ಮಂಗಳವಾರ, ಆಗಸ್ಟ್ 3, 2021
23 °C

ಎಷ್ಟೇ ಹೋರಾಟ ಮಾಡಿದ್ರು ನಿನ್ನ ಉಳಿಸ್ಕೊಳಕ್ ಆಗ್ಲಿಲ್ಲ: ನಿರ್ದೇಶಕ ಪ್ರೇಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಸ್ಯಾಂಡಲ್‌ವುಡ್ ನಟ, ನಿರ್ದೇಶಕ ಪ್ರೇಮ್ ಅವರ ತಾಯಿ ಭಾಗ್ಯಮ್ಮ (75) ಅವರು ನಿಧನರಾಗಿದ್ದು, ನಾನ್ ಎಷ್ಟೇ ಹೋರಾಟ ಮಾಡಿದ್ರು ಕೊನೆಗೂ ನಿನ್ನನ್ನ ಉಳಿಸ್ಕೊಳಕ್ ಆಗ್ಲಿಲ್ಲ ಎಂದು ಪ್ರೇಮ್ ನೋವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಾನ್ ಎಷ್ಟೇ ಹೋರಾಟ ಮಾಡಿದ್ರು ಕೊನೆಗೂ ನಿನ್ನನ್ನ ಉಳಿಸ್ಕೊಳಕ್ ಆಗ್ಲಿಲ್ಲ.. ನಿನ್ನ ಋಣ ತೀರ್ಸೋಕ್ ಮತ್ತೆ ನಿನ್ ಹೊಟ್ಟೇಲಿ ಹುಟ್ಟಕ್ಕ್ ನಂಗ್ ಒಂದ್ ಅವಕಾಶ ಮಾಡ್ಕೊಡು, ಯಾವತ್ತು ಕಾಯ್ತಿರ್ತೀನಿ.. ಮಿಸ್ ಯು ಅಮ್ಮ.. ಎಂದು ಬರೆದುಕೊಂಡಿದ್ದಾರೆ.

ಭಾಗ್ಯಮ್ಮ ಅವರು ಕೆಲ ತಿಂಗಳಿನಿಂದ ಲ್ಯುಕೇಮಿಯಾ (ರಕ್ತ ಕ್ಯಾನ್ಸರ್) ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹೀಗಾಗಿ ಬೆಂಗಳೂರಿನ ಜಯನಗರದ ಶಾಂತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮ್ ಅವರ ತಾಯಿ ಶುಕ್ರವಾರ ರಾತ್ರಿ (ಜುಲೈ 17) ಸುಮಾರು 9 ಗಂಟೆಗೆ ನಿಧನರಾಗಿದ್ದಾರೆ.

ಭಾಗ್ಯಮ್ಮ ಅವರಿಗೆ ಕೋವಿಡ್ ಪರೀಕ್ಷೆ ಮಾಡಿಸಿದ್ದು, ವರದಿ ನೆಗೆಟಿವ್ ಬಂದಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇನ್ನು ಈ ಕುರಿತು ಟ್ವೀಟ್ ಮಾಡಿರುವ ನಟ ಜಗ್ಗೇಶ್, ತಾಯಿಗಿಂತ ದೇವರಿಲ್ಲಾ! ಆ ದೇವರು ಮರೆಯಾದಾಗ ಆಗುವ ನೋವು ಏನು ಎಂದು ಅನುಭವಿಸಿದವ ನಾನು! ವಿಶ್ವದಲ್ಲಿ ಯಾವ ದೇವರು ಅಮ್ಮನ ಸಮವಲ್ಲಾ! ಸಾಧಕನ ಯೋಗ ತಾಯಿಯ ಆಶೀರ್ವಾದ ಫಲವೇ ವಿನಃ ಬೇರೆ ಯಾವ ದೇವರ ಫಲವು ಅಲ್ಲಾ! ಆ ದೇವರ ಕಳೆದುಕೊಂಡ ನಿಮಗೆ ದುಃಖ ತಡೆಯುವ ಶಕ್ತಿ ದೇವರು ನೀಡಲಿ... ಓಂಶಾಂತಿ.. ಎಂದು ಪ್ರೇಮ್‌ಗೆ ಸಾಂತ್ವನ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು