ಅಂಬರೀಷ್‌ಗೆ ಚಂದನವನದ ಗೌರವ: ಸರಳವಾಗಿ ಹುಟ್ಟುಹಬ್ಬ ಆಚರಿಸಲು ನಟ ದರ್ಶನ್‌ ನಿರ್ಧಾರ

7
ಅಭಿಮಾನಿಗಳಿಗೆ ಮನವಿ ಮಾಡಿದ ಚಾಲೆಂಜಿಂಗ್ ಸ್ಟಾರ್‌

ಅಂಬರೀಷ್‌ಗೆ ಚಂದನವನದ ಗೌರವ: ಸರಳವಾಗಿ ಹುಟ್ಟುಹಬ್ಬ ಆಚರಿಸಲು ನಟ ದರ್ಶನ್‌ ನಿರ್ಧಾರ

Published:
Updated:

ಬೆಂಗಳೂರು: ‘ರೆಬೆಲ್‌ ಸ್ಟಾರ್’ ಅಂಬರೀಷ್‌ ಅವರ ನಿಧನದ ಹಿನ್ನೆಲೆಯಲ್ಲಿ ಚಂದನವನದ ಚಿತ್ರತಾರೆಯರು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ‘ರಾಕಿಂಗ್‌ ಸ್ಟಾರ್’ ಯಶ್‌ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಹಳೆಯ ಸುದ್ದಿ.

ಈಗ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಕೂಡ ಇದೇ ಹಾದಿ ತುಳಿದಿದ್ದಾರೆ. ಫೆಬ್ರುವರಿ 16ಕ್ಕೆ ದರ್ಶನ್ ಅವರು 42ನೇ ವಸಂತಕ್ಕೆ ಕಾಲಿಡಲಿದ್ದಾರೆ. ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ತೀರ್ಮಾನಿಸಿರುವ ಅವರು, ಈ ಕುರಿತು ತಮ್ಮ ಅಭಿಮಾನಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. 

‘ಈ ವರ್ಷ ಅಂಬಿ ಅಪ್ಪಾಜಿ ನಮ್ಮನ್ನು ಅಗಲಿ ದೂರವಾದ ಕಾರಣ ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ಬ್ಯಾನರ್, ಕೇಕ್ ಮತ್ತು ಹಾರಗಳನ್ನು ತರಬೇಡಿ’ ಎಂದು ಅಭಿಮಾನಿಗಳಿಗೆ ಟ್ವಿಟರ್‌ನಲ್ಲಿ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !