ಮರಿ ಟೈಗರ್‌ ‘ಬೇರ್‌ ಬಾಡಿ’ಗೆ ಫುಲ್‌ ಡಿಮ್ಯಾಂಡ್‌

ಶನಿವಾರ, ಏಪ್ರಿಲ್ 20, 2019
29 °C

ಮರಿ ಟೈಗರ್‌ ‘ಬೇರ್‌ ಬಾಡಿ’ಗೆ ಫುಲ್‌ ಡಿಮ್ಯಾಂಡ್‌

Published:
Updated:
Prajavani

ರಗಡ್‌ಗಾಗಿ ದೇಹವನ್ನು 8 ಪ್ಯಾಕ್‌ ಮಾಡಿಕೊಂಡು ಯುವಜನರಿಗೆ ಕಿಕ್ಕೇರಿಸಿದ ಮರಿ ಟೈಗರ್‌ ವಿನೋದ್‌ ಪ್ರಭಾಕರ್‌ ‘ಬೇರ್‌ ಬಾಡಿ’ಗೆ ಈಗ ಸಿನಿರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆಯಂತೆ!

ಹೌದು ಈ ಮಾತನ್ನು ಸ್ವತಃ ವಿನೋದ್‌ ಪ್ರಭಾಕರ್‌ ಹೇಳಿಕೊಂಡಿದ್ದಾರೆ. ‘ಸುಮಾರು ಜನರು ಸಿಕ್ಸ್‌ ಪ್ಯಾಕ್‌ ಮಾಡಲು ಸೈಕಲ್‌ ಹೊಡೆಯುತ್ತಿರುವಾಗ, ನೀವು 8 ಪ್ಯಾಕ್‌ ಮಾಡಿ ಪ್ರೇಕ್ಷಕರನ್ನು ರಂಜಿಸಿರುವುದು ಸಾಮಾನ್ಯದ ಮಾತಲ್ಲ. ಲವರ್‌ ಬಾಯ್‌ ಆಗಿಯೂ ತುಂಬಾ ಕ್ಯೂಟಾಗಿ ಕಾಣಿಸುತ್ತಿದ್ದೀರಿ. ಸಾಂಗ್ಸು, ಫೈಟು, ಅಭಿನಯ ಚೆನ್ನಾಗಿ ಮಾಡಿದ್ದೀರಿ’ ಎನ್ನುವ ಹೊಗಳಿಕೆಯ ಸುರಿಮಳೆಗರೆಯುತ್ತಿದ್ದಾರಂತೆ ಗಾಂಧಿನಗರದ ಮಂದಿ.

ರಗಡ್‌ ಸಿನಿಮಾಕ್ಕಾಗಿ 8 ಪ್ಯಾಕ್‌ಗೆ ದೇಹವನ್ನು ಹುರಿಗೊಳಿದ ಚಿತ್ರಗಳನ್ನು ರಿವೀಲ್‌ ಮಾಡಿದಾಗಲೇ ಗಾಂಧಿನಗರದಿಂದ ಐದಾರು ಆಕ್ಸನ್‌ ಚಿತ್ರಗಳಿಗೆ ನಿರ್ದೇಶಕರು ಆಫರ್‌ ನೀಡಿದ್ದರಂತೆ. ಆದರೆ, ವಿನೋದ್‌ ಅವುಗಳನ್ನು ಒಪ್ಪಿಕೊಂಡಿರಲಿಲ್ಲವಂತೆ. 

ರಗಡ್‌ ಚಿತ್ರದ ಮೊದಲ ವಾರದ ಯಶಸ್ಸಿನ ಸಂಭ್ರಮ ಹಂಚಿಕೊಳ್ಳಲು ಚಿತ್ರತಂಡ ಕರೆದಿದ್ದ ಸುದ್ದಿಗೋಷ್ಠಿಗೆ ತಡವಾಗಿ ಬಂದು ಕೂಡಿಕೊಂಡ ವಿನೋದ್‌ ಪ್ರಭಾಕರ್‌, ಮಾಧ್ಯಮ ಪ್ರತಿನಿಧಿಗಳ ಕ್ಷಮೆಯಾಚಿಸುತ್ತಾ ‘ನಾವು ಹೆಚ್ಚು ಮಾತನಾಡುವುದು ಬೇಡ, ಚಿತ್ರವೇ ಮಾತನಾಡಲಿ ಎಂದಿದ್ದೆ. ಈಗ ಅದೇ ರೀತಿ ಆಗಿದೆ’ ಎಂದು ಮಾತು ಆರಂಭಿಸಿದರು.

‘ರಾಜ್ಯದಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಜಿಮ್‌ ಸೆಂಟರ್‌ಗೆ ಬರುವವರೆಲ್ಲರೂ ಸಾರ್‌ ನಿಮ್ಮ ಬಾಡಿ ನೋಡುವ ಸಲುವಾಗಿಯೇ ಥಿಯೇಟರ್‌ಗೆ ಹೋಗಿದ್ದೆವು. ಆದರೆ, ಅಲ್ಲಿ ನೀವು ಬೇರೆಯದೇ ಟಿಂಟ್‌ ತೋರಿಸಿದ್ದೀರಿ. ತುಂಬಾ ಖುಷಿಯಾಯಿತು. ಸಿನಿಮಾ ಚೆನ್ನಾಗಿದೆ ಎನ್ನುವ ಪ್ರಶಂಸೆ ವ್ಯಕ್ತಪಡಿಸಿದ್ದಾರೆ’ ಎಂದು ಮರಿ ಟೈಗರ್‌ ಮಾತು ವಿಸ್ತರಿಸಿದರು.

‘ರಗಡ್‌ನಿಂದಾಗಿ ಒಳ್ಳೆಯ ಅವಕಾಶಗಳು ಬರತೊಡಗಿವೆ. ಡಿ.ಕೆ, ಆಟೊ ರಾಜ ಸಿನಿಮಾ ಮಾಡಿದ್ದ ಉದಯ ಪ್ರಕಾಶ್‌ ಅವರ ‘ವರದ’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಒಂದು ದಿನವೂ ಬಿಡುವುದಿಲ್ಲದೆ ಶೂಟಿಂಗ್‌ ನಡೆಯುತ್ತಿದೆ. ಹಾಗಾಗಿಯೇ ಮೊದಲ ಪತ್ರಿಕಾಗೋಷ್ಠಿ ರದ್ದುಪಡಿಸಿದ್ದೆ. ವರದ ಸಿನಿಮಾಕ್ಕಾಗಿ ಮಾಗಡಿ ರಸ್ತೆಯಲ್ಲಿ ಒಂದು ಫೈಟ್‌ ದೃಶ್ಯ ಮುಗಿಸಿ, ಈ ಸುದ್ದಿಗೋಷ್ಠಿಗೆ ಹಾಜರಾಗಿದ್ದೇನೆ’ ಎಂದು ಸ್ಪಷ್ಟನೆ ಕೊಟ್ಟರು.

95 ಕೆ.ಜಿಗೆ ದೇಹದ ತೂಕ ಹೆಚ್ಚಿಸಲಿದ್ದಾರಂತೆ:

ಇನ್ನೂ ಮೇ ತಿಂಗಳಲ್ಲಿ ಒಂದು ಸಿನಿಮಾದಲ್ಲಿ ನಟಿಸಲಿದ್ದೇನೆ. ಆ ಸಿನಿಮಾಕ್ಕಾಗಿ ಜನವರಿಯಿಂದಲೇ ಸಿದ್ಧತೆಯಲ್ಲಿ ತೊಡಗಿದ್ದೇನೆ. ರಗಡ್‌ನಲ್ಲಿ ಸ್ವಲ್ವ ತೆಳುವಾಗಿ ಕಾಣಿಸಿಕೊಂಡಿದ್ದೇನೆ. ರಗಡ್‌ಗಿಂತಲೂ ಸಖತ್ತಾದ ಮೈಕಟ್ಟನ್ನು ಮುಂದೆ ನೋಡಲಿದ್ದೀರಿ. ದೇಹವನ್ನು 95 ಕೆ.ಜಿ.ಗೆ ಹೆಚ್ಚಿಸಿ, ಮತ್ತೆ ಕಡಿಮೆ ಮಾಡಿಕೊಳ್ಳಲಿದ್ದೇನೆ ಎನ್ನುವ ಕುತೂಹಲದ ಸಂಗತಿ ಬಿಚ್ಚಿಟ್ಟರು.

ಮೊದಲೆಲ್ಲ ಜಿಮ್‌ಗೆ ಹೋಗಿ, ಯೂಟೂಬ್‌ ನೋಡಿ ಯಾರೆಲ್ಲ ಹೇಗೆ ವರ್ಕೌಟ್‌ ಮಾಡಿದ್ದಾರೆ ಎನ್ನುವುದನ್ನು ನೋಡಿ ಅನುಕರಿಸುತ್ತಿದ್ದೆ. ಆದರೆ, ಈಗ ನಾನೇ ಸ್ವಪ್ರಯೋಗಕ್ಕೆ ಒಡ್ಡಿಕೊಂಡು ದೇಹವನ್ನು ಯಾವ ರೀತಿ ಬಲ್ಕ್‌ ಮಾಡಿ, ಹುರಿಗೊಳಿಸಿಬೇಕೆಂಬ ವಿದ್ಯೆ ಕರಗತ ಮಾಡಿಕೊಂಡಿದ್ದೇನೆ ಎಂದು 8 ಪ್ಯಾಕ್‌ ಮೈಕಟ್ಟಿನ ಗುಟ್ಟು ರಟ್ಟು ಮಾಡಿದರು ವಿನೋದ್‌.

ಹಾಸ್ಯ ನಟ ನಾಗರಾಜ್ ಬಗ್ಗೆಯೂ ವಿನೋದ್‌ ಮೆಚ್ಚುಗೆ ವ್ಯಕ್ತಪಡಿಸಿ, ಆತನೊಬ್ಬ ಸಹಜ ನಟ. ನಟನೆ ಬಗ್ಗೆ ಹೆಚ್ಚು ಗೊತ್ತಿಲ್ಲ ಆತನಿಗೆ. ಆದರೆ, ನಟನೆಗೆ ಗಮನ ಕೇಂದ್ರೀಕರಿಸಿದರೆ ಭವಿಷ್ಯದಲ್ಲಿ ಮುಂಚೂಣಿಯ ಕಮೆಡಿಯನ್‌ ಕಲಾವಿದನಾಗಿ ಹೊರಹೊಮ್ಮಲಿದ್ದಾರೆ ಎಂದು ಬೆನ್ನುತಟ್ಟಿದರು.

ರಗಡ್‌ ರಾಕ್‌

ನಮ್ಮ ಸಿನಿಮಾ ಜನರನ್ನು ತಲುಪಿದೆ. ಚಿತ್ರಮಂದಿರಗಳಲ್ಲಿ ರಗಡ್‌ ರಾಕ್‌ ಮಾಡುತ್ತಿದೆ. ರಾಜ್ಯದ 187 ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ. 2ನೇ ವಾರ ಎಂಟತ್ತು ಚಿತ್ರಮಂದಿರಗಳನ್ನು ಹೊರತುಪಡಿಸಿ ಉಳಿದೆಲ್ಲ ಚಿತ್ರಮಂದಿರಗಳಲ್ಲಿ ಸಿನಿಮಾ ಓಡಲಿದೆ. ಬಿಸಿ ಸೆಂಟರ್‌ಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದರು ಚಿತ್ರದ ನಿರ್ದೇಶಕ ಮಹೇಶ್‌ಗೌಡ.

ಮುಂದಿನ ಮೂರು ವಾರಗಳು ಯಾವುದೇ ಆಕ್ಸನ್‌ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಈ ಕಾರಣಕ್ಕೆ ನಮ್ಮ ಗಳಿಕೆಗೆ ತೊಂದರೆ ಇಲ್ಲ.  ನಮಗೆ ಎ ಸೆಂಟರ್‌ನ ಮಾಲ್‌ಗಳ ಮಲ್ಟಿಫ್ಲೆಕ್ಸ್‌ಗಳಲ್ಲಿ ಪ್ರೈಮ್‌ ಟೈಮ್‌ನಲ್ಲಿ ಅವಕಾಶ ಸಿಗುತ್ತಿಲ್ಲ. ಮಾಲ್‌ಗಳ ಮಾಲೀಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದೇವೆ. ಪ್ರೈಮ್‌ ಟೈಮ್‌ನಲ್ಲಿ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದರು.

‘ಲವರ್‌ ಬಾಯ್‌ ಮೂಡ್‌ನಿಂದ ನಮ್ಮನ್ನು ಆಕ್ಸನ್‌ ಬಾಯ್‌ ಮೂಡ್‌ಗೆ ರಗಡ್‌ ಸಿನಿಮಾ ತಂದಿದೆ. ಸಾಂಗು, ಫೈಟ್ಸ್‌ ಸೀನ್‌ಗಳು ಬಂದಾಗ ಥಿಯೇಟರ್‌ಗಳಲ್ಲಿ ಕೇಳಿಸುವ ಪ್ರೇಕ್ಷಕರ ಶಿಳ್ಳೆ, ಜೋಷ್‌ ಸಾರ್ಥಕತೆ ತಂದುಕೊಟ್ಟಿದೆ’ ಎಂದರು ಚಿತ್ರದ ಸಂಗೀತ ನಿರ್ದೇಶಕ ಅಭಿಮನ್ ರಾಯ್‌.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !