ಮೈಸೂರು: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಕಣದ ಸ್ಪಷ್ಟ ಚಿತ್ರಣ ಲಭ್ಯವಾಗಿದ್ದು, ಕಾಂಗ್ರೆಸ್ನ ಎಂ.ಲಕ್ಷ್ಮಣ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಡುವೆ ನೇರ ಹಣಾಹಣಿ ಕಂಡುಬಂದಿದೆ. ಅವರಿಬ್ಬರೂ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದು, ಬಿರು ಬಿಸಿಲಿನ ಜೊತೆಗೆ ಚುನಾವಣೆಯ ಕಾವು ಕೂಡ ಏರತೊಡಗಿದೆ.

ಏ.26ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಒಟ್ಟು 28 ಮಂದಿ ನಾಮಪತ್ರ ಸಲ್ಲಿಸಿದ್ದರು. ಪರಿಶೀಲನೆ ನಂತರ 24 ಮಂದಿಯ ನಾಮಪತ್ರಗಳು ಕ್ರಮಬದ್ಧವಾಗಿದ್ದವು. ಬಿಎಸ್ಪಿಯ ರೇವತಿ ರಾಜ್ ಹಾಗೂ ಮೂವರು ಪಕ್ಷೇತರರ ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ನಾಮಪತ್ರಗಳ ವಾಪಸ್ಗೆ ಸೋಮವಾರ ಕೊನೆಯ ದಿನವಾಗಿತ್ತು. 6 ಮಂದಿ ಕಣದಿಂದ ಹಿಂದೆ ಸರಿದಿದ್ದು, ಒಬ್ಬ ಮಹಿಳೆ ಸೇರಿದಂತೆ ಒಟ್ಟು 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಆರ್. ಮಹೇಶ್, ಎಸ್.ದೊರೆಸ್ವಾಮಿ ನಾಯಕ, ರಾಜಣ್ಣ, ಶಿವನಂಜಯ್ಯ, ಶ್ರೀನಿವಾಸ್ ಬೋಗಾದಿ ಹಾಗೂ ಸಣ್ಣನಾಯಕ ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡರು.

ಕಣದಲ್ಲಿ ಉಳಿದಿರುವವರು:

ಎಂ.ಲಕ್ಷ್ಮಣ;ಕಾಂಗ್ರೆಸ್

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್;ಬಿಜೆಪಿ

ಸುನಿಲ್ ಟಿ.ಆರ್.;ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷ

ಎಂ.ಎಸ್. ಪ್ರವೀಣ್;ಕರ್ನಾಟಕ ರಾಷ್ಟ್ರ ಸಮಿತಿ

ಎ.ಎಸ್. ಸತೀಶ್;ಅಖಿಲ ಭಾರತ ಹಿಂದೂ ಮಹಾಸಭಾ

ಎಚ್.ಎಂ.ನಂಜುಂಡಸ್ವಾಮಿ;ಸಮಾಜವಾದಿ ಜನತಾ ಪಾರ್ಟಿ -ಕರ್ನಾಟಕ

ಎನ್.ಅಂಬರೀಷ್;ಕರ್ನಾಟಕ ಜನತಾ ಪಕ್ಷ

ಎ.ಜಿ.ರಾಮಚಂದ್ರ ರಾವ್;ಜಾತ್ಯತೀತ ಪ್ರಜಾಪ್ರಭುತ್ವ ಕಾಂಗ್ರೆಸ್

ಎಚ್.ಕೆ.ಕೃಷ್ಣ;ಕರುನಾಡು ಪಾರ್ಟಿ

ಲೀಲಾವತಿ ಜೆ.ಎಸ್.;ಉತ್ತಮ ಪ್ರಜಾಕೀಯ ಪಕ್ಷ

ಹರೀಶ್ ಎನ್.;ಸೋಶಿಯಲಿಸ್ಟ್ ಪಾರ್ಟಿ

ಕ್ರಿಸ್ಟೋಫರ್ ರಾಜಕುಮಾರ್;ಇಂಡಿಯನ್ ಮೂವ್ಮೆಂಟ್ ಪಾರ್ಟಿ

ಪಿ.ಎಸ್.ಯಡೂರಪ್ಪ;ಪಕ್ಷೇತರ

ರಂಗಸ್ವಾಮಿ ಎಂ.;ಪಕ್ಷೇತರ

ರಾಮ ಮೂರ್ತಿ ಎಂ.;ಪಕ್ಷೇತರ

ಪಿ.ಕೆ.ದರ್ಶನ್ ಶೌರಿ;ಪಕ್ಷೇತರ

ರಾಜು;ಪಕ್ಷೇತರ

ಅಂಬೇಡ್ಕರ್ ಸಿ.ಜೆ.;ಪಕ್ಷೇತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.