ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಲೋಕಸಭಾ ಕ್ಷೇತ್ರ: ಕೈ–ಕಮಲ ಸಮಬಲದ ಹೋರಾಟ

Published 4 ಏಪ್ರಿಲ್ 2024, 19:03 IST
Last Updated 4 ಏಪ್ರಿಲ್ 2024, 19:03 IST
ಅಕ್ಷರ ಗಾತ್ರ

ಕಾಂಗ್ರೆಸ್‌ ‘ಭದ್ರಕೋಟೆ’ ಎನ್ನಲಾಗುತ್ತಿದ್ದ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಗೆದ್ದು ಖಾತೆ ತೆರೆದಿತ್ತು. ಈ ಬಾರಿ ಕಾಂಗ್ರೆಸ್‌, ಸಚಿವ ಎಚ್‌.ಸಿ.ಮಹದೇವಪ್ಪ ಅವರ ಮಗ ಸುನಿಲ್‌ ಬೋಸ್‌ಗೆ ಟಿಕೆಟ್‌ ನೀಡಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿಯ ಎಸ್‌.ಬಾಲರಾಜು ಕಣಕ್ಕಿಳಿದಿದ್ದಾರೆ. ಬಿಎಸ್‌ಪಿಯಿಂದ ಕೃಷ್ಣಮೂರ್ತಿ ಸ್ಪರ್ಧಿಸಿದ್ದಾರೆ

ಕಾಂಗ್ರೆಸ್‌– ಬಿಜೆಪಿ ನಡುವೆ ಸಮಬಲದ ಹೋರಾಟ ಏರ್ಪಟ್ಟಿದೆ. ಬಾಲರಾಜು ಮಾಜಿ ಶಾಸಕ. ರಾಜಕೀಯ ಅನುಭವಿ. ಸುನಿಲ್‌ ಬೋಸ್‌ ಚುನಾವಣಾ ರಾಜಕೀಯಕ್ಕೆ ಹೊಸಬರು. ಕ್ಷೇತ್ರದಾದ್ಯಂತ ಈಗಷ್ಟೇ ಪರಿಚಯವಾಗುತ್ತಿದ್ದಾರೆ. ತಂದೆ ಮಹದೇವಪ್ಪ ವರ್ಚಸ್ಸಿನ ನೆರಳಿನಲ್ಲೇ ನಡೆಯಬೇಕು. ಸಿ.ಎಂ ಸಿದ್ದರಾಮಯ್ಯನವರಿಗೂ ಪ್ರತಿಷ್ಠೆಯ ಕಣವಾಗಿದ್ದು, ಗೆಲುವಿಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಬೆಂಬಲಿಗರು ಕಾಂಗ್ರೆಸ್‌ನತ್ತ ಮುಖ ಮಾಡಿರುವುದು ಬಿಜೆಪಿಗೆ ತಲೆನೋವು ತಂದಿದೆ. ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಡಗೈ ಸಮುದಾಯದ ಎಂ.ಶಿವಣ್ಣ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

ಮೋದಿ ವರ್ಚಸ್ಸು, ಬಿಎಸ್‌ವೈ ಪ್ರಭಾವ, ಜೆಡಿಎಸ್‌ ಮೈತ್ರಿ ಬಾಲರಾಜು‌ ಶಕ್ತಿಯಾಗಿದ್ದರೆ, ಕ್ಷೇತ್ರದಲ್ಲಿ 7 ಶಾಸಕರು ಇರುವುದು, ಗ್ಯಾರಂಟಿಗಳ ಬಲ, ತಂದೆ ಮಹದೇವಪ್ಪ ಪ್ರಭಾವದ ಬಲ ಬೋಸ್‌ ಬೆನ್ನಿಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT