ಶುಕ್ರವಾರ, ಅಕ್ಟೋಬರ್ 23, 2020
22 °C

ವಿಚಾರಣೆಗೆ ಕರೆದರೆ ಮತ್ತೆ ಬರುತ್ತೇನೆ: ನಟ ದಿಗಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡ್ರಗ್ಸ್‌ ಜಾಲ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರ ಮುಂದೆ ಎರಡನೇ ಬಾರಿ ಬುಧವಾರ ಹಾಜರಾದ ನಟ ದಿಗಂತ್ ವಿಚಾರಣೆ ಎದುರಿಸಿದರು.

ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಹಾಜರಾದ ದಿಗಂತ್ ಅವರನ್ನು ಸತತ ಮೂರು ಗಂಟೆಗಳ ಕಾಲ ಅಧಿಕಾರಿಗಳು ವಿಚಾರಣೆ ನಡೆಸಿದರು.

ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ದಿಗಂತ್, ‘ಸಿಸಿಬಿ ವಿಚಾರಣೆಗೆ ಇವತ್ತೂ ಸಹಕಾರ ನೀಡಿದ್ದೇನೆ. ಮುಂದಿನ ವಿಚಾರಣೆಗೆ ಕರೆದರೆ ಮತ್ತೆ ಬರುತ್ತೇನೆ’ ಎಂದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಗಂತ್ ಹಾಗೂ ಪತ್ನಿ ಐಂದ್ರಿತಾ ರೇ ಅವರನ್ನು ಸಿಸಿಬಿ ಅಧಿಕಾರಿಗಳು ಸೆ.16ರಂದು ವಿಚಾರಣೆ ನಡೆಸಿದ್ದರು. ಅಗತ್ಯವಿದ್ದರೆ ಮತ್ತೊಂದು ದಿನ ವಿಚಾರಣೆ ನಡೆಸುವುದಾಗಿ ತಿಳಿಸಿದ್ದರು.

ವಿಚಾರಣೆ ವೇಳೆ ದಿಗಂತ್ ಮತ್ತು ಐಂದ್ರಿತಾರ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದ ಸಿಸಿಬಿ, ಅದರಲ್ಲಿದ್ದ ಮಾಹಿತಿಗಳನ್ನು ವಶಕ್ಕೆ ಪಡೆದಿದೆ. ಕಳೆದ ವಿಚಾರಣೆಯಲ್ಲಿ ದಿಗಂತ್ ನೀಡಿದ್ದ ಹೇಳಿಕೆಗಳನ್ನು ಆಧರಿಸಿ ಸಿಸಿಬಿ ಅಧಿಕಾರಿಗಳು ಮತ್ತೆ ವಿಚಾರಣೆ ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು