ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನ್ಯಾಕೆ ಬೇಸರಪಟ್ಟುಕೊಳ್ಳಲಿ, ಹಾದಿ ಇನ್ನೂ ದೀರ್ಘವಾಗಿದೆ: ಡಿ.ಕೆ ಶಿವಕುಮಾರ್‌

Published 18 ಮೇ 2023, 10:06 IST
Last Updated 18 ಮೇ 2023, 10:06 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿ.ಕೆ ಶಿವಕುಮಾರ್‌ ಹೇಳಿದರು.

ಇಲ್ಲಿ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘ನಾವಿಬ್ಬರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ನಾವು ಅದನ್ನು ಒಪ್ಪಿಕೊಂಡಿದ್ದೇವೆ. ಎಲ್ಲವೂ ಸರಿಯಾಗಿದೆ. ಎಲ್ಲವೂ ಸರಿಯಾಗಿಯೇ ಇರುತ್ತದೆ‘ ಎಂದು ಡಿ.ಕೆ ಶಿವಕುಮಾರ್ ನುಡಿದರು.

‘ಕರ್ನಾಟಕದ ಜನ ನಮಗೆ ಇಷ್ಟು ದೊಡ್ಡ ತೀರ್ಪು ನೀಡಿರುವಾಗ, ನಾವು ನೀಡಿರುವ ಭರವಸೆಗಳನ್ನು ಈಡೇರಿಸಲು ಹರ್ಷಿಸುತ್ತೇವೆ. ಅದೇ ನಮ್ಮ ದೊಡ್ಡ ಗುರಿ ಹಾಗೂ ಅಜೆಂಡಾ‘ ಎಂದು ಹೇಳಿದರು.

ಇನ್ನು ಪಕ್ಷದ ಈ ನಿರ್ಧಾರ ನಿಮಗೆ ಬೇಸರ ತರಿಸಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನ್ಯಾಕೆ ಬೇಸರಪಟ್ಟುಕೊಳ್ಳಲಿ. ಇನ್ನು ಹಾದಿ ದೀರ್ಘವಾಗಿದೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT