ಭಾನುವಾರ, ಆಗಸ್ಟ್ 18, 2019
22 °C

ಶ್ರದ್ಧಾ ಸಂಭಾವನೆ ₹7 ಕೋಟಿ

Published:
Updated:
Prajavani

ಆಗಸ್ಟ್‌ 30ರಂದು ಬಿಡುಗಡೆಯಾಗಲಿರುವ ‘ಸಾಹೋ’ ಚಿತ್ರದಲ್ಲಿ ನಟಿಸಿರುವ ನಟ ಪ್ರಭಾಸ್‌ ಹಾಗೂ ನಟಿ ಶ್ರದ್ಧಾ ಕಪೂರ್‌ ಹೆಸರು ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ– ನಟಿಯರ ಸಾಲಿನಲ್ಲಿ ಶೀಘ್ರವೇ ಸೇರ್ಪಡೆಯಾಗಲಿದೆ. 

ಪ್ರಭಾಸ್ ಜೊತೆ ಮೊದಲ ಬಾರಿ ನಟಿಸಿರುವ ಬಾಲಿವುಡ್‌ ನಟಿ ಶ್ರದ್ಧಾ ಕಪೂರ್ ‘ಸಾಹೊ’ ಸಿನಿಮಾಕ್ಕಾಗಿ ಈಗಾಗಲೇ ₹ 7 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ.

ಈ ಸಿನಿಮಾ ಬಿಡುಗಡೆ ಬಳಿಕ  ಎರಡನೇ ಹಂತದಲ್ಲಿ ಶ್ರದ್ಧಾ ಪಡೆದುಕೊಳ್ಳಲಿರುವ ಸಂಭಾವನೆ ಎಷ್ಟಿರಬಹುದು ಎಂಬ ಬಗ್ಗೆ ಈಗಾಗಲೇ ಕುತೂಹಲ ಹೆಚ್ಚಿದೆ. ಪ್ರಭಾಸ್‌ ಸಹ ಈ ಚಿತ್ರದಲ್ಲಿ ದುಬಾರಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಗಾಳಿ ಸುದ್ದಿ ಇದೆ. ಚಿತ್ರದ ಬಿಡುಗಡೆಗೂ ಮುಂಚೆ ನಡೆಯುವ ವ್ಯವಹಾರದ ಶೇ.50ರಷ್ಟು ಮೊತ್ತವನ್ನು ಪ್ರಭಾಸ್‌ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. 

ಚಿತ್ರ ಬಿಡುಗಡೆಗೂ ಮೊದಲು ಅವರ ಲುಕ್‌ಗಾಗಿ ಸಿನಿಮಾ ತಂಡ ಸಾಕಷ್ಟು ಹಣ ಖರ್ಚು ಮಾಡಿದೆಯಂತೆ.

Post Comments (+)