ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'777 ಚಾರ್ಲಿ' ಸಿನಿಮಾಗೆ ಪ್ರಶಸ್ತಿ: ಭಾವಪರವಶನಾಗಿದ್ದೇನೆ ಎಂದ ರಕ್ಷಿತ್ ಶೆಟ್ಟಿ

Published 25 ಆಗಸ್ಟ್ 2023, 3:25 IST
Last Updated 25 ಆಗಸ್ಟ್ 2023, 3:25 IST
ಅಕ್ಷರ ಗಾತ್ರ

2021ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗುರುವಾರ ಘೋಷಣೆಯಾಗಿದೆ. ಕನ್ನಡ ಭಾಷೆ ವಿಭಾಗದಲ್ಲಿ ಕಿರಣ್‌ ರಾಜ್‌ ಕೆ. ನಿರ್ದೇಶಿಸಿರುವ ಹಾಗೂ ರಕ್ಷಿತ್‌ ಶೆಟ್ಟಿ ನಟನೆಯ '777 ಚಾರ್ಲಿ' ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. 

ತಮ್ಮ ಸಿನಿಮಾಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿರುವ ಕುರಿತು ನಟ ರಕ್ಷಿತ್‌ ತಮ್ಮ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಸಂಭ್ರಮಿಸಿದ್ದಾರೆ. ಅವರು, 'ಈ ಸುದ್ದಿ ತಿಳಿದು ನಮಗಾದ ಸಂತೋಷವನ್ನು ಪದಗಳಿಂದ ಹೇಳಲು ಸಾಧ್ಯವಿಲ್ಲ. ಭಾವಪರವಶನಾಗಿದ್ದೇನೆ. ವಿನಮ್ರತೆಯ ಭಾವ ಮೂಡಿದ್ದು, ಆಭಾರಿಯಾಗಿದ್ದೇನೆ. ಇದು ನಮಗೆಲ್ಲ ಹೆಮ್ಮೆಯ ಕ್ಷಣವಾಗಿದೆ. ಕಿರಣ್‌ ರಾಜ್‌ ಅವರಿಗೆ ಅಭಿನಂದನೆಗಳು. ಕಠಿಣ ಪರಿಶ್ರಮವು ಫಲ ನೀಡಿದೆ' ಎಂದು ಬರೆದುಕೊಂಡಿದ್ದಾರೆ.

ರಕ್ಷಿತ್‌ ಅವರ ಪೋಸ್ಟ್‌ ಅನ್ನು ಹಂಚಿಕೊಂಡಿರುವ ಕಿರಣ್ ರಾಜ್‌, 'ಧನ್ಯವಾದಗಳು ರಕ್ಷಿತ್‌ ಸರ್‌. ನೀವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ನನ್ನ ಕನಸುಗಳಿಗೆ ರೆಕ್ಕೆ ಕಟ್ಟಿದ ನಿಮಗೆ ತುಂಬಾ ಧನ್ಯವಾದಗಳು' ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಅಭಿಮಾನಿಗಳು '777 ಚಾರ್ಲಿ' ಚಿತ್ರ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಕನ್ನಡದ ಅತ್ಯುತ್ತಮ ಚಿತ್ರ ‘ಚಾರ್ಲಿ 777’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT