ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls: ಸಿ.ಟಿ.ರವಿಗೆ ಅನ್ಯಾಯವಾಗಿದೆ; ಸರಿಪಡಿಸಲು ಪ್ರಯತ್ನಿಸುವೆ– ಯಡಿಯೂರಪ್ಪ

Published 11 ಏಪ್ರಿಲ್ 2024, 10:50 IST
Last Updated 11 ಏಪ್ರಿಲ್ 2024, 10:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ನಮ್ಮ ಸಿ.ಟಿ.ರವಿ ಅವರಿಗೆ ಅನ್ಯಾಯ ಆಗಿದೆ. ವಿಧಾನಸಭೆ ಅಥವಾ ವಿಧಾನ ಪರಿಷತ್ತಿನಲ್ಲಿ ಅವಕಾಶ ನೀಡುವ ಮೂಲಕ ಅನ್ಯಾಯ ಸರಿಪಡಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮತನಾಡಿದ ಅವರು, ‘ವಿಧಾನಸಭೆಯಲ್ಲಿ ಗುಡುಗಬೇಕಿದ್ದವರು ಈಗ ಹೊರಗಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ಸಿಗಲೇಬೇಕು’ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಮುಖಂಡ ಸಿ.ಟಿ.ರವಿ, ‘ನಮ್ಮ ನಾಯಕರ ಹೆಸರನ್ನೇ ಹೇಳಿಕೊಂಡು ವಿಧಾನಸಭೆ ಚುನಾವಣೆಯಲ್ಲಿ ಅಪಪ್ರಚಾರ ನಡೆಯಿತು. ಇದರಿಂದ ನಾನು ಸೋಲಬೇಕಾಯಿತು’ ಎಂದು ಹೇಳಿದರು.

‘ಮಾದರಸನ ಕೆರೆ, ದಾಸರಹಳ್ಳಿ ಕೆರೆ ತುಂಬಿಸಿದಾಗ ಮತ್ತೆ ಮತ ಕೇಳಲು ಬರುವುದು ಬೇಡ, ನಾವೇ ಮತ  ಹಾಕುತ್ತೇವೆ ಎಂದು ಜನ ಹೇಳಿದ್ದರು. ಚುನಾವಣೆ ಸಂದರ್ಭದಲ್ಲಿ ಕೆಲಸದ ಚರ್ಚೆ ಆಗಲಿಲ್ಲ, ಅಪಪ್ರಚಾರ ನಡೆಯಿತು. ನಮ್ಮ ನಾಯಕರ ಹೆಸರನ್ನೂ ಬಳಸಿಕೊಂಡರು. ನಮ್ಮ ಗ್ರಹಚಾರ ಕೆಟ್ಟಿತ್ತು ಎನ್ನಿಸುತ್ತೆ, ಆಗ ಜೆಡಿಎಸ್‌ನವರೂ ಅವರಿಗೇ ಬೆಂಬಲ ನೀಡಿದರು’ ಎಂದು ಬೇಸರ ವ್ಯಕ್ತಪಡಿಸಿದರು.

‘ದುಡಿಯುವ ಎತ್ತಿಗೆ ಮೇವು ಹಾಕಬೇಕು ಎಂಬುದನ್ನು ಜನ ಯೋಚನೆ ಮಾಡಬೇಕಿತ್ತು. ಕಾಂಗ್ರೆಸ್‌ಗೆ ಮತ ಹಾಕಿ ಗೂಟ ಹೊಡೆಸಿಕೊಳ್ಳಬೇಕಾಯಿತು. ಮುಂದೆ ಗೂಟ ಹೊಡೆಸಿಕೊಳ್ಳಬಾರದು ಎಂದಾದರೆ ಬಿಜೆಪಿಗೆ ಮತ ಹಾಕಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT