಾಯಿತು. ಅನ್ಸಾರಿ ತಮ್ಮ ಸ್ವಾಗತ ಭಾಷಣದಲ್ಲಿ ಮಲ್ಲಿಕಾರ್ಜುನ ‌ನಾಗಪ್ಪ, ಎಚ್.ಆರ್.ಶ್ರೀನಾಥ್ ಮತ್ತು ಶಾಮೀದ್ ಅವರ ಹೆಸರು ಎತ್ತಲಿಲ್ಲ, ಸ್ವಾಗತವನ್ನೂ ಮಾಡಲಿಲ್ಲ. ಪಕ್ಷದ ಈ‌ ಮೂವರನ್ನು ಸ್ವಾಗತಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದಾಗ ಅನ್ಸಾರಿ ಮೈಕ್‌ನಿಂದ ಹಿಂದೆ ಸರಿದರು. ಆಗ ತಂಗಡಗಿಯೇ ಮೂವರನ್ನು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT