ಹೈದರಾಬಾದ್: ತೆಲುಗು ನಟ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ–2 ಚಿತ್ರ ಐದು ದಿನಗಳಲ್ಲಿ ₹922 ಕೋಟಿ ಗಳಿಕೆ ಕಂಡಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಸಂಬಂಧ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಲ್ಲು ಅರ್ಜುನ್ ಮಾಹಿತಿ ನೀಡಿದ್ದಾರೆ.

‘ಪುಷ್ಪ–2 ಚಿತ್ರ ಬಿಡುಗಡೆಗೊಂಡು ಮೊದಲ ಐದು ದಿನಗಳಲ್ಲಿ ₹922 ಕೋಟಿ ಗಳಿಸಿದೆ. ಸಿನಿಮಾ ಇತಿಹಾಸದಲ್ಲೇ ಅತಿ ವೇಗವಾಗಿ ₹900 ಕೋಟಿ ಗಳಿಸಿದ ಚಿತ್ರ ಇದಾಗಿದೆ‘ ಎಂದೂ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ತಿಳಿಸಿದೆ.
.ಪುಷ್ಪ 2 ಚಿತ್ರ ನೋಡಲು ಹೋದ ವ್ಯಕ್ತಿಯ ಮೃತದೇಹ ಚಿತ್ರಮಂದಿರದಲ್ಲಿ ಪತ್ತೆ.ಮತದಾರರ ಪಟ್ಟಿಯಿಂದ ಸಾಮೂಹಿಕವಾಗಿ ಹೆಸರು ಅಳಿಸಲು ಬಿಜೆಪಿ ಸಂಚು: ಕೇಜ್ರಿವಾಲ್.Pushpa-2 The Rule: ಪುಷ್ಪ–2 ಸಿನಿಮಾ ಮುಂಗಡ ಬುಕ್ಕಿಂಗ್ ಗಳಿಕೆ 100 ಕೋಟಿ?.ಪುಷ್ಪ–2 | ಮೂರನೇ ದಿನಕ್ಕೆ ₹500 ಕೋಟಿ ಗಳಿಕೆ: ನಿರ್ಮಾಪಕ.
ಪುಷ್ಪ–2 ಅತ್ಯುತ್ತಮ ಪ್ರದರ್ಶನ ಕಾಣುತ್ತಿದ್ದು, ಬುಕ್ಮೈಶೋದಲ್ಲಿ 10 ಲಕ್ಷ ಟಿಕೆಟ್ ಬುಕಿಂಗ್ ಆಗಿದೆ. ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು’ ಎಂದಿದೆ.

ಡಿ.4ರಂದು ವಿಶ್ವದಾದ್ಯಂತ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡು ಪ್ರದರ್ಶನ ಕಾಣುತ್ತಿದೆ.

ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಾರಗಳು ವಿಶೇಷ ಟಿಕೆಟ್ ದರವನ್ನು ವಿಧಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಎರಡೂ ಸರ್ಕಾರಗಳಿಗೆ ಧನ್ಯವಾದ ತಿಳಿಸಿದ ಅಲ್ಲು ಅರ್ಜುನ್, ಚಿತ್ರದ ಯಶಸ್ಸಿನ ಶ್ರೇಯಸ್ಸು ನಿರ್ದೇಶಕ ಸುಕುಮಾರ್ ಅವರಿಗೆ ಸಲ್ಲಬೇಕು ಎಂದಿದ್ದರು.

ಸುಕುಮಾರ್ ನಿರ್ದೇಶನದ ಪುಷ್ಪ-2 ಚಿತ್ರದಲ್ಲಿ ಎಎ ಜೊತೆ ಕನ್ನಡದ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಜಗಪತಿ ಬಾಬು, ಡಾಲಿ ಧನಂಜಯ ಸೇರಿದಂತೆ ಅನೇಕ ಖ್ಯಾತನಾಮರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಪುಷ್ಪ-1 ಚಿತ್ರವು 2021ರ ಡಿಸೆಂಬರ್ನಲ್ಲಿ ತೆರೆಕಂಡು ಸಾವಿರ ಕೋಟಿ ಕ್ಲಬ್ ಸೇರಿತ್ತು.
.ದೇಶದ ಪರಮಾಣು ಶಕ್ತಿ 2031ರ ವೇಳೆಗೆ ಮೂರು ಪಟ್ಟು ಹೆಚ್ಚಳ: ಸಚಿವ ಜಿತೇಂದ್ರ ಸಿಂಗ್.ದ್ವೇಷ ಭಾಷಣ ಆರೋಪ: ನ್ಯಾಯಮೂರ್ತಿ ಯಾದವ್ ವಿರುದ್ಧ ಗೊತ್ತುವಳಿ ಮಂಡಿಸಲು ಸಿದ್ಧತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.