ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಬಳಿ ಮಾತನಾಡಬಹುದಿತ್ತು; ಪತ್ನಿ ಹೇಮಾ ಮಾಲಿನಿಗೆ ಧರ್ಮೇಂದ್ರ ಭಾವನಾತ್ಮಕ ಪೋಸ್ಟ್‌

Published 29 ಜೂನ್ 2023, 10:57 IST
Last Updated 29 ಜೂನ್ 2023, 10:57 IST
ಅಕ್ಷರ ಗಾತ್ರ

ಬಾಲಿವುಡ್‌ ಹಿರಿಯ ನಟ ಧರ್ಮೇಂದ್ರ (ಧರ್ಮ ಸಿಂಗ್‌ ದೇವಲ್‌) ಮತ್ತು ಪತ್ನಿ ಹೇಮಾ ಮಾಲಿನಿ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಅನುಮಾನಕ್ಕೆ ಸ್ವತಃ ಧರ್ಮೇಂದ್ರ ಅವರೇ ತೆರೆ ಎಳೆದಿದ್ದಾರೆ. ಪತ್ನಿ ಮತ್ತು ಮಕ್ಕಳ ಕುರಿತಂತೆ ಭಾವನಾತ್ಮಕ ಪೋಸ್ಟ್‌ ಹಾಕುವ ಮೂಲಕ ತಾವು ಕುಟುಂಬವನ್ನು ಪ್ರೀತಿಸುವುದಾಗಿ ತಿಳಿಸಿದ್ದಾರೆ.

ಇತ್ತೀಚೆಗೆ ಧರ್ಮೇಂದ್ರ ಅವರ ಮೊಮ್ಮಗ ಕರಣ್‌ ದೇವಲ್(ನಟ ಸನ್ನಿ ದೇವಲ್‌ ಮಗ) ಮದುವೆ ನಡೆದಿದ್ದು, ಈ ಮದುವೆಯಲ್ಲಿ ಧರ್ಮೇಂದ್ರ ಅವರು ಮಾತ್ರ ಭಾಗವಹಿಸಿದ್ದರು. ಹೇಮಾ ಮಾಲಿನಿ ಮತ್ತು ಮಕ್ಕಳಾದ ಇಶಾ ದೇವಲ್‌– ಅಹನಾ ದೇವಲ್ ಮದುವೆಗೆ ಗೈರಾಗಿದ್ದರು. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.

‘ಇಶಾ, ಅಹಾನ, ಹೇಮಾ ಎಲ್ಲ ನನ್ನ ಪ್ರೀತಿಯ ಮಕ್ಕಳೇ ನಾನು ನಿಮ್ಮನ್ನು ಇಷ್ಟ ಪಡುವುದರ ಜೊತೆಗೆ ನಿಮ್ಮನ್ನು ಗೌರವಿಸುತ್ತೇನೆ. ನಿಮ್ಮೊಂದಿಗೆ ಮಾತನಾಡಬಹುದಿತ್ತು ಎಂಬ ಸಂದೇಶವನ್ನು ವಯಸ್ಸು ಹಾಗೂ ಅನಾರೋಗ್ಯ ನೆನಪಿಸುತ್ತಿದೆ. ಆದರೆ....‘ ಎಂದು ಧರ್ಮೇಂದ್ರ ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಧರ್ಮೇಂದ್ರ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಮಗಳು ಇಶಾ ದೇವಲ್, ‘ಅಪ್ಪ ನಾವು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ‘ ಎಂದು ಬರೆದುಕೊಂಡಿದ್ದಾರೆ. ಪೋಸ್ಟ್‌ ಜೊತೆ ತಮ್ಮ ಮದುವೆಯ ಪೋಟೊವನ್ನು ಹಾಕಿದ್ದಾರೆ.

ಹಿನ್ನೆಲೆ

ಧರ್ಮೇಂದ್ರ ಅವರು ತಮ್ಮ ಮೊದಲ ಹೆಂಡತಿ ಮಗ ನಟ ಸನ್ನಿ ದೇವಲ್ ಅವರ ಮಗ ಕರಣ್‌ ದೇವಲ್ ಅವರ ಮದುವೆಯಲ್ಲಿ ಭಾಗವಹಿಸಿದ್ದರು. ಮೊಮ್ಮಗನ ಮದುವೆ ಅದ್ಧೂರಿಯಾಗಿ ನಡೆದಿದ್ದು, ಈ ವೇಳೆ ಎರಡನೇ ಹೆಂಡತಿ ಹೇಮಾ ಮಾಲಿನಿ ಮತ್ತು ಅವರ ಮಕ್ಕಳು ಗೈರಾಗಿದ್ದರು. ಇದರಿಂದ ಹೇಮ ಮಾಲಿನಿ ಮತ್ತು ಧರ್ಮೇಂದ್ರ ನಡುವೆ ಬಿರುಕು ಮೂಡಿದೆ ಎಂಬ ಗುಮಾನಿ ಹರಡಿತ್ತು.

ಈ ಸಂಬಂಧ ಇಂದು ಧರ್ಮೇಂದ್ರ ಪೋಸ್ಟ್‌ ಮಾಡಿ, ‘ನಿಮ್ಮ ಬಳಿ ಮಾತನಾಡಬಹುದಿತ್ತು‘ ಎಂದು ಹೇಳಿದ್ದರು.

ಧರ್ಮೇಂದ್ರ ಅವರಿಗೆ ಇಬ್ಬರು ಪತ್ನಿಯರಿದ್ದು, ಮೊದಲನೇ ಹೆಂಡತಿಗೆ ನಾಲ್ಕು ಮಕ್ಕಳು (ಸನ್ನಿ ದೇವಲ್‌, ಬಾಬಿ ದೇವಲ್‌ ಸೇರಿದಂತೆ ಇನ್ನಿಬ್ಬರು ಹೆಣ್ಣು ಮಕ್ಕಳು) ಹಾಗೂ ಎರಡನೇ ಹೆಂಡತಿ ಹೇಮಾ ಮಾಲಿನಿಗೆ ಇಬ್ಬರು ಮಕ್ಕಳು (ಇಶಾ ದೇವಲ್‌ ಮತ್ತು ಅಹನಾ ದೇವಲ್‌) ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT