ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಲೋಕಸಭೆ ಚುನಾವಣೆ: ಇತಿಹಾಸ ಸೃಷ್ಟಿಸಿದ್ದ ಸುರಪುರ ರಾಜರು

Published 14 ಏಪ್ರಿಲ್ 2024, 6:14 IST
Last Updated 14 ಏಪ್ರಿಲ್ 2024, 6:14 IST
ಅಕ್ಷರ ಗಾತ್ರ

ಶಹಾಪುರ: ಶಹಾಪುರ ಮತ್ತು ಸುರಪುರ ರಾಯಚೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಯಗೆ ಒಳಪಟ್ಟಿದೆ. ಕ್ಷೇತ್ರದ ಇತಿಹಾಸದಲ್ಲಿ ಕಾಂಗ್ರೆಸ್, ಬಿಜೆಪಿ ಗೆಲುವು ಹೊರತುಪಡಿಸಿ ಸುರಪುರದ ಬ್ಯಾರಿಸ್ಟರ್ ರಾಜಾ ವೆಂಕಟಪ್ಪ ನಾಯಕ ಹಾಗೂ ಅವರ ಹತ್ತಿರದ ಸಂಬಂಧಿ ರಾಜಾ ರಂಗಪ್ಪ ನಾಯಕ ಗೆಲವು ಸಾಧಿಸಿರುವುದು ಕ್ಷೇತ್ರದಲ್ಲಿ ಇತಿಹಾಸದ ಮೈಲುಗಲ್ಲಾಗಿದೆ.ರಾಯಚೂರು ಲೋಕಸಭೆಗೆ 17 ಬಾರಿ ಚುನಾವಣೆ ನಡೆದಿವೆ. ಅದರಲ್ಲಿ 13 ಬಾರಿ ಕಾಂಗ್ರೆಸ್, 2 ಬಾರಿ ಬಿಜೆಪಿ ಗೆದ್ದಿದೆ. ಒಂದು ಬಾರಿ ಜನತಾದಳ ಗೆದ್ದಿದೆ. ಅಂದಿನ ದಿನಗಳಲ್ಲಿ ಮೀಸಲಾತಿ ಇಲ್ಲದೆ ಇಬ್ಬರು ಸುರಪುರದ ರಾಜರು ಗೆಲುವು ದಾಖಲಿಸಿದ್ದು ಹೊಸ ಮೈಲುಗಲ್ಲು ಎನ್ನುವುದಕ್ಕೆ 1967ರಲ್ಲಿ ಬ್ಯಾರಿಸ್ಟರ್ ರಾಜಾ ವೆಂಕಟಪ್ಪ ನಾಯಕ ಅವರು ಶಹಾಪುರ ವಿಧಾನಸಭೆಗೆ ಮತ್ತು ರಾಯಚೂರು ಲೋಕಸಭೆಗೆ ಏಕಕಾಲಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡರಲ್ಲಿ ಗೆಲುವು ಸಾಧಿಸಿದ್ದರು. ಬಳಿಕ ಶಹಾಪುರ ವಿಧಾನಸಭೆ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಎನ್ನುತ್ತಾರೆ ಭೀಮರಾಯನಗುಡಿ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಸಂಚಾಲಕ ಭಾಸ್ಕರರಾವ ಮುಡಬೂಳಬ್ಯಾರಿಸ್ಟರ್ ರಾಜಾ ವೆಂಕಟಪ್ಪ ನಾಯಕ ಅವರ ಹತ್ತಿರದ ಸಂಬಂಧಿ ದಿ. ರಾಜಾ ರಂಗಪ್ಪ ನಾಯಕ ಅವರು 1996ರಲ್ಲಿ ಜನತಾ ದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಂದರೆ ಇಬ್ಬರು ಪ್ರಬಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಮಣಿಸಿ ಪ್ರತ್ಯೇಕವಾಗಿ ರಾಜಕೀಯ ಮೆಟ್ಟಿಲು ಹತ್ತಿ ಕ್ಷೇತ್ರದಲ್ಲಿ ಹೊಸತನವನ್ನು ಉಳಿಸುವುದರ ಜತೆಯಲ್ಲಿ ಅಳಸಿ ಹಾಕದಂತಹ ರಾಜಕೀಯ ಸಾಧನೆ ಮಾಡಿರುವುದು ಸುರಪುರ ರಾಜರ ಸಾಧನೆಯಾಗಿದೆ.

ಪಿ 1(2):ರಾಜಾ ರಂಗಪ್ಪ ನಾಯಕ
ಪಿ 1(2):ರಾಜಾ ರಂಗಪ್ಪ ನಾಯಕ
ಬ್ಯಾರಿಸ್ಟರ್ ರಾಜಾ ವೆಂಕಟಪ್ಪ ನಾಯಕ ಅವರು 1967ರಲ್ಲಿ ಶಹಾಪುರ ವಿಧಾನಸಭೆ ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಏಕಕಾಲಕ್ಕೆ ಸ್ಫರ್ಧಿಸಿ ಎರಡೂ ಕಡೆ ಗೆಲುವು ಸಾಧಿಸಿ ರಾಯಚೂರು ಲೋಕಸಭೆ ಕ್ಷೇತ್ರ ಉಳಿಸಿಕೊಳ್ಳುತ್ತಾರೆ. ನಂತರ ಅವರ ಹತ್ತಿರದ ಸಂಬಂಧಿ ರಾಜಾ ರಂಗಪ್ಪ ನಾಯಕ ಅವರು ರಾಯಚೂರು ಲೋಕಸಭೆ ಕ್ಷೇತ್ರದಿಂದ ಸ್ಫರ್ಧಿಸಿ ಗೆಲುವು ಸಾಧಿಸಿದ್ದು ವಿಶೇಷ
-ಭಾಸ್ಕರರಾವ ಮುಡಬೂಳ, ಸಂಚಾಲಕರ ಸುರಪುರ ಇತಿಹಾಸ ಸಂಶೋಧನಾ ಕೇಂದ್ರ ಭೀಮರಾಯನಗುಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT