ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ | ಕಾಂಗ್ರೆಸ್‌ ಮತಯಾಚನೆಗೆ ಬಂದರೆ ನಾಯಿ ಬಿಡ್ತೀವಿ: ಮನೆ ಎದುರು ಫಲಕ

Published 2 ಮೇ 2023, 20:27 IST
Last Updated 2 ಮೇ 2023, 20:27 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬಜರಂಗದಳ ಕುರಿತ ಕಾಂಗ್ರೆಸ್ ಪ್ರಣಾಳಿಕೆ ವಿರೋಧಿಸಿ, ಮೂಡಿಗೆರೆ ತಾಲ್ಲೂಕಿನ ಬಣಕಲ್‌ ಹೋಬಳಿಯ ಗುಡ್ಡಹಟ್ಟಿ ಗ್ರಾಮದ ಅರುಣ್‌ ಪೂಜಾರಿ ಎಂಬುವರು ತಮ್ಮ ಮನೆ ಗೇಟಿನಲ್ಲಿ ‘ಇದು ಬಜರಂಗದಳದವರ ಮನೆ. ಕಾಂಗ್ರೆಸ್‌ನವರು ಮತಯಾಚಿಸಲು ಅವಕಾಶ ಇಲ್ಲ. ಒಳಗೆ ಬಂದರೆ ನಾಯಿ ಬಿಡಲಾಗುತ್ತದೆ ಎಚ್ಚರ’ ಫಲಕ ಅಳವಡಿಸಿದ್ದಾರೆ.

ಬಣಕಲ್‌ ಹೋಬಳಿಯ ವಿಶ್ವ ಹಿಂದೂ ಪರಿಷತ್‌ನ ಕಾರ್ಯದರ್ಶಿಯೂ ಆಗಿರುವ ಅರುಣ್‌ ಪೂಜಾರಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಕಾಂಗ್ರೆಸ್‌ನವರು ಬಜರಂಗ ದಳವನ್ನು ಏಕೆ ನಿಷೇಧಿಸುತ್ತಾರೆ? ಕಾಂಗ್ರೆಸ್‌ನಲ್ಲಿ ಬಜರಂಗದಳದವರು ಇಲ್ಲವೇ? ಕಾಂಗ್ರೆಸ್‌ ಉದ್ದೇಶ ಏನು’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ ಪಕ್ಷಕ್ಕೆ ನಮ್ಮ ಮನೆಗೆ ಮತಯಾಚನೆಗೆ ಬರಬೇಡಿ ಎಂದು ಫಲಕ ಅಳವಡಿಸಿದ್ದೇವೆ. ಇವತ್ತು ನಾನು ಫಲಕ ಅಳವಡಿಸಿದ್ದೇನೆ, ನಾಳೆ ಇನ್ನು ಹಲವರು ಅಳವಡಿಸುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ಮೂಡಿಗೆರೆ ತಾಲ್ಲೂಕಿನ ಬಣಕಲ್‌ ಹೋಬಳಿಯ ಗುಡ್ಡಹಟ್ಟಿ ಗ್ರಾಮದ ಅರುಣ್‌ ಪೂಜಾರಿ ಅವರ ಮನೆ ಗೇಟಿನಲ್ಲಿ ಅಳವಡಿಸಿರುವ ಎಚ್ಚರಿಕೆ ಫಲಕ  
ಮೂಡಿಗೆರೆ ತಾಲ್ಲೂಕಿನ ಬಣಕಲ್‌ ಹೋಬಳಿಯ ಗುಡ್ಡಹಟ್ಟಿ ಗ್ರಾಮದ ಅರುಣ್‌ ಪೂಜಾರಿ ಅವರ ಮನೆ ಗೇಟಿನಲ್ಲಿ ಅಳವಡಿಸಿರುವ ಎಚ್ಚರಿಕೆ ಫಲಕ  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT