ಶುಕ್ರವಾರ, ಫೆಬ್ರವರಿ 26, 2021
20 °C

ನಿರ್ದೇಶಕ ನಿಶಿಕಾಂತ್ ಕಾಮತ್‌ ಬದುಕಿದ್ದಾರೆ: ನಟ ರಿತೇಶ್ ದೇಶ್‌ಮುಖ್ ಟ್ವೀಟ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮುಂಬೈ:  ಬಾಲಿವುಡ್‌ನ ‘ದೃಶ್ಯಂ’ ಖ್ಯಾತಿಯ ನಿರ್ದೇಶಕ ನಿಶಿಕಾಂತ್ ಕಾಮತ್ ನಿಧನರಾಗಿಲ್ಲ ಎಂದು ನಟ ರಿತೇಶ್ ದೇಶ್‌ಮುಖ್ ಟ್ವೀಟಿಸಿದ್ದಾರೆ.

ನಿಶಿಕಾಂತ್ ಕಾಮತ್ ಅವರಿಗೆ ವೆಂಟಿಲೇಟರ್ ನೆರವು ನೀಡಲಾಗಿದೆ. ಅವರು ಬದುಕಿದ್ದಾರೆ ಮತ್ತು ಹೋರಾಡುತ್ತಿದ್ದಾರೆ. ಅವರಿಗಾಗಿ ಪ್ರಾರ್ಥಿಸೋಣ ಎಂದಿದ್ದಾರೆ ರಿತೇಶ್. 

ನಿಶಿಕಾಂತ್ ಅವರು ನಿಧನರಾಗಿಲ್ಲ. ಅವರು ಬದುಕಿದ್ದಾರೆ. ವೆಂಟಿಲೇಟರ್ ಸಹಾಯ ನೀಡಲಾಗಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದೆ. ( ವರದಿಗಾರರಿಂದ ಖಚಿತ ಪಡಿಸಿಕೊಳ್ಳುವ ಮುನ್ನವೇ  ಸುದ್ದಿಗಳನ್ನು ಮೊದಲು ಅಪ್‍ಲೋಡ್ ಮಾಡುವ ಹಪಾಹಪಿ ಇದು ಎಂದು ದೀಪಾಂಜನ ಎಂಬವರು ಟ್ವೀಟಿಸಿದ್ದಾರೆ.

 

 

2005ರಲ್ಲಿ ಮರಾಠಿಯ ‘ದೊಂಬಿವಾಲಿ ಫಾಸ್ಟ್‌’ ಸಿನಿಮಾದ ಮೂಲಕ ನಿಶಿಕಾಂತ್ ನಿರ್ದೇಶನದ ಹಾದಿ ಹಿಡಿದಿದ್ದರು. ಈ ಸಿನಿಮಾ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿತ್ತು. 

2004ರ ‘ಹವಾ ಆನೇ ದೇ’ ಇವರ ನಟನೆಯ ಚೊಚ್ಚಲ ಸಿನಿಮಾ. 2008ರ ‘ಮುಂಬೈ ಮೇರಿ ಜಾನ್’ ಸಿನಿಮಾದ ಮೂಲಕ ನಟ–ನಿರ್ದೇಶಕನಾಗಿ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು. ’ದೊಂಬಿವಾಲಿ ಫಾಸ್ಟ್‌’, ‘ಮುಂಬೈ ಮೇರಿ ಜಾನ್‌’, ‘ರಾಕಿ ಹ್ಯಾಂಡ್‌ಸಮ್‌’, ‘ಫೋರ್ಸ್‌’, ‘ಮದಾರಿ’, ‘ದೃಶ್ಯಂ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

‘ಡ್ಯಾಡಿ’, ‘ರಾಕಿ ಹ್ಯಾಂಡ್‌ಸಮ್‌’, ‘ಜ್ಯೂಲಿ 2‘ ಹಾಗೂ ‘ಭಾವೇಶ್ ಜೋಶಿ’ ಸಿನಿಮಾಗಳಲ್ಲಿ ತಮ್ಮ ನಟನಾ ಚಾತುರ್ಯವನ್ನು ತೋರಿದ್ದರು ನಿಶಿಕಾಂತ್. ಸಿನಿಮಾಗಳಿಗೆ ಮಾತ್ರ ತಮ್ಮನ್ನು ಸೀಮಿತವಾಗಿರಿಸಿಕೊಳ್ಳದ ಇವರು ವೆಬ್‌ ಸರಣಿಗಳನ್ನು ನಿರ್ಮಾಣ ಮಾಡಿದ್ದರು. ’ದಿ ಫೈನಲ್ ಕಾಲ್’ ಹಾಗೂ ’ರಂಗ್‌ಬಾಝ್ ಫಿರ್‌ಸೇ’ ಇವರು ನಿರ್ಮಾಣ ಮಾಡಿದ ವೆಬ್‌ಸರಣಿಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು